ಕ್ಯಾಂಪಸ್ ಸುದ್ದಿ

ಸಂಭ್ರಮದ ಕೊನೆಯಲ್ಲೊಂದು ಕಣ್ಣೀರ ವಿದಾಯ…

ತೀರಾ ಇತ್ತೀಚೆಗೆ ಸಂಬಂಧಿಕರ ಮದುವೆಗೆಂದು ತೆರಳಿದ್ದೆ. ಹತ್ತಿರದ ಸಂಬಂಧಿಕರಾಗಿದ್ದ ಕಾರಣ ಸಂಭ್ರಮ ಎರಡು ತಿಂಗಳ ಮೊದಲೇ ಮನೆಮಾಡಿತ್ತು. ಯಾವಾಗ ಅಣ್ಣನ ಮದುವೆ ಬರುವುದೆಂದು ನಾನು, ಅಕ್ಕ ಸೇರಿ ದಿನಗಳನ್ನು ಎಣಿಸುತ್ತಿದ್ದೆವು. ನಮ್ಮ ಹೊಸ ಮದುಮಗ ಎಂದು ಅಣ್ಣನ ಕಾಲೆಳೆಯೋ ತರ್ಲೆ ಕಿತಾಪತಿ ನಮ್ಮದು.

ಅಣ್ಣ ಮೊದಲೇ ತಮಾಷೆಯ ವ್ಯಕ್ತಿಯಾದ್ದರಿಂದ ಅವನ ಮದುವೆಯ ದಿನ ನಮ್ಮ ಜೊತೆ ಅವನನ್ನು ರೆಡಿ ಮಾಡುವಂತೆ ಗೋಗರೆಯುತ್ತಿದ್ದನು. ತನ್ನ ಮದುವೆಯ ದಿನವಾದರೂ ಸ್ವಲ್ಪ ಸುಂದರವಾಗಿ ಕಾಣಲಿ ಎಂದು ನಾನು, ಅಕ್ಕ ಸೇರಿ ಒಂದಿಷ್ಟು ಮೇಕಪ್ ಮಾಡಲು ಹೊರಟೆವು.

ಬೆಳಗಿನ ಫೋಟೋಶೂಟ್ ಗೆ ನಿದ್ದೆಯ ಮಂಪರಿನಲ್ಲಿದ್ದ ನನ್ನ ಕಣ್ಣುಗಳು ಕ್ಯಾಮರಾ ಕಂಡಾಕ್ಷಣ ಕ್ಯಾಪ್ಚರ್ ಆಗುವ ಸಲುವಾಗಿ ಫೋಟೋಗೆ ಫೋಸ್ ಕೊಟ್ಟಿದೆ ಹೆಚ್ಚು. ಈ ಗೋಜಿನ ನಡುವೆ ಸಮಯ ಕಳೆದದ್ದೆ ತಿಳಿಯಲಿಲ್ಲ.

ಸಂತೋಷ, ಸಂಭ್ರಮ, ಗಡಿಬಿಡಿ ಒಂದಿಷ್ಟು ಆತಂಕ ಮನದಲ್ಲಿ ಮೂಡಿದ ಅಂಜಿಕೆಯ ನಡುವೆ ಮದುವೆ ಸುಸೂತ್ರವಾಗಿ ನೆರವೇರಲಿ ಎಂಬುದು ಹಿರಿಯರ ಬಯಕೆ.

ಒಂದಿಷ್ಟು ಹಾರೈಕೆಗಳ ನಡುವೆ ಕ್ಯಾಪ್ಚರ್ ಆಗುವಂತ ನಮ್ಮಂತಹ ಪ್ರೇಮಿಗಳು, ಫೋಟೋಗ್ರಾಫರ್ ನಲ್ಲಿ, ಅಣ್ಣಾ! ನಮ್ಮದೊಂದು ಫೋಟೋ ತೆಗೆಯಿರಿ ಎಂದು ಹೇಳಿ ಅವನನ್ನು ಪಜೀತಿಗೆ ತಂದಿಡುವ ಸ್ಥಿತಿ.

ಇಷ್ಟೆಲ್ಲಾ ನಲಿವಿನಿಂದ, ಸಂಭ್ರಮ, ಸಂತೋಷದಿಂದ ಕುಣಿದಾಡಿದ್ದ ಮನಸುಗಳು ಒಟ್ಟಾಗಿ ಕಣ್ಣೀರು ಹಾಕಿದರೆ ಒಂದು ಘಳಿಗೆ ಮದುವೆ ಮನೆ ಸೂತಕದ ಮನೆಯಂತೆ ಭಾಸವಾಗುತ್ತದೆ. ತಾನು ಇಷ್ಟಪಟ್ಟ ಹುಡುಗನಿಗೆ ತನ್ನ ಮಗಳನ್ನು ಕೊಟ್ಟರು, ಹೆಣ್ಣುಮಗಳ ಹೆತ್ತವರಲ್ಲಿ ಒಂದು ಸಣ್ಣ ಆತಂಕ. ಇಲ್ಲಿ ತಾಯಿಯಾದವಳು ತನ್ನ ಮಗಳನ್ನು ಇನ್ನೊಂದು ಮನೆಗೆ ಕಳಿಸುವ ಕ್ಷಣದಲ್ಲಿ ಮುಖ ಸಪ್ಪಗಾಗಿ ಕಣ್ಣೀರು ಸುರಿಸುತ್ತಾ ನಿಂತಿರಲು, ಯಾವುದೊ ಮೂಲೆಯಲ್ಲಿ ನಿಂತು ಮೂಕವೇದನೆ ಅನುಭವಿಸುತ್ತಿರುವ ಹೆಣ್ಣಿನ ತಂದೆಯು, ತನ್ನ ಮಗಳ ಜವಾಬ್ದಾರಿಯನ್ನು ಮಗನಂತಿರುವ ಅಳಿಯನಿಗೆ ಸಲ್ಲಿಸುವ ನಡುವೆಯು ಆತನ ದುಃಖ ಹೇಳತೀರದು.

ಮನೆಮಗಳಾಗಿ, ಸಹೋದರಿಯಾಗಿ, ಗೆಳತಿಯಾಗಿದ್ದ ಆ ಪುಟ್ಟ ಮನಸ್ಸಿನ ತಂಗಿಯನ್ನು ಬೀಲ್ಕೊಡಲು ಎಷ್ಟೇ ಗಟ್ಟಿ ಮನಸಿನ ಅಣ್ಣನವನಾದರು ಕೂಡ ಅವಳ ಕಣ್ಣೀರಿನ ಎದುರು ಸೋಲುತ್ತಾನೆ. ಇತ್ತ ಹೆಣ್ಣುಮಗಳು ತವರು ಮನೆ ತೊರೆದು ಇನ್ನೊಂದು ಹೊಸಲು ತುಳಿಯವ ಸಮಯದಲ್ಲಿ ಅದೆಷ್ಟು ಸಂಕಟ ಅವಳಲ್ಲಿ ಅಡಗಿರರಬಹುದು!!!

-ನೀತಾ ರವೀಂದ್ರ
ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

‘ಅನ್ವೇಷಣಾ’ದಲ್ಲಿ ಮನ ಸೆಳೆದ ಹಲವು ಮಾದರಿ-ಸಂಶೋಧನೆಗಳು

Upayuktha

ಫೆ. 23ರಂದು ಫಿಲೋಮಿನಾದಲ್ಲಿ ಹಿರಿಯ ವಿದ್ಯಾರ್ಥಿ, ಶಿಕ್ಷಕ-ರಕ್ಷಕ-ಸಂಘದ ಕ್ರೀಡಾಕೂಟ

Upayuktha

ವಿವೇಕಾನಂದ ಎನ್‍ಎಸ್‍ಎಸ್‍ನಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Upayuktha

Leave a Comment