ಅಪಘಾತ- ದುರಂತ ಗ್ರಾಮಾಂತರ ಪ್ರಮುಖ ಸ್ಥಳೀಯ

ನೆಲ್ಯಾಡಿಯಲ್ಲಿ ಮುಖಾಮುಖಿಯಾದ ಗ್ಯಾಸ್-ಡೀಸೆಲ್ ಟ್ಯಾಂಕರ್

ನೆಲ್ಯಾಡಿ: ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಡಿಕ್ಕಿ ಸಂಭವಿಸಿದ್ದು, ಗ್ಯಾಸ್ ಸೋರಿಕೆಯಾಗದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಹಾಗೂ ಕೋಲಾರದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿ ಡೀಸೆಲ್ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಹೊಸಮಜಲು ಮಸೀದಿ ಸಮೀಪ ಬೆಳಗಿನ ಜಾವ 5:30ರ ಸುಮಾರಿಗೆ ಪರಸ್ಪರ ಅಪಘಾತ ಸಂಭವಿಸಿದೆ.

ಡೀಸೆಲ್ ಟ್ಯಾಂಕರ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಚಾಲಕರಿಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನೆಲ್ಯಾಡಿ ಹೊರ ಠಾಣೆ ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತ ನಡೆದ ಸ್ಥಳದ ಪಕ್ಕದಲ್ಲಿ ಖಾಸಗಿ ಆಸ್ಪತ್ರೆ, ಮಸೀದಿ ಸೇರಿದಂತೆ ಹಲವಾರು ಮನೆಗಳಿದ್ದು, ಅದೃಷ್ಟವಶಾತ್ ಗ್ಯಾಸ್ ಸೋರಿಕೆಯಾಗದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.

Related posts

ಸುರತ್ಕಲ್: ನೂತನ ರೈತ ಕೇಂದ್ರ ಉದ್ಘಾಟನೆ, ರೈತರಿಗೆ ಸವಲತ್ತು ವಿತರಣೆ

Upayuktha

ಅಕ್ರಮ ಸಕ್ರಮ ಪರಭಾರೆ ಗೊಂದಲ, ಸಿಸಿ ಬಸ್‌ಗಳ ಅವ್ಯವಸ್ಥೆ: ಅಳಿಕೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ದೂರು

Upayuktha

ಜೀವನದಲ್ಲಿ ಸೋಲು ಪ್ರಮುಖ ಪಾತ್ರವನ್ನು ವಹಿಸುತ್ತದೆ: ಚೇತನ್ ಮುಂಡಾಡಿ

Upayuktha