ಮಧುಬನಿ: ಮೂಕ ಹಾಗೂ ಕಿವಿ ಕೇಳದ 15 ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕಣ್ಣಿಗೆ ಹರಿತವಾದ ಆಯುಧದಿಂದ ಹಾನಿ ಮಾಡಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.
ಆಕೆಯ ಎರಡು ಕಣ್ಣುಗಳಿಗೂ ಗಾಯವಾಗಿದೆ, ಆದರೆ ಆಕೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಾಳೆಯೇ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ, ವೈದ್ಯರು ಆಕೆಯನ್ನು ಪರಿಶೀಲನೆ ನಡೆಸಿ, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಈಕೆ ಮೇಯಲು ಹೋಗಿದ್ದ ಮೇಕೆಯನ್ನು ಕರೆತರಲು ಹೋದಾಗ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳೆಲ್ಲರೂ ಕೌಹುವಾ ದ ಬಾರ್ಹಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.
ಊರಿನ ಬೇರೆ ಮಕ್ಕಳೊಂದಿಗೆ ಬಾಲಕಿ ಮೇಕೆ ಕರೆತರಲು ಹೋಗಿದ್ದಳು, ಈ ವೇಳೆ ಘಟನೆ ನಡೆದಿದೆ, ಜೊತೆಯಲ್ಲಿದ್ದ ಒಂದು ಮಗು ಬಂದು ಬಾಲಕಿ ಮನೆಯವರಿಗೆ ಮಾಹಿತಿ ನೀಡಿದ್ದಾಳೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಮನೋಹರಪುರ ಗ್ರಾಮದ ಹೊಲದಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು ಎಂದು ತಿಳಿದು ಬಂದಿದ್ದು, ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು, ನಂತರ ವೈದ್ಯರ ಅನುಮತಿ ಮೇರೆಗೆ ಮಧುಬನಿ ಸಾದಾರ್ ಆಸ್ಪತ್ರೆಗೆ ಆಕೆಯನ್ನು ಶಿಫ್ಟ್ ಮಾಡಲಾಯಿತು