ಚಿತ್ರ ಸುದ್ದಿ ದೇಶ-ವಿದೇಶ ಪ್ರಮುಖ

ಕಮಲ ಹಿಡಿದ ‘ಮೆಟ್ರೋ ಮ್ಯಾನ್’ ಶ್ರೀಧರನ್

ನವದೆಹಲಿ: ‘ಮೆಟ್ರೋ ಮ್ಯಾನ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಇ. ಶ್ರೀಧರನ್ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಇಂದು ಸ್ಪಷ್ಟನೆ ನೀಡಿದ್ದಾರೆ.

ವರದಿಗಳ ಪ್ರಕಾರ, ಫೆಬ್ರವರಿ 21 ರಿಂದ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ನೇತೃತ್ವದಲ್ಲಿ ನಡೆಯಲಿರುವ ವಿಜಯ ಯಾತ್ರೆಯಲ್ಲಿ ಅವರು ಔಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಇವರು 1995 ರಿಂದ 2012ರ ವರೆಗೆ ದೆಹಲಿ ಮೆಟ್ರೋದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, ಕೊಂಕಣ ರೈಲ್ವಿಯ ಕನಸನ್ನು ಸಾಕಾರಗೊಳಿಸಿದವರು ಇವರೇ. ಇವರಿಗೆ 2001ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಪೂರ್ಣ ಪ್ರಮಾಣದ ತರಗತಿಗಳ ಆರಂಭದ ಬಗ್ಗೆ ಶಿಕ್ಷಣ ಸಚಿವರು ಶಿವಮೊಗ್ಗದಲ್ಲಿ ಏನೆಂದರು?

Upayuktha

ಇಂದು (ಮಾ.12) ವಿಶ್ವ ಕಿಡ್ನಿ ದಿನ: ನಮಗಿರುವುದು ಎರಡೇ ಕಿಡ್ನಿ, ಕಾಪಾಡಿಕೊಳ್ಳೋಣ…

Upayuktha

ಪರಿಷತ್ತಿನ 4, ವಿಧಾನಸಭೆಯ ಎರಡೂ ಸ್ಥಾನದಲ್ಲಿ ಬಿಜೆಪಿ ಗೆಲುವು ಶತಸ್ಸಿದ್ಧ: ಬಿಎಸ್‌ವೈ

Upayuktha