ಕಲ್ಲುಗುಡ್ಡೆ:- ಭಾರತೀಯ ಜೈನ್ ಮಿಲನ್ ವಲಯ-8, ಇಜಿಲಂಪಾಡಿ ಶಾಖೆ ಇದರ ಮಾಸಿಕ ಸಭೆಯಲ್ಲಿ ಬಹುಮುಖ ಪ್ರತಿಭೆ ,ಯುವ ಸಾಹಿತಿ ,ರಾಜ್ಯ-ಅಂತರ್ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಿಲನ್ ಸದಸ್ಯ ಹೊಸಂಗಡಿ ಬಸದಿ ಸಮ್ಯಕ್ತ್ ಜೈನ್ ರವರನ್ನು ” ಮಿಲನ್ನ ಯುವ ಪ್ರತಿಭೆ” ಎಂದು ಸನ್ಮಾನಿಸಿ ,ಗೌರವಿಸಲಾಯಿತು.
ಸಭೆಯು ಇಜಿಲಂಪಾಡಿ ಬೀಡು ಶುಭಾಕರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ನಡೆದಿದ್ದು , ಭಾರತೀಯ ಜೈನ್ ಮಿಲನ್ ವಲಯ-8 ಮಂಗಳೂರು ವಿಭಾಗದ ನಿರ್ದೇಶಕರಾದ ರಾಜವರ್ಮ ಆರಿಗ ,ಇಚಿಲಂಪಾಡಿ ಜೈನ್ ಮಿಲನ್ ಅಧ್ಯಕ್ಷ ಮಹಾವೀರ್ ಜೈನ್ , ಕಾರ್ಯದರ್ಶಿ ಸುರಭಿ ಜಯಕುಮಾರ್ ,ಸ್ಥಾಪಕಾಧ್ಯಕ್ಷ ರವಿರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು .
ಇವರು ಕಡಬ ತಾಲೂಕು ನೂಜಿಬಾಳ್ತಿಲ ಧರಣೇಂದ್ರ ಇಂದ್ರ ಹಾಗು ಮಂಜುಳಾರವರ ಸುಪುತ್ರ