ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯದ ಬಳಿಯಿರುವ ಸುಮಾರು 300 ವರ್ಷಗಳಷ್ಟು ಹಳೆಯ, ಪವಿತ್ರ ಅಶ್ವತ್ಥ ವೃಕ್ಷ ಇಂದು ಬೆಳ್ಗೆ 8 ಗಂಟೆ ಸುಮಾರಿಗೆ ಧರೆಗುರುಳಿದೆ. ಮರ ಉರುಳಿ ಬಿದ್ದ ಪರಿಣಾಮ ಒಂದು ಕಾರು, ಒಂದು ಕ್ರೇನ್ ಹಾಗೂ ಒಂದು ನೀರಿನ ಟ್ಯಾಂಕರ್ ಹಾನಿಗೀಡಾಗಿದೆ.
8 ಗಂಟೆ ಸುಮಾರಿಗೆ ಅಲ್ಲಿದ್ದ ಹೆಚ್ಚಿನವರಿಗೆ ಕಿರ್ರೆಂಬ ಶಬ್ದ ಕೇಳಿದ್ದು, ನೋಡು ನೋಡುತ್ತಿದ್ದಂತೆ ಮರ ಏಕಾಏಕಿ ರಸ್ತೆ ಕಡೆ ವಾಲಿಕೊಂಡು ಧರೆಗರುಳಿದೆ. ಮರ ಇನ್ನೊಂದು ಕಡೆ ಉರುಳುತ್ತಿದ್ದರೆ ಶ್ರೀ ವೆಂಕಟರಮಣ ದೇಗುಲ, ಸ್ಕೂಲ್ ಬುಕ್ ಕಂಪೆನಿ ಕಟ್ಟಡ ಸೇರಿ ಮತ್ತೊಂದು ಸಣ್ಣ ಕಟ್ಟಡಕ್ಕೂ ಹಾನಿಯಾಗುತ್ತಿತ್ತು. ಅದೃಷ್ಟವಶಾತ್ ಮರ ರಸ್ತೆಯ ಕಡೆ ಉರುಳಿರುವ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸಾಕಷ್ಟು ಧಾರ್ಮಿಕ ಹಿನ್ನೆಲೆ ಇರುವ ಈ ಮರ ಶ್ರೀ ವೆಂಕಟರಮಣ ದೇಗುಲದ ರಥೋತ್ಸವ ಸೇರಿ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಶನಿಪೂಜೆ, ಸಾರ್ವಜನಿಕ ಯಕ್ಷಗಾನ ಬಯಲಾಟ ಮುಂತಾದ ಸಾಕಷ್ಟು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷೀಭೂತವಾಗಿವೆ.
ಇಲ್ಲಿನ ಅಶ್ವತ್ಥ ಮರಕ್ಕೆ ದೀರ್ಘ ಕಾಲದ ಇತಿಹಾಸವಿದೆ. ಹಳೆಯದಾದ ಈ ವೃಕ್ಷ ಸಾರ್ವಜನಿಕರಿಗೆ, ಸಿಟಿ ಬಸ್ ಕಾಯುವವರಿಗೆ, ಟ್ಯಾಕ್ಸಿ ಚಾಲಕರಿಗೆ ನೆರಳಿನ ಆಶ್ರಯ ನೀಡುತ್ತಿತ್ತು. ಇದರೊಂದಿಗೆ ಇಡೀ ರಥಬೀದಿ ಪರಿಸರಕ್ಕೆ ಶುದ್ದಗಾಳಿ ಒದಗಿಸುತ್ತಿತ್ತು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ