ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ರಾಘವೇಂದ್ರ ಸ್ವಾಮಿಗಳ 349 ನೇ ಆರಾಧನಾ ಮಹೋತ್ಸವಕ್ಕೆ ಭಕ್ತರಿಗೆ ಪ್ರವೇಶ ನಿಷೇಧ

ರಾಯಚೂರು: ‌ ಈ ಬಾರಿ ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ಆಗಸ್ಟ್ 2 ರಿಂದ 8 ರವರೆಗೆ ನಡೆಯಲಿದೆ. ಆದರೆ ಕೊರೊನಾ  ಹಾವಳಿಯಿಂದ ಯಾವುದೇ ಹಬ್ಬಗಳು ನಡೆಯುವುದಿಲ್ಲ. ಹಾಗೆಯೇ ಈ ಬಾರಿ ಮಂತ್ರಾಲಯದ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ಮಠದ ಆಡಳಿತ ಮಂಡಳಿ ಆರಾಧನಾ ಸಪ್ತರಾತ್ರೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನ ಮಠದ ಅಧಿಕೃತ ಯೂ ಟ್ಯೂಬ್ ಚಾನೆಲ್ “ಮಂತ್ರಾಲಯ ವಾಹಿನಿ”ಯಲ್ಲಿ ನೇರಪ್ರಸಾರ ಮಾಡಲು ನಿರ್ಧರಿಸಿದ್ದಾರೆ.

Advertisement
Advertisement

ಆರಾಧನಾ ಮಹೋತ್ಸವಕ್ಕೆ ಮಠದಲ್ಲಿ 50 ಕ್ಕಿಂತ ಹೆಚ್ಚು ಜನರಿಗೆ ಅವಕಾಶ ಇರುವುದಿಲ್ಲ 50ಕ್ಕಿಂತ ಕಡಿಮೆ ಜನರಿಗೆ ಮಾತ್ರ ಅವಕಾಶ ಕಲ್ಪಿಸಿ ಕೊಡುವುದರಿಂದ ಯಾವುದೇ ಭಕ್ತರು ಮಠಕ್ಕೆ ಬರುವ ಕೆಲಸ ಮಾಡಬೇಡಿ. ಇದ್ದ ಜಾಗದಲ್ಲೇ ರಾಯರನ್ನು ಸ್ಮರಿಸಿ ಆರಾಧನೆ ಮಾಡಿ ಎಂದು ಮನವಿ ಮಾಡಲಾಗಿದೆ.

ಮಂತ್ರಾಲಯ ಮಠದ ಪ್ರಾಕಾರದಲ್ಲಿ ಮಾತ್ರ ಕಾರ್ಯಕ್ರಮಗಳು ನಡೆಯುತ್ತಿದ್ದು ಧಾರ್ಮಿಕ, ಆಧ್ಯಾತ್ಮಿಕ, ಉತ್ಸವ, ಪ್ರವಚನ ಸೇರಿ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಲಾಗುವುದು.

ದರ್ಶನಕ್ಕೂ ಅವಕಾಶವಿಲ್ಲ. ಕೊರೋನಾ ಮುಗಿದ ಬಳಿಕ ಭಕ್ತರಿಗಾಗಿ ಆರಾಧನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಇದರಲ್ಲಿ ಎಲ್ಲಾ ಭಕ್ತರು ಭಾಗವಹಿಸಬಹುದು ಎಂದು ಮಂತ್ರಾಲಯ ಮಠದ ಆಡಳಿತ ಮಂಡಳಿ ತಿಳಿಸಿದೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Advertisement
Advertisement

Related posts

ಶಬರಿಮಲೆ ಯಾತ್ರಿಕರನ್ನು ಆಕರ್ಷಿಸುತ್ತಿರುವ ಉಬ್ರಂಗಳದ ಶ್ರೀ ಶಾಸ್ತಾರನ ದೇಗುಲ

Upayuktha

ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 108 ಕಾಯಿ ಗಣಪತಿ ಹವನ, ಚಂಡಿಕಾ ಹವನ

Upayuktha

ಸೂರ್ಯಗ್ರಹಣ: ಗೋಕರ್ಣದಲ್ಲಿ ವಿಶೇಷ ಪೂಜೆ

Upayuktha
error: Copying Content is Prohibited !!