ಅಪಘಾತ- ದುರಂತ ದೇಶ-ವಿದೇಶ

ವಿಶಾಖಪಟ್ಟಣಂ: ಕಣ್ಣೆದುರಲ್ಲೇ ಭಾರಿ ಗಾತ್ರದ ಕ್ರೇನ್ ಬಿದ್ದು 11 ಮಂದಿಯ ದಾರುಣ ಸಾವು

 

 

 

ಹೈದರಾಬಾದ್: ಕೆಲಸದಲ್ಲಿ ನಿರತರಾಗಿದ್ದ ವೇಳೆ ಕ್ರೇನ್ ಒಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿರುವ ಘಟನೆ ವರದಿಯಾಗಿದೆ

ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ ಇಂದು ಈ ದುರಂತ ಸಂಭವಿಸಿದೆ. ಭಾರೀ ಗ್ರಾತದ ಕ್ರೇನ್ ಕುಸಿದು ಬಿದ್ದು 11 ಮಂದಿ ಸಾವನ್ನಪ್ಪಿದ್ದು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಪ್ರತಿದಿನದಂತೆ ಇಂದು ಕೂಡ ಶಿಪ್ ಯಾರ್ಡ್‌ನಲ್ಲಿ ಲೋಡ್ ಮತ್ತು ಅನ್ ಲೋಡ್ ಕಾರ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕ್ರೇನ್ ಕುಸಿದು ಬಿದ್ದಿದೆ. ಹಳದಿ ಬಣ್ಣದ ಕ್ರೇನ್ ಕುಸಿದು ಬೀಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

 

ಮೃತರನ್ನು ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಶಿಪ್‍ ಯಾರ್ಡ್ ನೌಕರರು ಮತ್ತು ಉಳಿದವರು ಗುತ್ತಿಗೆ ಸಿಬ್ಬಂದಿ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಪೊಲೀಸರು ಮತ್ತು ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ಕ್ರೇನ್ ಕೆಳಗೆ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯ ಮಾಡುತ್ತಿದ್ದಾರೆ.

ಕ್ರೇನ್ ದುರಂತದ ಬಗ್ಗೆ ತಿಳಿದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಮುಖ್ಯಸ್ಥರಿಗೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಜಮ್ಮು-ಕಾಶ್ಮೀರ: ಐದು ಜಿಲ್ಲೆಗಳಲ್ಲಿ 2ಜಿ ಮೊಬೈಲ್ ಇಂಟರ್ನೆಟ್ ಪುನರಾರಂಭ

Upayuktha

ಕೇರಳದ ಮೊದಲ ಬುಡಕಟ್ಟು ಸಮುದಾಯದ ಐಎಎಸ್ ಅಧಿಕಾರಿ ಶ್ರೀಧನ್ಯಾ ಸುರೇಶ್

Upayuktha

ಕಾಶ್ಮೀರ: ಮುಂದಿನ ವಾರ ಶಾಲೆಗಳ ಪುನರಾರಂಭ

Upayuktha
error: Copying Content is Prohibited !!