ಅಪರಾಧ ನಗರ ಪ್ರಮುಖ ಸ್ಥಳೀಯ

ಕೋಮು ಪ್ರಚೋದನೆಗೆ ದುಷ್ಕರ್ಮಿಗಳ ಸಂಚು: ಅವಹೇಳನಕಾರಿ ಬರಹದ ನೋಟುಗಳನ್ನು ದೈವಸ್ಥಾನಗಳ ಕಾಣಿಕೆ ಡಬ್ಬಿಗೆ ಹಾಕಿದ ದುರುಳರು

ಮಂಗಳೂರು: ಮಂಗಳೂರು ನಗರದ ವಿವಿಧ ದೈವಸ್ಥಾನಗಳ ಕಾಣಿಕೆ ಹುಂಡಿಗಳಲ್ಲಿ ಸಮಾಜಘಾತುಕರು ನಕಲಿ ನೋಟುಗಳಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವ ಬರಹಗಳನ್ನು ಬರೆದು ಹಾಕಿರುವುದು ಪತ್ತೆಯಾಗಿದೆ.

ನಗರದ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಗುಡ್ಡೆ ಬಬ್ಬುಸ್ವಾಮಿ ಕ್ಷೇತ್ರ ಸೇರಿದಂತೆ ಕೆಲವು ದೈವಸ್ಥಾನಗಳಲ್ಲಿ ಇದೇ ರೀತಿ ಅವಹೇಳನಕಾರಿ ಬರಹಗಳಿರುವ ನೋಟುಗಳು ಪತ್ತೆಯಾಗಿವೆ. ಅಲ್ಲದೆ ಒಂದು ಕಡೆ ಬಳಸಿದ ಕಾಂಡೋಮ್ ಕೂಡ ಕಾಣಿಕೆ ಡಬ್ಬಿಯೊಳಗೆ ಹಾಕಿ ವಿಕೃತಿ ಮೆರೆದಿರುವುದು ಪತ್ತೆಯಾಗಿದೆ.

ಧಾರ್ಮಿಕ ಹಾಗೂ ಕೋಮು ಸೂಕ್ಷ್ಮತೆ ಹೊಂದಿರುವ ಕರಾವಳಿ ಜಿಲ್ಲೆಗಳಲ್ಲಿ ಪದೇ ಪದೇ ಕೋಮು ಗಲಭೆಗೆ ಪ್ರಚೋದನೆ ನೀಡುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಕ್ರೈಸ್ತ ಧರ್ಮವನ್ನು ಪ್ರತಿಪಾದಿಸಿ ಬರಹ ಬರೆದಿರುವ ದುಷ್ಕರ್ಮಿಗಳು, ಈ ಕೃತ್ಯವನ್ನು ಕ್ರೈಸ್ತ ಮಿಷನರಿಗಳು ನಡೆಸಿರಬೇಕೆಂಬ ಭಾವನೆ ಬರುವಂತೆ ಮಾಡುವ ಯತ್ನ ನಡೆಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಹಿಂದೂ-ಕ್ರೈಸ್ತ ಧರ್ಮೀಯರ ನಡುವೆ ಉತ್ತಮ ಸೌಹಾರ್ದತೆಯಿದ್ದು, ಅದನ್ನು ಕೆಡಿಸಲು ಹಲವು ರೀತಿಯ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ನಡೆದಿವೆ. ಆದರೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂತಹ ಪ್ರಚೋದನೆಗಳಿಗೆ ಯಾವುದೇ ಕಿಮ್ಮತ್ತು ನೀಡಿಲ್ಲ. ದುಷ್ಕರ್ಮಿಗಳು ಈಗ ನಡೆಸಿರುವುದೂ ಅಂತಹದೇ ಸಂಚಿನ ಭಾಗವಾಗಿದೆ ಎಂದು ಜಾಗರಿಕರು ಆರೋಪಿಸಿದ್ದಾರೆ.

ಯಾರೇ ಈ ಕೃತ್ಯ ನಡೆಸಿದ್ದರೂ ಅವರಿಗೆ ದೈವಸ್ಥಾನದ ಕಾರಣೀಕ ದೈವಗಳು ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಬಲವಾಗಿ ನಂಬಿರುವ ಗ್ರಾಮಸ್ಥರು, ಊರ ಭಕ್ತಾದಿಗಳು ದೈವದ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಶೈಲೇಶ್ ಶೆಟ್ಟಿ, ಭರತ್ ಕುಮಾರ್‌ ಎಸ್‌. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರತೀಂದ್ರನಾಥ ಎಚ್‌, ಅಖಿಲ ಭಾರತ ಮುಂಡಾಲ ಯುವ ವೇದಿಕೆ, ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಅತ್ತಾವರ ಶಾಖೆ, ಛತ್ರಪತಿ ಶಾಖೆ, ಬಾಬುಗುಡ್ಡೆ ಶಾಖೆಯ ಸದಸ್ಯರು ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

2 ದಿನ ಮುಷ್ಕರ, 2 ದಿನ ರಜೆ: ಸೆ.26ರಿಂದ 29ರ ವರೆಗೆ 4 ದಿನ ಬ್ಯಾಂಕ್‌ ವ್ಯವಹಾರ ಸ್ಥಗಿತ

Upayuktha

ಪುಂಜಾಲಕಟ್ಟೆ: ಹೂಡಿಕೆದಾರರ ಅರಿವು- ಆನ್‌ಲೈನ್ ಕಾರ್ಯಕ್ರಮ

Upayuktha

ಕೊರೊನಾ: ದಕ ಜಿಲ್ಲೆಯಲ್ಲಿ ಇಂದು ವರದಿ ಬಂದ ಎಲ್ಲ ಪ್ರಕರಣಗಳೂ ನೆಗೆಟಿವ್

Upayuktha