ಗ್ರಾಮಾಂತರ ಸ್ಥಳೀಯ

ಮಾರಣಕಟ್ಟೆ: ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ಮಾನ

ಬೈಂದೂರು: ಯಕ್ಷಸಂಕ್ರಾಂತಿಯ ನೇತೃತ್ವದಲ್ಲಿ ಮಾರಣಕಟ್ಟೆಯಲ್ಲಿ ಜಾತ್ರೆ ಪ್ರಯುಕ್ತ ನಡೆದ ಪಾವಂಜೆ ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಭಾಗವತ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಅವಿಭಜಿತ ದ.ಕ ಜಿಲ್ಲೆಯ ಯಕ್ಷಗಾನ ಸ್ಪೂರ್ತಿ ಪಟ್ಲ ಸತೀಶ ಶೆಟ್ಟರು. ಅವರ ಧ್ವನಿಯಲ್ಲಿರುವ ವಿಶೇಷತೆಯ ಸೆಳೆತದಿಂದ ಪಟ್ಲರ ಅಭಿಮಾನಿಗಳು ಒಂದುಗೂಡುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಉದ್ಯಮಿ ಗುರ್ಮಿ ಸುರೇಶ ಅವರು ಮಾತನಾಡಿ, ಪಟ್ಲ ಸತೀಶ ಶೆಟ್ಟರು ನಾಡಿನ ಹೆಮ್ಮೆಯ ಯಕ್ಷಗಾಯಕ. ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಶ್ರೀಮಂತ ಎನ್ನುವುದನ್ನು ತನ್ನ ಗಾಯನದ ಮೂಲಕ ತೋರಿಸಿಕೊಟ್ಟವರು ಎಂದರು.

ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ ಯಕ್ಷಗಾನಕ್ಕೆ ೫೦೦ ವರ್ಷಗಳ ಇತಿಹಾಸವಿದೆ. ಇನ್ನೂ 500 ವರ್ಷವಾದರೂ ಯಕ್ಷಗಾನಕ್ಕೆ ಯಾವುದೇ ಕುಂದು ಬರದು. ಯಕ್ಷಗಾನದ ಶಕ್ತಿ ಅಂತಹದ್ದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಟ್ಲ ಸತೀಶ ಶೆಟ್ಟರು ಅಭಿಮಾನಿಗಳ ಪ್ರೀತಿಯ ಮಧ್ಯೆ ಮಾತು ಮೌನವಾಗುತ್ತದೆ. ಕಲಾವಿದರಿಗೆ ಇಂತಹ ಅಭಿಮಾನವೇ ಸಂಪತ್ತು. ನಿಮ್ಮ ಅಭಿಮಾನ ಎಲ್ಲ ಯಕ್ಷಗಾನ ಕಲಾವಿದರ ಮೇಲಿರಲಿ, ಯಕ್ಷಗಾನವನ್ನು ಬೆಳೆಸೋಣ ಎಂದರು.

ಈ ಸಂದರ್ಭದಲ್ಲಿ ಚಿತ್ರಕೂಟ ಕಳಿ ಆಲೂರು ಇದರ ವೈದ್ಯರಾದ ಡಾ|ರಾಜೇಶ ಬಾಯರಿ, ಮಾರಣಕಟ್ಟೆ ರಾಮಚಂದ್ರ ಮಂಜರು, ಪಾವಂಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ಚಾರ್ಟೆಡ್ ಅಕೌಟೆಂಟ್ ರಾಜೇಶ ಶೆಟ್ಟಿ ನಂದ್ರೋಳಿ, ಪತ್ರಕರ್ತ ವಸಂತ ಗಿಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಹೊಯ್ಸಳ ಕಲ್ಚರಲ್ ಟ್ರಸ್ಟ್ ನಾಡ ವತಿಯಿಂದ ಪಟ್ಲ ಸತೀಶ ಶೆಟ್ಟರನ್ನು ಸನ್ಮಾನಿಸಲಾಯಿತು.

ಯಕ್ಷ ಸಂಕ್ರಾಂತಿಯ ರೂವಾರಿ ನಾಗರಾಜ ಶೆಟ್ಟಿ ನೈಕಂಬ್ಳಿ ಸ್ವಾಗತಿಸಿ, ವಂದಿಸಿದರು. ಬಳಿಕ ಗಜೇಂದ್ರ ಮೋಕ್ಷ, ಮಾನಿಷಾದ, ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸ್ವಯಂ ನಿಯಂತ್ರಣದಿಂದಲೇ ಕೊರೊನಾ ಗೆಲ್ಲೋಣ: ಡಾ|| ಚೂಂತಾರು

Upayuktha

ಡಿ.14,15: ಉಡುಪಿ ಆರೂರಿನಲ್ಲಿ ಗವ್ಯ ಉತ್ಪಾದನಾ ತರಬೇತಿ ಶಿಬಿರ

Upayuktha

ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಸಾವು

Upayuktha