ಜಿಲ್ಲಾ ಸುದ್ದಿಗಳು

ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ 25ನೇ ಕೃತಿ ‘ಮತ ಭಿಕ್ಷೆ’ ನಾಳೆ ಬಿಡುಗಡೆ

ಮೈಸೂರು: ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದಿರುವ ‘ಮತ ಭಿಕ್ಷೆ’ ಪುಸ್ತಕ ನಾಳೆ (ಅ.21) ರಂದು ಬಿಡುಗಡೆಯಾಗಲಿದೆ.

ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಬುಧವಾರ ಬೆಳಗ್ಗೆ 10:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್‌ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ನಿರಂಜನ ವಾನಳ್ಳಿ ಅವರು ಪುಸ್ತಕ ಕುರಿತು ಅನಿಸಿಕೆ ವ್ಯಕ್ತಪಡಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ತನು ಮನು ಪ್ರಕಾಶನದ ಮಾಲೀಕರಾದ ಮಾನಸ ಅವರು ಭಾಗವಹಿಸಲಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ ಮಹೇಂದ್ರ ಮತ್ತು ಕೃತಿಯ ಲೇಖಕರಾದ ಐತಿಚಂಡ ರಮೇಶ್‌ ಉತ್ತಪ್ಪ ಉಪಸ್ಥಿತರಿರುತ್ತಾರೆ.

‘Mandya Election ಮತ ಭಿಕ್ಷೆ The Untold story’ ಇದು ರಮೇಶ್ ಉತ್ತಪ್ಪ ಅವರ 25ನೇ ಕೃತಿಯಾಗಿದೆ.

2019ರಲ್ಲಿ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಲವು ಅನ್‌ಟೋಲ್ಡ್‌ ಸ್ಟೋರಿಗಳಿವೆ. ಇಡೀ ರಾಷ್ಟ್ರದ ಗಮನ ಸೆಳೆದು ಮುಖ್ಯಮಂತ್ರಿಯ ಪುತ್ರನನ್ನು ಸೋಲಿಸಿದ ಈ ಚುನಾವಣೆ ಹಾಗೂ ಪಕ್ಷೇತರ ಮಹಿಳಾ ಅಭ್ಯರ್ಥಿ ಗೆದ್ದು ದಾಖಲೆ ಸೃಷ್ಟಿಸಿರುವುದು ಇತಿಹಾಸ.

ಅಂದಿನ ಪ್ರಮುಖ ಘಟನೆಗಳು ಹಾಗೂ ಸಾಕಷ್ಟು ಸ್ವಾರಸ್ಯಗಳನ್ನು ದಾಖಲಿಸುವ ಪ್ರಯತ್ನ ನಡೆದಿದೆ. ರಾಜಕೀಯ ಸಾಹಿತ್ಯದಲ್ಲಿಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಒಂದು ಕ್ಷೇತ್ರದ ಚುನಾವಣೆ ಕುರಿತು ಕೃತಿ ರಚನೆಯಾಗಿರುವುದು ವಿಶೇಷವಾಗಿದೆ ಎಂದು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಪ್ರತಿಭಾವಂತ ಬೆಳ್ತಂಗಡಿ ಯುವಕ ಆತ್ಮಹತ್ಯೆ

Harshitha Harish

ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಕಿರುಸಾಲ ವಿತರಣೆ

Upayuktha

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು: ಪದವಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭ

Upayuktha

Leave a Comment