ದೇಶ-ವಿದೇಶ ಪ್ರಮುಖ

ಭಾರತದ ಆಂತರಿಕದ ಬಗ್ಗೆ ವಿಮರ್ಶಿಸಲು ಚೀನಾಕ್ಕೆ ಅಧಿಕಾರವಿಲ್ಲ: ವಿದೇಶಾಂಗ ಖಾತೆ ಸಿಡಿಮಿಡಿ

ಹೊಸದಿಲ್ಲಿ: ಭಾರತದ ಆಂತರಿಕ ವಿಷಯದ ಬಗ್ಗೆ ಟೀಕೆ ಅಥವಾ ವಿಮರ್ಶೆ ನಡೆಸಲು ಚೀನಾಕ್ಕೆ ಯಾವ ಸ್ಥಾನಾಧಿಕಾರವೂ ಇಲ್ಲ ಎಂದು ವಿದೇಶಾಂಗ ವಕ್ತಾರ ಅನುರಾಗ ಶ್ರೀವತ್ಸ ಇಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌, ಈ ಹಿಂದೆಯೂ, ಈಗಲೂ ಮತ್ತು ಇನ್ನು ಮುಂದೆಯೂ ಭಾರತದ ಅಖಂಡ ಭಾಗವಾಗಿಯೇ ಉಳಿಯುತ್ತದೆ ಎಂದು ಅವರು ಒತ್ತಿ ಹೇಳಿದರು.

ಅರುಣಾಚಲ ಪ್ರದೇಶವು ಸಮಗ್ರ ಭಾರತದ ಭಾಗವಾಗಿಯೇ ಇರುತ್ತದೆ ಎಂದು ಈ ಹಿಂದೆಯೇ ಚೀನಾಕ್ಕೆ ಸ್ಪಷ್ಟವಾಗಿ ಯೇ ತಿಳಿಸಲಾಗಿದೆ. ನವದೆಹಲಿಯು, ಇತರ ದೇಶಗಳು ತಮ್ಮ ಆಂತರಿಕ ವಿಷಯದಲ್ಲಿ ಬೇರೆ ದೇಶಗಳ ಪ್ರವೇಶಿಸುವಿಕೆಯನ್ನು ಸಹಿಸದಂತೆ, ಭಾರತದ ಆಂತರಿಕ ವಿಷಯದಲ್ಲೂ ಮೂಗು ತೂರಿಸಲಾರವೆಂದು ಭಾವಿಸುತ್ತೇವೆ ಎಂದು ವಿದೇಶಾಂಗ ವಕ್ತಾರರು ನುಡಿದರು.

ಭಾರತದ ಗಡಿ ಮೂಲಸೌಕರ್ಯಗಳ ಅಭಿವೃದ್ಧಿ ಬಗ್ಗೆ ಚೀನಾದ ಟೀಕೆಯನ್ನು ಖಂಡಿಸಿ ಮಾತನಾಡಿದ ಶ್ರೀವತ್ಸ ಅವರು ‘ ಸರಕಾರವು ಭಾರತದ ತನ್ನ ಗಡಿ ರಚನೆಯ ಮುಖಾಂತರ ದೇಶದ ಆರ್ಥಿಕ ‌ಕಲ್ಯಾಣ ಹಾಗೂ ಜೀವನಾವಶ್ಯಕತೆಗಳ ಅಭಿವೃದ್ದಿ ಯನ್ನು ಸಾಧಿಸುವತ್ತ ಗಮನ ಹರಿಸಿದೆ. ಭಾರತ ಸರಕಾರವು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ರಕ್ಷಣೆಗೋಸ್ಕರ, ಗಡಿಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಗಮನ ಹರಿಸಿದೆ ಎಂದು ಹೇಳಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಡುಪಿಯಲ್ಲಿ ಮೂರು ದಶಕಗಳಿಂದೀಚೆಗೆ ಕಂಡು ಕೇಳರಿಯದ ಮಳೆ…

Upayuktha

ಎಂಬಿಎ ಪದವೀಧರನಿಂದ ದೇಸಿ ಹಸುಗಳ ಪಾಲನೆ: ‘ಆತ್ಮನಿರ್ಭರತೆ’ಗೊಂದು ಪ್ರೇರಣೆ

Upayuktha

ರಾಮಾಯಣ-ಮಹಾಭಾರತ-ಪಂಚತಂತ್ರ ಪರೀಕ್ಷಾ ಪ್ರಮಾಣ ಪತ್ರ ವಿತರಣೆ

Upayuktha

Leave a Comment