ದೇಶ-ವಿದೇಶ ಪ್ರಮುಖ

ಸಾಮಾಜಿಕ ಅಂತರವೆಂದರೆ ಮಾನವೀಯತೆಯ ಅಂತರವಲ್ಲ, ಸಂಘಟಿತ ಹೋರಾಟದಿಂದ ಕೊರೊನಾ ತೊಲಗಿಸೋಣ: ಪ್ರಧಾನಿ ಮೋದಿ

(ಚಿತ್ರ ಕೃಪೆ: ನ್ಯೂಸ್ ಆನ್ ಎಐಆರ್)

ಹೊಸದಿಲ್ಲಿ:

ದೇಶವಿಂದು ಕೊರೊನಾ ಮಹಾಮಾರಿಯ ವಿರುದ್ಧ ಸಮರ ಸಾರಿದ್ದು, ಅದರ ಹಿಡಿತಕ್ಕೆ ಸಿಲುಕದಂತೆ ನೋಡಿಕೊಳ್ಳಲು ಪ್ರತಿಯೊಬ್ಬ ದೇಶವಾಸಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಮೂಲಕ ಮಹಾಮಾರಿ ಕೊರೊನಾದಿಂದ ದೇಶವನ್ನು ಸುರಕ್ಷಿತಗೊಳಿಸಬೇಕಿದೆ ಎಂದು ಅವರು ಕರೆ ನೀಡಿದರು.

‘ಮನ್‌ ಕೀ ಬಾತ್’ ಮಾಸಿಕ ಪ್ರಸಾರ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂಭಾವ್ಯ ಕೊರೊನಾ ಸೋಂಕಿತರು ಅಪರಾಧಿಗಳಲ್ಲ, ಅವರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಬೇಕಿಲ್ಲ. ಆದರೆ ಸೋಂಕು ಇತರರಿಗೆ ಹರಡದಂತೆ ನೋಡಿಕೊಳ್ಳಲು ಸ್ವಯಂ ನಿರ್ಬಂಧದೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ. ಸಾಮಾಜಿಕ ಅಂತರವೆಂದರೆ ಮಾನವೀಯತೆಯ ಅಂತರವಲ್ಲ ಅಥವಾ ಭಾವನಾತ್ಮಕ ಸಂಬಂಧಗಳ ಅಂತರವೂ ಅಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

ಕಳೆದ ಕೆಲವು ದಿನಗಳಿಂದ ಕೊರೊನಾ ಮಹಾಮಾರಿಯ ವಿರುದ್ಧ ಸಮರದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹೊತ್ತ ಪೊಲೀಸ್ ಹಾಗೂ ರಕ್ಷಣಾ ಸಿಬ್ಬಂದಿ, ತುರ್ತು ಹಾಗೂ ಆವಶ್ಯಕ ಪೌರ ಸೇವೆಗಳನ್ನು ಒದಗಿಸುತ್ತಿರುವ ಸಿಬ್ಬಂದಿವರ್ಗ, ಮಾಧ್ಯಮ ಸಿಬ್ಬಂದಿ ಸೇರಿದಂತೆ ಸಮಾಜದ ಹಲವು ವಿಭಾಗಗಳ ಜೊತೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಸಂವಾದ ನಡೆಸಿದ್ದರು.

ಆ ವಿಚಾರವನ್ನು ಮತ್ತೆ ಮನ್‌ ಕೀ ಬಾತ್‌ನಲ್ಲಿ ನೆನಪಿಸಿಕೊಂಡ ಪ್ರಧಾನಿ, ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಪ್ರಧಾನಿ ಮನ್‌ ಕೀ ಬಾತ್ ಅನ್ನು ಪೂರ್ತಿಯಾಗಿ ಇಲ್ಲಿ ಆಲಿಸಿ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ: ಮಾರ್ಚ್ 27ಕ್ಕೆ ಆರಂಭ, ಏಪ್ರಿಲ್ 9ಕ್ಕೆ ಮುಕ್ತಾಯ

Upayuktha

ನಾಲ್ಕು ದಿನದಲ್ಲಿ 1 ಲಕ್ಷ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿದೆ: ಡಿಸಿಎಂ ಸವದಿ

Upayuktha

ಎಸ್.ಎಸ್.ಎಲ್.ಸಿ: ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ

Upayuktha