ಜಿಲ್ಲಾ ಸುದ್ದಿಗಳು

ಮಂಡ್ಯ: ಏ.25ರಂದು ಯುಗಾದಿ ಪುರಸ್ಕಾರ-ಕವಿಗೋಷ್ಠಿ-ಪ್ರತಿಭಾ ಪ್ರದರ್ಶನ

ಮಂಡ್ಯ: ಹೊಸ ವರ್ಷದ ಅಂಗವಾಗಿ ಯುಗಾದಿ ಪುರಸ್ಕಾರ- ಕವಿಗೋಷ್ಠಿ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಮಂಡ್ಯದ ಗಾಂಧಿಭವನದಲ್ಲಿ ಏ.25ರಂದು ಭಾನುವಾರ ನಡೆಯಲಿದೆ.

ಶ್ರೀರಂಜಿನಿ ಕಲಾವೇದಿಕೆ ಮಂಡ್ಯ, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕೃಷಿಕ್ ಲಯನ್ಸ್ ಮಂಡ್ಯ ಮತ್ತು ಇನ್ನಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಗೆ ಲಯನ್ಸ್ ಜಿಲ್ಲಾ ಗವರ್ನರರ ಕಾರ್ಯಕ್ರಮ ಸಂಯೋಜಕರಾದ ಲ| ಬಿ.ಎಂ ಅಪ್ಪಾಜಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿದ್ಯಾವಾಚಸ್ಪತಿ ಡಾ. ಎಚ್‌.ಪಿ ಮೋಹನ್‌ಕುಮಾರ್ ಅಧ್ಯಕ್ಷತೆವಹಿಸಲಿದ್ದಾರೆ.

ಚಂದ್ರಮೌಳಿ ಬೆಂಗಳೂರು (ಸಾಹಿತ್ಯ), ಕರೀಮುಲ್ಲಾ ನಾಗಮಂಗಲ (ಸಂಶೋಧಕರು), ಸ್ವಾಮಿ (ಶಿಕ್ಷಣ), ಕನ್ನಿಕಾ (ನವೋದಯ ಶಿಕ್ಷಣ) ಇವರನ್ನು ಈ ಸಂದರ್ಭದಲ್ಲಿ ಯುಗಾದಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಇದೇ ಸಂದರ್ಭದಲ್ಲಿ ದೂರದರ್ಶನ-ಆಕಾಶವಾಣಿ ಕಲಾವಿದರಾದ ಕಲಾಶ್ರೀ ವಿದ್ಯಾಂಶಕರ್ ಅವರು ನಡೆಸುತ್ತಿರುವ ಮಂಡ್ಯದ ಶ್ರೀ ಶಂಕರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಗಾಯನ, ಕೀಬೋರ್ಡ್ ವಾದನ ಜರಗಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಹಾವೇರಿ :ಶಾಲಾ ಕಾಮಾಗಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು 3 ಮಕ್ಕಳು ಸಾವು

Harshitha Harish

ಆಧ್ಯಾತ್ಮಿಕತೆಯಿಂದ ವಿಶ್ವದಲ್ಲಿ ಬದಲಾವಣೆ ತೋರಿಸಿಕೊಟ್ಟ ಸಂತ ವಿವೇಕಾನಂದರು: ಯಾದವ ಕೃಷ್ಣ ಅಭಿಮತ

Upayuktha

ಮಡಿಕೇರಿ, ಅರಕಲಗೂಡುಗಳಲ್ಲಿ ಭಾರೀ ಪ್ರಮಾಣದ ಆಲಿಕಲ್ಲು ಮಳೆ, ಅಪಾರ ಬೆಳೆ ಹಾನಿ

Upayuktha