ನಗರ ಸ್ಥಳೀಯ

ಕೋವಿಡ್ ಮಾರ್ಷಲ್ ಆಗಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಮಾಸ್ಕ್ ವಿತರಣೆ

ಮಂಗಳೂರು: ಕೋವಿಡ್ ಮಾರ್ಷಲ್ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಕೋವಿಡ್ -19 ನಿಂದ ರಕ್ಷಿಸುವ ಸಲುವಾಗಿ ಸೋಮವಾರ (ಮೇ 3) ನಾಯಕ್ ರೋಲಿಂಗ್ ಶಟ್ಟರ್ & ಇಂಜಿನಿಯರಿಂಗ್ ವರ್ಕ್ಸ್‌ ಬೈಕಂಪಾಡಿ, ಮಂಗಳೂರು ಇದರ ಮ್ಯಾನೇಜಿಂಗ್ ಪಾರ್ಟನರ್ ಆದ ಅನಿಲ್ ನಾಯ್ಕ್ ಅವರು ವೈಯಕ್ತಿಕವಾಗಿ ಉತ್ತಮ ಗುಣಮಟ್ಟದ 10,000 ರೂಪಾಯಿ ಮೌಲ್ಯದ 100 NIT ಮಾಸ್ಕ್‌ನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ರವರು ಅನಿಲ್ ನಾಯ್ಕ್ ರವರಿಗೆ ಧನ್ಯವಾದ ಸಮರ್ಪಿಸಿದರು ಹಾಗೂ ಎಲ್ಲಾ ಗೃಹರಕ್ಷಕರಿಗೆ ಮಾಸ್ಕ್‌ ಕಡ್ಡಾಯವಾಗಿ ಧರಿಸುವಂತೆ ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗೃಹರಕ್ಷಕರುಗಳಾದ ರಮೇಶ್ ಭಂಡಾರಿ, ಸುನಿಲ್, ಸಂತೋಷ್ ಸಲ್ದಾನ, ಭವಾನಿ, ಮಂಜುಳಾ, ಸುಕನ್ಯಾ, ದಿವಾಕರ್, ದುಷ್ಯಂತ್ ರೈ ಇವರು ಉಪಸ್ಥಿತರಿದ್ದರು.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

 

Related posts

ಹಿರಿಯ ಸಂಸ್ಕೃತ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ. ಈ ಮಹಾಬಲ ಭಟ್ಟ ನಿಧನ

Upayuktha

ಪೇಜಾವರ ಶ್ರೀ 33ನೇ ಚಾತುರ್ಮಾಸ್ಯ ಸಮಾಪ್ತಿ

Upayuktha

ಇಂಜಿನಿಯರಿಂಗ್ ಜ್ಞಾನದೊಂದಿಗೆ ಸಂವಹನ ಚಾತುರ್ಯತೆ ಅತ್ಯಗತ್ಯ: ರೋಹಿತ್ ಪೂಂಜಾ

Upayuktha