ನಗರ ಸ್ಥಳೀಯ

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉಪಯುಕ್ತ: ಗಣಿತಶಾಸ್ತ್ರ ಪುಸ್ತಕ ಬಿಡುಗಡೆ

ಉಡುಪಿ: ಶ್ರೀಮನ್ ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇವರ ಆಯೋಜನೆಯಲ್ಲಿ ಶ್ರೀಮತಿ ಭಾಗ್ಯಲಕ್ಷ್ಮಿ ಅಡಿಗ ಅವರು ಬರೆದಿರುವ ಗಣಿತಶಾಸ್ತ್ರಕ್ಕೆ ಸಂಬಂಧಿತ, “ಕ್ಯಾಲ್ಕುಲಸ್ ಎಂಡ್ ಲೀನಿಯರ್ ಆಲ್ಜಿಬ್ರಾ” ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಭೀಮ ಸಭಾಂಗಣದಲ್ಲಿ ಗುರುವಾರ ಜರುಗಿತು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಎಸ್ಎಂಎಸ್‌ಪಿ ಸಭಾದ ಕಾರ್ಯದರ್ಶಿಗಳಾದ ದೇವಾನಂದ ಉಪಾಧ್ಯಾಯ ಅವರು, ಎಲ್ಲಾ ಕ್ಷೇತ್ರದಲ್ಲಿ ಗಣಿತದ ಅವಶ್ಯಕತೆ ಇದ್ದು, ಗಣಿತ ಭಾಗ್ಯವನ್ನು ತರುವ ವಿದ್ಯೆಯಾಗಿದೆ ಎಂಬುದನ್ನು ಮನವರಿಕೆ ಮಾಡಿದರು.

ಪುಸ್ತಕದ ಲೇಖಕಿಯಾದ ಶ್ರೀಮತಿ ಭಾಗ್ಯಲಕ್ಷ್ಮಿ ಅಡಿಗ ಅವರು ಗಣಿತ ಎಂಬುವುದು ಕಬ್ಬಿಣದ ಕಡಲೆಯಲ್ಲ, ಅದು ಅತ್ಯಂತ ಸರಳವಾಗಿದೆ. ಈ ಪುಸ್ತಕ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯೋಗಕಾರಿ ಎಂಬುದನ್ನು ವಿಸ್ತ್ರತವಾಗಿ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರೊ. ಎನ್.ಲಕ್ಷ್ಮೀನಾರಾಯಣ ಭಟ್ ಅವರು, ಸಂಸ್ಕೃತ ಮತ್ತು ಗಣಿತದ ನಿಖರತೆಯ ಹಾಗೂ ಬರವಣಿಗೆಯ ಮಹತ್ವದ ಕುರಿತು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು. ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಧರ್ ಭಟ್ ಪ್ರಾರ್ಥಿಸಿದರು. ಗ್ರಂಥಪಾಲಕ ಹರಿಕೃಷ್ಣ ರಾವ್ ಸಗ್ರಿ ಸ್ವಾಗತಿಸಿದರು. ವಿನಯ ಹೆಗಡೆ ನಿರೂಪಿಸಿದರು. ಚಿನ್ಮಯ್ ಭಟ್ ವಂದಿಸಿದರು.

To Join Upayuktha Directory: contact- 7019126946

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಫ್ಲೈ ಓವರ್ ಪೂರ್ಣಗೊಳಿಸದೆ ಟೋಲ್ ಸಂಗ್ರಹ ಇಲ್ಲ: ಶೋಭಾ ಕರಂದ್ಲಾಜೆ

Upayuktha

ಕೊಳಂಬೆ ಗ್ರಾಮ: 11 ಲಕ್ಷ ಅನುದಾನದಲ್ಲಿ ಸೌಹಾರ್ದ ನಗರ ರಸ್ತೆಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಗುದ್ದಲಿಪೂಜೆ

Upayuktha

ವಿವೇಕಾನಂದ ಕಾಲೇಜಿನಲ್ಲಿ ಜ್ಯೋತಿಷ್ಯ ತರಗತಿ ಉದ್ಘಾಟನೆ

Upayuktha