ಜಿಲ್ಲಾ ಸುದ್ದಿಗಳು

ಮಂಗಳೂರು ಹೋಟೆಲ್ ನಲ್ಲಿ ಕಿಡಿಗೇಡಿಗಳಿಂದ ಹಲ್ಲೆ

ಮಂಗಳೂರು:  ನಿನ್ನೆ ಸಂಜೆಯ ವೇಳೆ ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರ್ ಎಂಬಲ್ಲಿರುವ ಎಂ. ಎಫ್.ಸಿ.  ಹೋಟೆಲ್‌ ಬಳಿ 5 ಮಂದಿ ಅಪರಿಚಿತ ಗ್ರಾಹಕರು ತಿಂಡಿ ತಿನ್ನಲು ಹೋಟೆಲ್ ಗೆ ಪ್ರವೇಶಿಸಿ, ಅನುಮತಿಯಿಲ್ಲದೆ ತಿಂಡಿ ತಿನಿಸುಗಳನ್ನು ತಾವೇ ಕೈ ಹಾಕಿ ತೆಗೆದುಕೊಂಡ ಪರಿಣಾಮ ಕಲಹ ಉಂಟಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಯುವಕರ ತಂಡ ಹೋಟೇಲ್ ಸಪ್ಲೈಯರ್ ನೊಡನೆ ಅವ್ಯಾಚ್ಯ ಶಬ್ದಗಳಿಂದ ಬೈದು ಗಲಾಟೆ ನಡೆಸಿ ಅಲ್ಲಿದ್ದ ಪ್ಲೇಟ್ ಗ್ಲಾಸ್‌ಗಳನ್ನು ಒಡೆದು ಹಾಕಿ ಹಾಗೆಯೇ ಟೇಬಲ್, ಕುರ್ಚಿ, ಗಾಜು, ಪಿಠೋಪಕರಣಗಳನ್ನು ಹಾಳು ಮಾಡಿ ತೊಂದರೆ ಕೊಟ್ಟಿದ್ದಾರೆ .

ಈ ಸಂದರ್ಭದಲ್ಲಿ ಹೊಟೇಲ್ ಯುವಕರು ತಡೆಯಲು ಹೋದಾಗ ಅವರಿಗೆ ಆರೋಪಿಗಳು ಕೈಯಿಂದ ಮತ್ತು ಕೆಲ ಆಯುಧದಿಂದ ಹಲ್ಲೆ ನಡೆಸಿ ಕೆಲಸಗಾರರಾದ ಸೈಫ್ ಮತ್ತು ಸಾಹೀಲ್‌ರವರಿಗೆ ಗಾಯಗೊಳಿಸಿದ್ದಾರೆ. ಹಾಗೆ ಮಾತ್ರವಲ್ಲದೆ ಎಂಎಫ್ಸಿ ಹೊಟೇಲ್ ಸಿಬ್ಬಂದಿಗಳ ಮೇಲೆ ರಿವಾಲ್ವಾರಿನಿಂದ ಗುಂಡು ಹಾರಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿರುತ್ತಾರೆ.

ನಂತರ ಎಂಎಫ್ಸಿ ಹಳೆಯ ಹೊಟೇಲಿನ ಸಿಬ್ಬಂದಿಗಳು ಅಲ್ಲಿಂದ ಪರಾರಿಯಾಗಲು ನೋಡಿದಾಗ ಅದೇ ರಸ್ತೆಯ ಪಕ್ಕದಲ್ಲಿರುವ ಹೊಸ ಎಂ.ಎಫ್.ಸಿ. ಹೋಟೇಲ್‌ನ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಆ ಸಮಯದಲ್ಲಿ ಅವರುಗಳು ಮತ್ತು ಸ್ಥಳೀಯರು ಒಟ್ಟು ಸೇರಿ ರಸ್ತೆಯಲ್ಲಿ ಆರೋಪಿಗಳನ್ನು ತಡೆದು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳು ಉಳ್ಳಾಲದ ನಿವಾಸಿಗಳಾದ (1) ಇಜಾಜ್ (2) ಜುನೈದ್ ಎಂದು ತಿಳಿದು ಬಂದಿರುತ್ತದೆ. ಉಳಿದ ಮೂರು ಜನ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಹೋಟೆಲ್ ಓರ್ವ ಸಿಬ್ಬಂದಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೋರ್ವ ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಘಟನೆಗೆ ಕಾರಣ ಹಳೆಯ ಹಣಕಾಸಿನ ವಿಚಾರದಲ್ಲಿ ಹಗೆತನ ಇರುವುದರ ಬಗ್ಗೆ ಸಾರ್ವಜನಿಕರು ಸ್ಥಳದಲ್ಲಿ ಮಾತನಾಡಿಕೊಳ್ಳುತ್ತಿದ್ದು, ಈ ಬಗ್ಗೆ ಪೊಲೀಸ್ ತನಿಖೆಯ ನಂತರ ನಿಜಾಂಶ ತಿಳಿದು ಬರಬೇಕಾಗಿದೆ.

ಗಲಾಟೆ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣ ಕ್ಕೆ ಬಂದಿದ್ದು, ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Related posts

ಟಾಟಾ ಕೋವಿಡ್ ಆಸ್ಪತ್ರೆ ಹಸ್ತಾಂತರ: ನೇಪಥ್ಯದಲ್ಲೇ ಸಂತೃಪ್ತಿ ಪಟ್ಟವರ್ಯಾರು ಗೊತ್ತೇ…?

Upayuktha

ಕೋವಿಡ್ ಚಿಕಿತ್ಸೆಗಾಗಿ ದ.ಕ. ಜಿಲ್ಲೆಯಲ್ಲಿ 3500 ಹಾಸಿಗೆ ಸಿದ್ಧ

Upayuktha

ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಐದನೇ ಬಲಿ, ರಾಜ್ಯದಲ್ಲಿ 22 ಹೊಸ ಪ್ರಕರಣ

Upayuktha

Leave a Comment