ಕಲೆ ಸಂಸ್ಕೃತಿ ಪ್ರಮುಖ

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಮಕ್ಕಳ ಕಲಾ ಕೌಶಲ ಪ್ರದರ್ಶಿಸುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಅಕ್ಟೋಬರ್ 26ರಿಂದ 30ರ ತನಕ ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಲಿದೆ. ಕಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ  ಇಬ್ರಾಹಿಂ ಬುಡ್ರಿಯಾರವರು ಈಚೆಗೆ ಬಿಡುಗಡೆಗೊಳಿಸಿದರು.

ಕಲೋತ್ಸವದ ಉದ್ಘಾಟನೆ: ಅಕ್ಟೋಬರ್ 26ರಂದು ವೇದಿಕೆಯೇತರ ಸ್ಪರ್ಧೆಗಳು ನಡೆಯಲಿವೆ. 28ರಂದು ಸೋಮವಾರ ಪೂರ್ವಾಹ್ನ ಪೈವಳಿಕೆ ನಗರ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಇಬ್ರಾಹೀಂ ಪಾವಲುಕೋಡಿ ಧ್ವಜಾರೋಹಣಗೈಯುವರು. ನಂತರ ಹತ್ತು ಗಂಟೆಗೆ ಸರಿಯಾಗಿ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಉದ್ಘಾಟನಾ ಸಮಾರಂಭವು ಜರಗಲಿದೆ. ಪೈವಳಿಕೆ ಗ್ರಾಮಪಂಚಾಯತ್ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ರಾಜಮೋಹನ್ ಉನ್ನಿತ್ತಾನ್ ಉದ್ಘಾಟಿಸುವರು. ಮಂಜೇಶ್ವರ ಉಪಜಿಲ್ಲೆಯ ಸಹಾಯಕ ವಿದ್ಯಾಧಿಕಾರಿ ದಿನೇಶ್ ವಿ ಪ್ರಸ್ತಾವನೆಗೈಯುವರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರು, ಸಾಹಿತಿ ಡಾ. ವಸಂತಕುಮಾರ್ ಪೆರ್ಲ ಮುಖ್ಯ ಅತಿಥಿಗಳಾಗಿರುವರು. ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು, ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್, ಪೈವಳಿಕೆ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸುನಿತ ವಾಲ್ಟಿ ಡಿಸೋಝ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರಾ, ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಪುಷ್ಪ ಕೆ.ವಿ, ಡಯಟ್ ಪ್ರಾಂಶುಪಾಲ ಡಾ. ಎಂ ಬಾಲನ್, ಪೈವಳಿಕೆನಗರ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹೀಂ ಪಾವಲುಕೋಡಿ ಶುಭಾಶಂಸನೆಗೈಯುವರು. ಕಲೋತ್ಸವದ ಸಂಘಟಕ ಸಮಿತಿಯ ಪ್ರಧಾನ ಸಂಚಾಲಕರಾದ ವಿಶ್ವನಾಥ ಕೆ ಸ್ವಾಗತಿಸಿ, ಸ್ವಾಗತ ಸಮಿತಿ ಸಂಚಾಲಕಿ ಸುಮಿತ್ರ ಕೆ ವಂದಿಸುವರು.

ಸಮಾರೋಪ ಸಮಾರಂಭ: ಅಕ್ಟೋಬರ್ 30ರಂದು ಬುಧವಾರ ಅಪರಾಹ್ನ ನಡೆಯುವ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ. ಎಂ. ಅಶ್ರಫ್ ಇವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎ.ಜಿ.ಸಿ. ಬಶೀರ್ ಕಾರ್ಯಕ್ರಮ ಉದ್ಘಾಟಿಸುವರು. ಡಯಟ್ ಕಾಸರಗೋಡಿನ ನಿವೃತ್ತ ಪ್ರಾಂಶುಪಾಲರಾದ ಸಿ.ಎಂ. ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿರುವರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಶಿಕ್ಷಣ ಸ್ಥಾಯಿ ಅಧ್ಯಕ್ಷ ಮೊಹಮ್ಮದ್ ಮುಸ್ತಾಫ, ಪೈವಳಿಕೆ ಗ್ರಾಮ ಪಂಚಾಯತ್ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಟಿ ಅಮೀರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಸಂತಿ, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್, ಮಂಜೇಶ್ವರ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿ ಗುರುಪ್ರಸಾದ್ ರೈ, ಪೈವಳಿಕೆನಗರ ಶಾಲೆಯ ಮಾತೃ ಸಂಘದ ಅಧ್ಯಕ್ಷೆ ಎಲಿಝಬೆತ್ ಕ್ರಾಸ್ತಾ ಶುಭಾಶಂಸನೆಗೈಯುವರು. ಸಂಘಟಕ ಸಮಿತಿಯ ಉಪಸಂಚಾಲಕರಾದ ಇಬ್ರಾಹಿಂ ಬುಡ್ರಿಯ ಸ್ವಾಗತಿಸಿ, ಕಾರ್ಯಕ್ರಮ ಸಮಿತಿ ಸಂಚಾಲಕಿ ಶಶಿಕಲ ಕೆ ವಂದಿಸುವರು.

Related posts

ಬಣ್ಣದ ಮಹಾಲಿಂಗರು ಏಳು ದಶಕಗಳ ಯಕ್ಷಗಾನ ಸ್ಥಿತ್ಯಂತರದ ಕಥಾನಾಯಕ: ಡಾ. ಚಂದ್ರಶೇಖರ ದಾಮ್ಲೆ

Upayuktha

ಅಯೋಧ್ಯೆ ವಿವಾದ: ಅ.18ರ ಒಳಗೆ ವಾದ- ಪ್ರತಿವಾದ ಮುಗಿಸಲು ಸುಪ್ರೀಂ ಕೋರ್ಟ್ ಸೂಚನೆ

Upayuktha

ಕೊರೊನಾ ಅಪ್‌ಡೇಟ್: ಕರ್ನಾಟಕ 1105, ದ.ಕ. 32 (ಒಂದು ಸಾವು), ಉಡುಪಿ 18

Upayuktha