ಕ್ಷೇತ್ರಗಳ ವಿಶೇಷ ನಗರ ಪ್ರಮುಖ ಸ್ಥಳೀಯ

ಮಲ್ಲಿಗೆಯ ಚೆಂಡಿನ ರಾಶಿಯಲ್ಲಿ ಶೋಭಿತ ಶ್ರೀ ಮಂಗಳಾದೇವಿಗೆ ಶಯನ ಮಹಾಪೂಜೆ

ಮಂಗಳೂರು: ಶ್ರೀ ಮಂಗಳಾದೇವಿ ಅಮ್ಮನ ಶಯನಕ್ಕೆ ದ.ಕ ದೇಗುಲಗಳ ಪೈಕಿ ವಿಶೇಷ ಸ್ಥಾನವಿದೆ. ಕಳೆದ ಸಾಯಂಕಾಲದಿಂದ ರಾತ್ರಿಯ ವರೆಗೂ ಸಾವಿರಕ್ಕೂ ಮಿಗಿಲಾಗಿ ದೇವಿಗೆ ಅರ್ಪಿತವಾದ ಮಲ್ಲಿಗೆಯ ಚೆಂಡುಗಳೇ ಇದಕ್ಕೆ ಸಾಕ್ಷಿ. ಸಾವಿರಗಟ್ಟಲೆ ಮಲ್ಲಿಗೆ ಚೆಂಡು ಬಂದ ಹಿನ್ನೆಲೆಯಲ್ಲಿ ದೇವಾಲಯದ ಒಳಾಂಗಣದ ಹೊರಭಾಗದ ಸುತ್ತು ಪೌಳಿಯ ಸುತ್ತ ಮಲ್ಲಿಗೆಯನ್ನು ಇಡಲಾಗಿತ್ತು. ಹೀಗಾಗಿ ಸಂಪೂರ್ಣ ದೇವಸ್ಥಾನದಲ್ಲಿ ಮಲ್ಲಿಗೆಯ ಪರಿಮಳವೇ ಮನ ತಣಿಸುವಂತಿತ್ತು. ಕಳೆದ ರಾತ್ರಿ ರಥ ಸವಾರಿ ಉತ್ಸವದಿಂದ ಸಂತುಷ್ಟಳಾಗಿ ಗರ್ಭಗೃಹವನ್ನು ಸೇರಿ ಮಹಾಪೂಜೆಯನ್ನು ಸ್ವೀಕರಿಸಿದೊಡನೆಯೇ ‘ಶ್ರೀ ಭೂತಬಲಿ’ಯ ಬಳಿಕ ತಾಯಿಯ ಶಯನೋತ್ಸವವು ಪ್ರಾರಂಭವಾಯಿತು.

ಕಿರೀಟವನ್ನು ,ಸ್ವರ್ಣ ದೃಷ್ಟಿ ನೇತ್ರವನ್ನು ತೊಡಿಸಿ, ಆಭರಣಾದಿಗಳಿಂದ ಅಲಂಕೃತಳಾಗಿ ಪುಷ್ಪಮಾಲೆ ಧರಿಸಿ ರಾರಾಜಿಸಿದಾಗ ಬಹು ಭಕ್ತ ಭಾವುಕರು ಆನಂದ ಭಾಷ್ಪ ಸುರಿಸಿ, ಧನ್ಯತೆಯ ಕ್ಷಣಗಳನ್ನು ಅನುಭವಿಸಿದರು. ಮಹಾ ಮಂಗಳಾರತಿ ಯಾಗುತ್ತಿದ್ದಂತೆ ಪರಾಕಾಷ್ಠೆ ಸುವಾಸನೆಯ ತೆರದೆ ಪ್ರತಿಧ್ವನಿಸುವಂತಿತ್ತು.

ಶಾಂತಿ ಸಂಪನ್ನತೆಯಿಂದ ಆಗತಾನೆ ಹಚ್ಚಿದ ಧೂಪ ದೀಪಗಳ, ಪುಷ್ಪಾಲಂಕಾರ ಸುವಾಸನೆಯ ಸೊಬಗಿನೊಂದಿಗೆ ಹರಿವಾಣಗಳಲ್ಲಿ ಹಣ್ಣು,ನೈವೇದ್ಯ ಫಲ ಪುಷ್ಪಗಳನ್ನಿಟ್ಟು ‘ಮೊಳಕೆಯೊಡೆದ ಅಂಕುರ’ಗಳನ್ನು ದೇವಿಯ ಪದತಲದಲ್ಲಿಟ್ಟು ಬಿಂಬದ ಶಯನಾಲಂಕಾರವನ್ನು ಶ್ವೇತ ವರ್ಣದ ವಸ್ತ್ರದಿಂದ ದೇವಿಗೆ ಹೊದಿಸಿ ಬಿಡಲಾಯಿತು.

ಇಂದಿನ ಪ್ರಾತಃಕಾಲದ ವೇಳೆ 6.46ರ ಇಂದಿನ ಪ್ರದೋಷ ಕಾಲಕ್ಕೆ ಸರ್ವಾಲಂಕಾರಯುಕ್ತಳಾಗಿ ನಿನ್ನೆಯ ರಾತ್ರಿಯ ದಿನ ಕವಾಟಬಂಧನವಾಗಿ ಸವಿ ನಿದ್ರೆಗೆ ಜಾರಿದ ಮಂಗಳೆಯು ಅರುಣೋದಯದ ವೇಳೆ ಇಂದಿನ ಪ್ರದೋಷ ಕಾಲಕ್ಕೆ ಬಿಂಬದಲ್ಲಿ ಸದಾ ಸನ್ನಿಹಿತಳಾಗಿ ದಿವ್ಯರೂಪದ ಮಂಗಳದರ್ಶನದ ಸೌಭಾಗ್ಯವನ್ನು ದಯಪಾಲಿಸುವಂತೆ ತಾಯಿಯಲ್ಲಿ ಪ್ರಾರ್ಥಿಸಿ ಮಂಗಳ ದರ್ಶನದ’ ಪರಮ ಭಾಗ್ಯವನ್ನು ಕೃಪೆತೋರಿ ಅನುಗ್ರಹಿಸಿ ಸರ್ವರನ್ನೂ ಉದ್ಧರಿಸಿ ಆಶಿರ್ವದಿಸಬೇಕೆಂಂದು ಭಕ್ತಿಯಿಂದ ಪ್ರಾರ್ಥನೆ’ ಯೊಂದಿಗೆ ದೇವಿಯ ಮುಖ ಮಂಟಪದ ಪ್ರವೇಶ ಕವಾಟವನ್ನು(ಬಾಗಿಲು)ತೆರೆಯುವದರೊಂದಿಗೆ ಗರ್ಭಗೃಹದ ಬಳಿಯಿರುವ ಎರಡೂ ತೂಗು ಘಂಟೆಗಳನ್ನು ಜೋರಾಗಿ ಹೊಡೆದು ದೇವಿಗೆ ಹೊದಿಸಲಾದ ಶ್ವೇತವರ್ಣದ ವಸ್ತ್ರವನ್ನು ಸರಿಸುತ್ತಿದ್ದಂತೆಯೇ, ತಾಯಿಯ ಬಿಂಬಕ್ಕೆ ಹಾಗು ಉತ್ಸವ ಮೂರ್ತಿಗೆ ನೇರ ದರ್ಪಣ (ಕನ್ನಡಿ)ವನ್ನು ದೇವಿ ಪ್ರತಿಬಿಂಬದಲ್ಲಿ ತನ್ನ ಶಯನಾಲಂಕಾಲದ ದರ್ಶನವನ್ನು ಪಡೆದು, ಅವಳ ಆ ವಿನೂತನ ಮಹಾರಾಣಿಯಂತೆ ಸುಶೋಭಿತಳಾದ ಶಯನಾಲಂಕಾರದ ಮಂಗಲ ದರ್ಶನವನ್ನು ಕಂಡೊಡನೆಯೇ ಮಹಿಮಾನ್ವಿತಳ ಅನುಗ್ರಹದಿಂದ ನಮ್ಮಲಿನ ಸಂಕಷ್ಟಾದಿಗಳು ನಿಮಿಷಾರ್ಧದಲ್ಲೇ ನಿವೃತ್ತಿ ಹೊಂದುವುವು.

‘ಶಯನ’ಎಂಬ ಪದವು ಸಂಸ್ಕೃತ ಭಾಷಾ ಸಾಹಿತ್ಯದ ಪದವಾಗಿದ್ದು’ನಿದ್ರೆ’ ಅಥವಾ ‘ನಿದ್ರಾಭಂಗಿ’ ಎಂದರ್ಥ.
ಸಂಪೂರ್ಣ ದೇವಿಯ ಆವಾಸಸ್ಥಾನ ಮಲ್ಲಿಗೆಯಿಂದ ತುಂಬಿ, ಈ ಮಲ್ಲಿಗೆಯ ತಲ್ಪದ ಸುಪ್ಪತ್ತಿಗೆಯಲ್ಲಿ ಪರಿವೇಯಿಲ್ಲದೆ ಮಂಗಳಾಂಬೆಯು ಏಕಾಂತ ಸ್ಥಿತಿಯಲ್ಲಿ ಸುಖ ನಿದ್ದೆಗೆ ಜಾರುತ್ತಾಳೆ ಎಂಬುದು ನಂಬಿಕೆ. ಅದೇ ಪ್ರಕಾರ ಗರ್ಭಗೃಹದ ಕವಾಟ ಬಂಧನವು ನಡೆದು, ದೇವಿಯ ಶಯನವು ಆರಂಭವಾಗುತ್ತದೆ.

ಶಂಖ, ಜಾಗಟೆ, ಚೆಂಡೆ, ಗೋಪುರ ಘಂಟಾನಾದ ಸಹಿತ ಸರ್ವವಾದ್ಯ ಘೋಷಗಳ ಮೊಳಗಿಸಿ ಶಯನ ಸೇವೆಯಲ್ಲಿ ತಲ್ಲೀನಳಾಗಿ ನಿದ್ರಾಸನಸ್ತಿತಳಾದ ತಾಯಿಯನ್ನು ಎಚ್ಚರ ಗೊಳಿಸಲಾಗುತ್ತದೆ. ಬಳಿಕ ನಿರಾಲಂಕಾರಳಾದ ಸೌಂದರ್ಯ್ಯೆಗೆ ನಿತ್ಯಾನುಷ್ಟಾನದಂತೆ ನೈರ್ಮಲ್ಯ, ಅಭಿಷೇಕಾದಿಗಳು ನಡೆದು, ಪೂರ್ವದಲ್ಲಿ ನಡೆಸಿದ ತೆರನಾಗಿಯೇ ಶಯನಾಲಂಕಾರವನ್ನು ನೆರವೇರಿಸಲಾಗುತ್ತದೆ.

ಪ್ರೀತಿಯಿಂದ ಅರ್ಪಿಸಿದ ಮಲ್ಲಿಗೆಯ ಮಂಟಪದಲ್ಲಿ ಸುಖ ನಿದ್ರಾಸನಸ್ಥಿತಳಾದ ಶ್ರೀದೇವಿ, ಅರುಣೋದಯದ ಮಹಾಪೂಜೆಯ ಬೆಳಕಲ್ಲಿ ತೇಜೋಮಯ ಕಾಂತಿಯುಕ್ತಳಾಗಿ ಮಂಗಳೆಯು ಬಿಂಬರೂಪದಲ್ಲಿ ದರ್ಶನವನ್ನೀಯುವ ಆ ಸೊಬಗನ್ನು ನೋಡಲೆಂದೇ ಕಾದಿದ್ದ ಸರ್ವರಿಗೂ ಮಲ್ಲಿಗೆಯ ಸುವಾಸನೆಯ ಘಮದೊಂದಿಗೆ ದೇವಿಯ ಶಯನಾಲಂಕಾರ ದರ್ಶನವಾಗುತ್ತದೆ. ಶಯನ ಮಹಾಪೂಜೆಯ ಮಂಗಳಾರತಿಯ ಬೆಳಕಲ್ಲಿ ತೇಜೋಮಯ ಕಾಂತಿಯುಕ್ತನಾಗಿ ದರ್ಶನವನ್ನೀಯುವ ಮಂಗಳಾಂಬಿಕೆಯ ತೇಜೋ ರೂಪವನ್ನು ಕಣ್ತುಂಬಿಕೊಳ್ಳಲು ತವಕಿಸಿದ ಸರ್ವರಿಗೂ ಮಲ್ಲಿಗೆಯ ಸುವಾಸನೆಯೊಂದಿಗೆ ತಾಯಿಯ ಶಯನಾಲಂಕಾರ ದರ್ಶನವಾಯಿತು.

ಹೃದಯಂಗಮ ರಮಣೀಯ ದೃಶ್ಯಗಳಿಂದ, ಸರ್ವ ವಾದ್ಯ ನಿನಾದಗಳಿಂದ, ಮಲ್ಲಿಗೆಯ ಸೌರಭದ ಸಂಗಮದಿಂದ ಬಹುಖ್ಯಾತಿಯನ್ನು ಪಡೆದ ಶಯನ ಸೇವೆಯ ಬಳಿಕ ತಾಯಿಗೆ ಮಹಾಪೂಜೆಯು ನಡೆದು ಸಂತೋಷದಿಂದ ದೇವಿಯ ತೇಜೋ ರೂಪವನ್ನು ಕಣ್ತುಂಬಿಕೊಂಡ ನಂತರ ‘ಅಷ್ಟಾವಧಾನ’ ಸೇವೆಯೊಂದಿಗೆ ,ದೇವಿಯ ಬಲಿ ಹೊರಟು ದೇವಳದ ಒಳ ಹಾಗ ಹೊರ ಪ್ರಾಂಗಣದ ಬಲಿಗಲ್ಲಿಗೂ ಶಯನದ ಹೂವುಗಳು ಸಲ್ಲುತ್ತವೆ. ಶಯನಾಲಂಕಾರದ ಹೂವುಗಳನ್ನು ಮಹಾ ಪ್ರಸಾದವಾಗಿ ನೆರೆಯಲ್ಪಟ್ಟ ಭಕ್ತಾದಿಗಳಿಗೆ ನೀಡಲಾಗುತ್ತದೆ.

ಶಯನೋತ್ಸವದಿ ತಾಯಿಯು ಪುಷ್ಪ ರಾಶಿಯಲ್ಲಿ ತಲ್ಲೀನಳಾಗಿ ಪವಡಿಸಿದ ವರ್ಣನಾತೀತ ದರ್ಶನ ಭಾಗ್ಯವನ್ನು ಕಂಡೇ ಮನಸ್ಸು ಪ್ರಫುಲ್ಲ ಸುಮನಸವಾಗಿ ದೇವಿಯಲ್ಲಿ ಅರ್ಪಿತವಾಗುವುದು. ಈ ವಿಶೇಷ ಶಯನ ಸೇವೆಗೆಂದೇ ಭಕ್ತರು ಮಂಗಳಾಂಬಿಕೆಗೆ ಭಕ್ತಿ ಗೌರವದಿಂದ ಮಲ್ಲಿಗೆಯನ್ನುಅರ್ಪಿಸಿ ಕೃತಾರ್ಥರಾದರು. ಶ್ರೀ ದೇವಿಯ ಶಯನೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಸಿಕೊಂಡು ಧನ್ಯರಾಗಿ ದೇವಿಯ ಕೃಪೆಗೆ ಪಾತ್ರಾದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ದಕ ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ದಿನಸಿ, ತರಕಾರಿ, ಹಣ್ಣಿನಂಗಡಿ ಓಪನ್

Upayuktha

ಕಾಲಿನ ಬೆರಳಿನಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಬಂಟ್ವಾಳದ ಕೌಶಿಕ್‌ಗೆ ಶಿಕ್ಷಣ ಸಚಿವರ ಮೆಚ್ಚುಗೆ

Upayuktha

ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದೇಕೆ? ಏನಿದು ಸೈಲೆಂಟ್ ಹೈಪೋಕ್ಸಿಯಾ?

Upayuktha

Leave a Comment