ಮಂಗಳೂರು: ನವ ಮಂಗಳೂರಿನ ಪಶ್ಚಿಮ ಭಾಗದ ತೀರದಲ್ಲಿ 11 ಮೀನುಗಾರರನ್ನು ಸೋಮವಾರ ಭಾರತೀಯ ಕರಾವಳಿ ಪಡೆ ರಕ್ಷಣೆ ಮಾಡಿದೆ. ಸಿಲಿಂಡರ್ ಸ್ಫೋಟದಿಂದ ದೋಣಿಗಳು ಸ್ಫೋಟಗೊಂಡು ಬೆಂಕಿ ಹತ್ತಿಕೊಂಡು ಮೀನುಗಾರರು ಸಿಕ್ಕಿ ಹಾಕಿ ಕೊಂಡಿದ್ದರು.
ಈ ಘಟನೆ ಬಗ್ಗೆ ಮಾಹಿತಿಯನ್ನು ನೀಡಿರುವ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ದೋಣಿಯಲ್ಲಿದ್ದ ಸಿಲಿಂಡರ್ ಸ್ಫೋಟ ಗೊಂಡಿದ್ದು, ಭಾರತೀಯ ಕರಾವಳಿಯ ರಕ್ಷಣಾ ಪಡೆಯವರು ಎಲ್ಲಾ 11 ಮೀನುಗಾರರನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ದೋಣಿಯಲ್ಲಿದ್ದ ಸಿಲಿಂಡರ್ ಸ್ಫೋಟವಾಗಿದ್ದು, ಭಾರತೀಯ ಕರಾವಳಿಯ ರಕ್ಷಣಾ ಪಡೆಯವರು ಎಲ್ಲಾ 11 ಮೀನುಗಾರರನ್ನು ರಕ್ಷಿಸಿದ್ದಾರೆ. ಮುಂಬೈನಿಂದ ಸಾಚೇತ್ ಮತ್ತು ಸುಜಿತ್ ಎಂಬೆರಡು ಕಾವಲು ನೌಕೆಗಳನ್ನು ತರಿಸಿ, ಮೀನುಗಾರರ ಜೀವ ಉಳಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆಯವರಿಗೆ ಅಭಿನಂದನೆಗಳು.
ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ದೋಣಿಯಲ್ಲಿದ್ದ ಸಿಲಿಂಡರ್ ಸ್ಫೋಟವಾಗಿದ್ದು, ಭಾರತೀಯ ಕರಾವಳಿಯ ರಕ್ಷಣಾ ಪಡೆಯವರು ಎಲ್ಲಾ 11 ಮೀನುಗಾರರನ್ನು ರಕ್ಷಿಸಿದ್ದಾರೆ. ಮುಂಬೈನಿಂದ ಸಾಚೇತ್ ಮತ್ತು ಸುಜಿತ್ ಎಂಬೆರಡು ಕಾವಲು ನೌಕೆಗಳನ್ನು ತರಿಸಿ, ಮೀನುಗಾರರ ಜೀವ ಉಳಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆಯವರಿಗೆ ಅಭಿನಂದನೆಗಳು. @IndiaCoastGuard
— Nalinkumar Kateel (@nalinkateel) January 11, 2021
ಮುಂಬೈನಿಂದ ಸಾಚೇತ್ ಮತ್ತು ಸುಜಿತ್ ಎಂಬೆರಡು ಕಾವಲು ನೌಕೆಗಳನ್ನು ತರಿಸಿ, ಮೀನುಗಾರರ ಜೀವವನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಕಾಪಾಡಿದೆ ಎಂದು ಹೇಳಿದ್ದಾರೆ.