ಕೃಷಿ ದೇಶ-ವಿದೇಶ ಪ್ರಮುಖ ವಾಣಿಜ್ಯ

ಪಂಜಾಬಿನ ಈ ‘ಮಶ್ರೂಮ್ ಕಿಂಗ್’ ಕೇವಲ ಅಣಬೆ ಬೆಳೆಸಿ ಗಳಿಸುವ ವಾರ್ಷಿಕ ಆದಾಯ ಬರೋಬ್ಬರಿ 1.25 ಕೋಟಿ ರೂ…!

52ರ ಹರಯದ ಪಂಜಾಬಿನ ಈ ರೈತ ಕೇವಲ 2 ಎಕರೆಯಷ್ಟು ಜಾಗದಲ್ಲಿ ಅಣಬೆ ಬೆಳೆಸಿ ವಾರ್ಷಿಕ 1.25 ಕೋಟಿ ರೂ ಆದಾಯ ಗಳಿಸುತ್ತಾರೆ ಎಂದರೆ ನಂಬುವಿರಾ…? ಓದಿ ಈ ಸ್ಟೋರಿ.

(ಚಿತ್ರ ಕೃಪೆ: ದಿ ಬೆಟರ್ ಇಂಡಿಯಾ)

ಚಂಡೀಗಢ: ಅದು 1992 ರ ಕಾಲ. ಆಗ ಪಂಜಾಬ್‌ನಲ್ಲಿ ಅಣಬೆಗಳನ್ನು ಮಾತ್ರವೇ ಬೆಳೆಯುತ್ತಿದ್ದ ಕೆಲವೇ ರೈತರಲ್ಲಿ ಸಂಜೀವ್ ಸಿಂಗ್ ಕೂಡ ಒಬ್ಬರು. ತಮ್ಮ 25 ನೇ ವಯಸ್ಸಿನಲ್ಲಿ, ಟಂಡಾ ಗ್ರಾಮದ ಈ ರೈತ ತನ್ನ ಹಿತ್ತಲಿನಲ್ಲೇ ಸಣ್ಣದಾಗಿ ಅಣಬೆ ಕೃಷಿ ಆರಂಭಿಸಿದರು.

ದೂರದರ್ಶನದಲ್ಲಿ ರೈತರಿಗಾಗಿ ಪ್ರಸಾರ ಮಾಡುವ ‘ಮೇರಾ ಪಿಂಡ್ ಮೇರಾ ಕಿಸಾನ್’ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದು ಅಣಬೆ ಕೃಷಿ ಆರಂಭಿಸಿದ್ದಾಗಿ ಅವರು ಹೇಳುತ್ತಾರೆ. ಆಗ ಈತ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದರು.

ಈ ಲಾಭದಾಯಕ ಬೆಳೆ ಬೆಳೆಯಲು ನಿರ್ಧರಿಸಿದ ಸಂಜೀವ್ ಸಿಂಗ್, ಒಂದು ಕೈ ನೋಡಿಯೇ ಬಿಡೋಣ ಎಂದುಕೊಂಡು, ಸಂಭಾವ್ಯ ಮಾರುಕಟ್ಟೆಯ ಅಧ್ಯಯನ ಮತ್ತು ಅನ್ವೇಷಣೆಗಾಗಿಯೇ ಒಂದು ವರ್ಷವನ್ನು ಮೀಸಲಿಟ್ಟರು. ಜೊತೆಗೆ ಬೆಳೆ ಬೆಳೆಯಲು ಬಳಸುವ ವಿಧಾನಗಳನ್ನೂ ಅಧ್ಯಯನ ಮಾಡಿದರು.

‘ನಾನು ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಅಣಬೆ ಕೃಷಿ ಕುರಿತು ಒಂದು ವರ್ಷದ ಕೋರ್ಸ್‌ಗೆ ಸೇರಿಕೊಂಡೆ. ಅಣಬೆಗಳನ್ನು ಒಳಾಂಗಣದಲ್ಲಿ ಲಂಬವಾಗಿ ಮತ್ತು ಚೀಲಗಳಲ್ಲಿ ಬೆಳೆಯಲು ಸಾಧ್ಯವಿದೆ ಎಂಬುದನ್ನು ನಾನು ಅಲ್ಲಿ ಕಲಿತುಕೊಂಡೆ. ಈ ಬೆಳೆಗೆ ಯಾವುದೇ ಮಣ್ಣಿನ ಅಗತ್ಯವಿಲ್ಲ, ಸಾವಯವ ಗೊಬ್ಬರವೇ ಇದಕ್ಕೆ ಸಾಕಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಈಗ 54 ರ ಹರೆಯದಲ್ಲಿರುವ ಸಂಜೀವ್‌ಗೆ ಆ ಸಮಯದಲ್ಲಿ ಅಣಬೆ ಕೃಷಿ ಮಾಡುವ ಯಾವುದೇ ವ್ಯಕ್ತಿಯ ಬಗ್ಗೆ ತಿಳಿದಿರಲಿಲ್ಲ, ಹೀಗಾಗಿ ಎಲ್ಲವನ್ನೂ ಸ್ವತಃ ಪ್ರಯೋಗ ಮಾಡಿಯೇ ಕಲಿಯುವ ಅನಿವಾರ್ಯತೆ ಉಂಟಾಯಿತು. ಆ ಸಮಯದಲ್ಲಿ, ಅಣಬೆಗಳ ಬಗ್ಗೆ ಸಾಮಾನ್ಯ ಅರಿವಿನ ಕೊರತೆಯೂ ಇತ್ತು. ಅಣಬೆ ಬೀಜಗಳು ಸ್ಥಳೀಯವಾಗಿ ಲಭ್ಯವಿರಲಿಲ್ಲ, ಅವುಗಳನ್ನು ದಿಲ್ಲಿಯಿಂದ ತರಿಸಿಕೊಳ್ಳಬೇಕಾಗಿತ್ತು.

ಮೊದಲಿಗೆ ಋತುಮಾನಕ್ಕೆ ಅನುಗುಣವಾಗಿ ಅಣಬೆಗಳನ್ನು ಬೆಳೆಯಲು ಪ್ರಾರಂಭಿಸಿದರು. ಇದು ಸಾಂಪ್ರದಾಯಿಕ ಕೃಷಿಯ ಜೊತೆಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಾಯ ಮಾಡಿತು. ಎಂಟು ವರ್ಷಗಳಿಂದ, ಅವರು ಉತ್ತಮ ಗುಣಮಟ್ಟದ ಅಣಬೆಗಳನ್ನು ಬೆಳೆಸಲು ಮತ್ತು ಸ್ಥಿರ ಮಾರುಕಟ್ಟೆಯನ್ನು ಸ್ಥಾಪಿಸಲು ಬಹಳಷ್ಟು ಹೆಣಗಾಡಬೇಕಾಯಿತು.

2001 ರಲ್ಲಿ, ನಾನು ಕ್ರಮಬದ್ಧವಾಗಿ ಅಣಬೆ ಬೆಳೆಯಲು ಪ್ರಾರಂಭಿಸಿದೆ. ನಾನು ಕಾಂಕ್ರೀಟ್ ಕೋಣೆಯನ್ನು ನಿರ್ಮಿಸಿದೆ ಮತ್ತು ಆರು ಪದರಗಳ ಮೇಲೆ ಲೋಹದ ಅಟ್ಟಣಿಗೆಗಳನ್ನು ಸ್ಥಾಪಿಸಿದೆ. ನಂತರ ಕಾಂಪೋಸ್ಟ್ ತುಂಬಿದ ಚೀಲಗಳನ್ನು ಮೇಲೆ ಜೋಡಿಸಿದೆ. ಅದು ನಿಯಂತ್ರಿತ ವಾತಾವರಣದಲ್ಲಿತ್ತು. ಸಾವಯವ ಕಾಂಪೋಸ್ಟ್‌ನಲ್ಲಿ ಯೂರಿಯಾದಷ್ಟೇ ಪ್ರಮಾಣದ ಸಾರಜನಕವಿದೆ’ ಎಂದು ಅವರು ಹೇಳುತ್ತಾರೆ. ಖರೀದಿ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಅವರು ತಮ್ಮದೇ ಕಾಂಪೋಸ್ಟ್ ಘಟಕವನ್ನು ಸ್ಥಾಪಿಸಿದರು.

2008 ರಲ್ಲಿ ಸಂಜೀವ್ ಅವರು ಬೀಜೋತ್ಪಾದನೆಗಾಗಿ ಅಣಬೆ ಬೆಳೆಸಲು ಮತ್ತು ಅವುಗಳನ್ನು ಮಾರಾಟ ಮಾಡಲು ಅಗತ್ಯವಿರುವ ಪ್ರಯೋಗಾಲಯವನ್ನು ಸ್ಥಾಪಿಸಿದರು. ಕೆಲವೇ ವರ್ಷಗಳಲ್ಲಿ, ಅವರ ಅಣಬೆ ಕೃಷಿ ಪ್ರದೇಶವು 1,500 ಚದರ ಅಡಿ ಪ್ರದೇಶಕ್ಕೆ (2 ಎಕರೆ ಭೂಮಿಗೆ ಸಮ) ವಿಸ್ತರಿಸಿತು.

Home

ತಾವು ಉತ್ಪಾದಿಸುವ ಅಣಬೆ ಬೀಜಗಳು ಮತ್ತು ಉತ್ಪನ್ನಗಳು ಜಮ್ಮು, ಜಲಂಧರ್, ಹರಿಯಾಣ, ಹಿಮಾಚಲ, ಮತ್ತು ಇತರ ನೆರೆಯ ರಾಜ್ಯಗಳಿಗೂ ತಲುಪಲಾರಂಭಿಸಿದವು ಎಂದು ಸಂಜೀವ್ ಹೇಳುತ್ತಾರೆ. ಕೆಲವೇ ವರ್ಷಗಳಲ್ಲಿ, ಅವರ ಅಣಬೆ ಉತ್ಪಾದನೆಯು ದಿನಕ್ಕೆ ಏಳು ಕ್ವಿಂಟಾಲ್ ನಷ್ಟಾಯಿತು. ಈಗ ಅವರು ಅಣಬೆ ಕೃಷಿಯಿಂದ ಪಡೆಯುವ ವಾರ್ಷಿಕ ಆದಾಯ 1.25 ಕೋಟಿ ರೂ.ಗಳಿಗೆ ತಲುಪಿದೆ.

Categories

ಅವರ ಯಶಸ್ಸಿನ ಹಿಂದಿನ ಕಾರಣವೆಂದರೆ ಅಣಬೆಗಳಿಗೆ ಇರುವ ಲಾಭದಾಯಕ ಮಾರುಕಟ್ಟೆ. “ಅಣಬೆಗಳು ಹೆಚ್ಚಿನ ಮಾರುಕಟ್ಟೆ ಸಾಮರ್ಥ್ಯವನ್ನು ಹೊಂದಿವೆ. ಆಹಾರವನ್ನು ಬೆಳೆಯಲು ಯೋಗ್ಯವಾದ ಕೃಷಿ ಭೂಮಿ ಕ್ಷೀಣಿಸುತ್ತಿದೆ. ಹೀಗಾಗಿ ಕಡಿಮೆ ಭೂಮಿಯಲ್ಲೇ ಹೆಚ್ಚಿನ ಬೆಳೆ ಬೆಳೆಯುವ ಒತ್ತಡ ಹೆಚ್ಚುತ್ತಿದೆ. ಅಣಬೆಗಳನ್ನು ಬೆಳೆಯಲು ಬಳಸುವ ಲಂಬ ಕೃಷಿ ವಿಧಾನ ಆ ಜಾಗವನ್ನು ಉಳಿಸಲು ಸಹಾಯ ಮಾಡುತ್ತದೆ. ಎರಡು ಎಕರೆ ಭೂಮಿಯಿಂದ 1 ಕೋಟಿ ರೂ. ಸಂಪಾದಿಸುತ್ತೇನೆ. ಸಾಂಪ್ರದಾಯಿಕ ಕೃಷಿಯ ಮೂಲಕ ಅದೇ ಪ್ರಮಾಣದ ಹಣವನ್ನು ಗಳಿಸಲು ಸುಮಾರು 200 ಎಕರೆ ಭೂಮಿಯ ಅವಶ್ಯಕತೆಯಿದೆ’ ಎನ್ನುತ್ತಾರೆ ಸಂಜೀವ್ ಸಿಂಗ್.

ತಮ್ಮ ಪ್ರಗತಿಪರ ಕೃಷಿ ಪದ್ಧತಿಗಳಿಗಾಗಿ 2015 ರಲ್ಲಿ ಪಂಜಾಬ್‌ ಸರ್ಕಾರದಿಂದ ರಾಜ್ಯ ಪ್ರಶಸ್ತಿಯ ಗೌರವ ಅವರಿಗೆ ದೊರೆತಿದೆ. ಸ್ಥಳೀಯರಿಂದ ‘ಪಂಜಾಬ್‌ನ ಮಶ್ರೂಮ್ ಕಿಂಗ್’ ಎಂಬ ಬಿರುದನ್ನೂ ಗಳಿಸಿದ್ದಾರೆ.

ವರ್ಷವಿಡೀ ಅಣಬೆಗಳನ್ನು ಬೆಳೆಸಬಹುದು ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಗುರಿಯಾಗುವುದಿಲ್ಲ ಎಂದು ಸಂಜೀವ್ ಹೇಳುತ್ತಾರೆ. “ಇಂತಹ ನವೀನ ಪರಿಹಾರಗಳು ಮಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರೈತರು ಉತ್ತಮ ಜೀವನವನ್ನು ಗಳಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.

-ಚಂದ್ರಶೇಖರ ಕುಳಮರ್ವ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮನಪಾ ಚುನಾವಣೆ: ಪೂಜಾರಿ ನಿಷ್ಠರ ಕಡೆಗಣನೆಗೆ ಆಕ್ರೋಶ

Upayuktha

ಹೊರ ರಾಜ್ಯಗಳಿಂದ ಕೇರಳಕ್ಕೆ ಬರುವವರಿಗಾಗಿ ತಲಪಾಡಿಯಲ್ಲಿ 100 ಹೆಲ್ಪ್ ಡೆಸ್ಕ್

Upayuktha

ಹವ್ಯಾಸ: ಸುಮಧುರ ಅನುಭವ ನೀಡುವ ಮುಜಂಟಿ ಜೇನುಗೂಡು

Upayuktha