ನಗರ ಪ್ರಮುಖ ಸ್ಥಳೀಯ

ಸಾರ್ವಜನಿಕರು ಕೋವಿಡ್-19 ಪರೀಕ್ಷೆಗೆ ಸಹಕರಿಸಿ: ಮಂಗಳೂರು ಮಹಾನಗರಪಾಲಿಕೆ

ಮಂಗಳೂರು: ಕೋವಿಡ್-19 ಸೋಂಕು ಲಕ್ಷಣ ಇರುವ ವ್ಯಕ್ತಿ ತಮ್ಮ ಹತ್ತಿರ ಸಂಪರ್ಕದಲ್ಲಿ ಇರುವವರಿಗೆ ಹರಡುವುದು ಅಲ್ಲದೇ ವಯಸ್ಕರಿಗೆ ಚಿಕ್ಕ ಮಕ್ಕಳಿಗೆ ಹಾಗೂ ಇತರ ಖಾಯಿಲೆಯಿಂದ ಬಳಲುತ್ತಿರುವವರಿಗರ ಹೆಚ್ಚಿನ ತೊಂದರೆ ಉಂಟು ಮಾಡುವ ಸಾಧ್ಯತೆಗಳು ಇವರುವುದರಿಂದ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅತೀ ಅಗತ್ಯವಿರುತ್ತದೆ. ಇದಕ್ಕಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಮಂಗಳೂರು ಮಹಾನಗರಪಾಲಿಕೆ ಮನವಿ ಮಾಡಿದೆ.

ಕೋವಿಡ್-19 ಪರೀಕ್ಷೆಯನ್ನು 2 ರೀತಿಯಲ್ಲಿ ಮಾಡಲಾಗುತ್ತದೆ: ರ‍್ಯಾಟ್ ಟೆಸ್ಟ್ (ರ‍್ಯಾಪಿಡ್ ಆಂಟಿಜೆಂಟ್ ಟೆಸ್ಟ್) ಮತ್ತು ವಿಟಿಎಮ್ ಟೆಸ್ಟ್ (ವೈರಲ್ ಟ್ರಾನ್ಸ್‍ಪೋರ್ಟ್ ಮೀಡಿಯಂ).

ರ‍್ಯಾಟ್ ಟೆಸ್ಟ್: ರ‍್ಯಾಟ್ ಟೆಸ್ಟ್ ನ್ನು ಮೂಗಿನ ದ್ರವದ ಮೂಲಕ ಮಾಡಲಾಗುತ್ತದೆ. ರ‍್ಯಾಟ್‌ ಟೆಸ್ಟ್‌ನಲ್ಲಿ ಪರೀಕ್ಷೆ ಮಾಡಿದ 30 ನಿಮಿಷದಲ್ಲಿ ವರದಿ ಸಿಗುತ್ತದೆ.

ವಿಟಿಎಮ್ ಟೆಸ್ಟ್: ವಿ.ಟಿ.ಎಮ್. ಟೆಸ್ಟ್‌ ಅನ್ನು ಗಂಟಲು ದ್ರವದ ಮೂಲಕ ಮಾಡಲಾಗುತ್ತದೆ. ಇದರಲ್ಲಿ ಪರೀಕ್ಷೆ ಮಾಡಿದ 48 ಗಂಟೆಗಳ ನಂತರ ವರದಿ ನೀಡಲಾಗುತ್ತದೆ.

ಪ್ರಸುತ್ತ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸದ್ರಿ ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆರೋಗ್ಯ ಮೇಲ್ವಿಚಾರಕರ ಸಹಕಾರದೊಂದಿಗೆ ಉಚಿತವಾಗಿ ನಡೆಸಲಾಗುತ್ತದೆ. ಕೋರೋನಾ ಕೇಸ್ ಹೆಚ್ಚಾದ ಪ್ರದೇಶದಲ್ಲಿ ಮತ್ತು ಜನ ಸಂದಣಿ ಹೆಚ್ಚಾಗಿ ಸೇರುವ ಪ್ರದೇಶದಲ್ಲಿ ಕೋವಿಡ್-19 ಟೆಸ್ಟ್ ಕ್ಯಾಂಪ್ ಮಾಡಲಾಗುತ್ತದೆ.

ಕೊರೋನಾ ಪಾಸಿಟಿವ್ ಬಂದ ರೋಗಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಬಂಧ ಹೊಂದಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಕೋವಿಡ್-19 ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಹೊಟೇಲ್, ರೇಸ್ಟೋರೆಂಟ್‍ಗಳು. ಖಾಸಗಿ ಕಂಪನಿಗಳು, ಅಪಾರ್ಟ್‍ಮೆಂಟ್‍ಗಳು, ಪ್ಲಾಟ್ ಅಸೋಶಿಯಸೇಷನ್‍ಗಳು, (ಪ್ಲಾಟ್‍ಗಳ ಕಾವಲುಗಾರರು, ಪ್ಲಾಟ್‍ಗೆ ಬರುವ ಮನೆ ಕೆಲಸದ ಆಳುಗಳು), ಹಾಸ್ಟಲ್‍ಗಳು, ವಾಣಿಜ್ಯ ಸಂಕೀರ್ಣಗಳು ಕೈಗಾರಿಕೆ ಪ್ರದೇಶ, ಪೆಟ್ರೋಲ್ ಬಂಕ್, ಕಟ್ಟಡ ನಿರ್ಮಾಣ ಸೈಟ್ ಇತ್ಯಾದಿ ಕಡೆಗಳಲ್ಲಿ ಹೋಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಸಾರ್ವಜಿನಿಕರು ಗಂಟಲು ಹಾಗೂ ಮೂಗಿನ ದ್ರವ ಪರೀಕ್ಷೆಗೆ ಕಡ್ಡಾಯವಾಗಿ ಸಹಕರಿಸಬೇಕು.

ಕೋವಿಡ್ ದೃಢಪಟ್ಟಿರುವ ಸೋಂಕಿತರ ಮನೆಗೆ ಸಾನಿಟೈಸ್ ಮಾಡಲಾಗುತ್ತದೆ. ಸೋಂಕಿತರು ಹಾಗೂ ಸಂಪರ್ಕದಲ್ಲಿರುವವರನ್ನು ಪ್ರತ್ಯೇಕಿಸಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ನಾಗರಿಕರು, ಸಂಘ ಸಂಸ್ಥೆಗಳು, ಹಾಗೂ ಸಮಾಜದ ಎಲ್ಲರೂ ಸಕ್ರಿಯ ಬೆಂಬಲವನ್ನು ನೀಡಬೇಕು. ಸಾರ್ವಜಿನಿಕರು ಕೋವಿಡ್-19 ದೃಢಪಟ್ಟರೆ ಭಯ ಪಡದೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದು ವೈದ್ಯರ ಸಲಹೆ ಪಡೆದು ಎಚ್ಚರಿಕೆಯಿಂದ ರೋಗ ಲಕ್ಷಣಗಳನ್ನು ಹೋಗಲಾಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮ.ನ.ಪಾ ಆರೋಗ್ಯಧಿಕಾರಿ ದೂರವಾಣಿ ಸಂಖ್ಯೆ: 9448951675, ಪರಿಸರ ಅಭಿಯಂತರರು ಮಧು ಎಸ್. ಮನೋಹರ್, ದೂರವಾಣಿ ಸಂಖ್ಯೆ: 9886403029, ಪರಿಸರ ಅಭಿಯಂತರರು, ಶಬರಿನಾಥ ರೈ, ದೂರವಾಣಿ ಸಂಖ್ಯೆ: 9448582084, ಪರಿಸರ ಅಭಿಯಂತರರು, ದಯಾನಂದ, ದೂರವಾಣಿ ಸಂಖ್ಯೆ: 74118482856 ಸಂಪರ್ಕಿಸಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕೊರೊನಾ ಅಪ್‌ಡೇಟ್: ಕರ್ನಾಟಕ 1839, ದ.ಕ. 75 (ಮೂರು ಸಾವು), ಉಡುಪಿ 18

Upayuktha

ರಾಜ್ಯ ಮಟ್ಟದ ಶಾಲಾ ಕಲೋತ್ಸವ: ಇನ್ನು ಉಳಿದಿರುವುದು 9 ದಿನಗಳು ಮಾತ್ರ

Upayuktha

ದ.ಕ. ಲಾಕ್‌ಡೌನ್: ನಾಳೆ ಸಿಎಂ ಜತೆ ಚರ್ಚಿಸಿ ತೀರ್ಮಾನ- ಉಸ್ತುವಾರಿ ಸಚಿವರ ಸ್ಪಷ್ಟನೆ

Upayuktha

1 comment

KR September 16, 2020 at 10:51 AM

Good Move

Reply

Leave a Comment

error: Copying Content is Prohibited !!