ಕ್ಯಾಂಪಸ್ ಸುದ್ದಿ ಲೇಖನಗಳು

ಬಾಲ್ಯ ಜೀವನದ ಸವಿ ನೆನಪುಗಳನ್ನು ಮರೆಯಲು ಸಾಧ್ಯವೇ?

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ತಾನು ಕಳೆದ ಬಾಲ್ಯದ ಸವಿ ನೆನಪುಗಳು ಅವಿಸ್ಮರಣೀಯ. ಹಾಗೆ ಕೆಲವೊಂದು ನೆನಪುಗಳು ಮಾತ್ರ ನಮ್ಮ ತಲೇಲಿ ಹಚ್ಚ ಹಸುರಾಗಿ ಉಳ್ಕೊಳ್ಳುತ್ತದೆ. ಅದರಲ್ಲಿಯೂ ಕೆಲವೊಂದು ಸಿಹಿ ನೆನಪುಗಳು, ಇನ್ನು ಕಹಿ ಆಗಿರುತ್ತದೆ. ಬಾಲ್ಯದ ದಿನಗಳು ನೆನೆದಷ್ಟು ಮುಗಿಯದ ಸವೆಯದ ಮಧುರವಾದ ಪಯಣ, ಕಾರಣವೇ ಇಲ್ಲದ ನಲಿವು ಒಲಿವು ಚಿಕ್ಕ ಚಿಕ್ಕ ಕಾರಣಕ್ಕೂ ಸಂಭ್ರಮಿಸಿದ್ದೇ ಗೆಲುವಾಗಿತ್ತು. ಬಾಲ್ಯ ಜೀವನ ಒಂದು ಮುಗ್ದತೆಯ ಚೆಲುವಾಗಿತ್ತು.

ಶಾಲೆಗೆ ಸೇರುವ ಮುನ್ನ ಮನೆಯಲ್ಲಿ ಮಣ್ಣಿನಲ್ಲಿ ಆಟ ಆಡಿದ್ದು, ಅಮ್ಮನ ಜೊತೆ ಜಗಳ ಆಡಿದ್ದು ಮನೆಯ ಅಕ್ಕ ಪಕ್ಕದ ಗೆಳೆಯ ಗೆಳತಿಯರೊಂದಿಗೆ ಆಟಡಿದ ದಿನಗಳು ಸುಂದರವಾಗಿತ್ತು. ಶಾಲಾ ದಿನಗಳ ಆರಂಭದಲ್ಲಿ ಶಾಲೆಗೆ ಹೋಗಲು ತಲೆ ನೋವು ಅನಿಸುತಿತ್ತು. ಹೀಗೆ ದಿನಗಳು ಉರುಳಿದಾಗ ಮನೆಯಲ್ಲಿ ಇರುವುದಕ್ಕಿಂತ ಶಾಲೆಯಲ್ಲಿಯೇ ಗೆಳೆಯ ಗೆಳತಿಯರೊಂದಿಗೆ ಇರುವುದು ಉತ್ತಮ ಎನಿಸುತ್ತಿತ್ತು.

ಹೊಸ ಪುಸ್ತಕ, ಸ್ಲೇಟ್ ಗಳನ್ನು ಒಳಗೊಂಡ ಹೊಸ ಬ್ಯಾಗ್ ನ್ನು ಬೆನ್ನಿಗೆ ಹಾಕಿಕೊಂಡು ತುಂಬಾ ಖುಷಿಯಿಂದ ಹೋಗ್ತಾ ಇದ್ದದ್ದು, ಹಾಗೆ ಕೈಯಲ್ಲಿ ಪೆನ್ನಿನಿಂದ ಬರೆದು ಅದರ ಪರಿಮಳ ಹೀರೋದು ಹೊಸ ಪೆನ್ನ್ ಮತ್ತು ಪೆನ್ಸಿಲ್ ಬಳಸದೆ ಹಳೆ ಪೆನ್ಸಿಲ್ ಮತ್ತೆ ಪೆನ್ನುಗಳನ್ನೇ ಜೋಡಿಸಿ ಮತ್ತೆ ತಿಂಗಳ ಕಾಲ ಬಳಸಿದ್ದು, ಗೆಳೆಯ ಗೆಳತಿಯರ ಜೊತೆಗೆ ಹರಟೆ ಹೊಡೆಯುತ್ತಿದ್ದದ್ದು, ಬೆಂಚ್ ಬೆಂಚಿಗು ನಡೆಯುತ್ತಿದ್ದ ಜಗಳ, ಗುರುವಿನ ಜೊತೆಗಿನ ನಯ ವಿನಯದ ಸಾಂಗತ್ಯ, ಪೆನ್ಸಿಲ್ ಬಳಪದ ಕಡ್ಡಿ ಮುರಿದಳೆಂದು ನಡೆಯುತ್ತಿದ್ದ ಜಗಳಗಳು… ಹೀಗೆ ಹಲವು ಮರೆಯಲಾರದ ಘಟನೆಗಳು ಇಂದು ಖುಷಿಯೆನಿಸುತ್ತವೆ.

ವಾರದಲ್ಲೊಮ್ಮೆ ತರಗತಿ ಗುಡಿಸುವ ಸರದಿಯಲ್ಲಿ ತೋರುವ ಉತ್ಸಾಹ ಹಾಗೂ ಅಸಡ್ಡೆಗಳು, ಪಾಠಗಳ ವಿಷಯಗಳಿಗೆ ಮೀಸಲಿಡುತಿದ್ದ ಸಮಯಗಳು, ಮಂತ್ರಿಗಳಂತೆ ವರ್ತಿಸುತಿದ್ದ ಕ್ಲಾಸ್ ಲೀಡರ್, ಹಾಗೆ ನಮ್ಮಲ್ಲೇ ಕೆಲವೊಂದು ಗುಂಪುಗಳು, ಸಣ್ಣ ಸಣ್ಣ ವಿಷಯಗಳಿಗೂ ಜಗಳ ಆಡಿ ಮಾತು ಬಿಡೋದು.. ಆಮೇಲೆ ಸ್ವಲ್ಪ ದಿನ ಆದ ಮೇಲೆ ಮತ್ತೆ ಒಂದಾಗುತ್ತಿದ್ದೆವು.. ಶಾಲೆಯಲ್ಲಿ ವಾರ್ಷಿಕೋತ್ಸವದ ದಿನ ಡ್ಯಾನ್ಸ್ ಮಾಡಿದ್ದೂ, ಊಟಕ್ಕೆ ಬಿಟ್ಟಾಗ ಫ್ರೆಂಡ್ ಜೊತೆ ಸೇರಿ ಊಟ ಮಾಡುವಾಗ ಎಲ್ಲರೂ ಟಿಫನ್ ತೆಗೆದು ಹಂಚಿ ತಿಂದಿದ್ದು ಮಾತ್ರ ಮರೆಯೋಕೆ ಸಾಧ್ಯನೇ ಇಲ್ಲಾ.

ಹೀಗೇನೆ ನಮ್ಮ ಜೀವನದಲ್ಲಿ ಮರೆಯಲಾಗದ ಕೆಲವು ನೆನಪುಗಳು ಅಂದರೆ ಅದು ನಮ್ಮ ಬಾಲ್ಯ ಜೀವನ ಮಾತ್ರ. ಆದರೆ ಬೆಳೆಯುತ್ತಾ ಹೋದಾಗ ನಾವು ಬಾಲ್ಯದ ಖುಷಿಯನ್ನು ಮತ್ತೆ ಎಂದು ಪಡೆಯಲು ಸಾಧ್ಯ ವಾಗುದೇ ಇಲ್ಲಾ.. ನಮ್ಮ ಬಾಲ್ಯದ ಜೀವನದ ನೆನಪುಗಳು ಹೊರತು ಇನ್ನೊಮ್ಮೆ ಬಾಲ್ಯದ ಜೀವನವನ್ನು ಪಡೆಯಲು ಸಾಧ್ಯವೇ..?

-ನಿರೀಕ್ಷಾ ಸಿ. ಚೀಮುಳ್ಳು
ಪ್ರಥಮ ಬಿಎ ಪತ್ರಿಕೋದ್ಯಮ
ವಿವೇಕಾನಂದ ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಪುತ್ತೂರು: ರಾಷ್ಟ್ರೀಯ ಶಿಕ್ಷಣ ನೀತಿ– 2020ರ ಕುರಿತು ಮಾಹಿತಿ ಕಾರ್ಯಾಗಾರ ನಾಳೆ

Upayuktha

ಎಸ್‌ಡಿಎಂ ಕಾಲೇಜು ಕ್ರೀಡಾಕೂಟ: ಆಕರ್ಷಿಸಿದ ಆಶಾವಾದಿ ಸದಾಶಯಗಳ ಪಥಸಂಚಲನ

Upayuktha

ನಾಲ್ವರು ಪ್ರತಿಭಾವಂತರಿಗೆ ಮಾಮ್ ಇನ್‍ಸ್ಪೈರ್ ಪ್ರಶಸ್ತಿ ಪ್ರದಾನ

Upayuktha