ನಗರ ಸ್ಥಳೀಯ

ಹೊಸಬೆಟ್ಟು ವಾರ್ಡ್ 8ರಲ್ಲಿ ನೀರು ಶೇಖರಣಾ ಘಟಕಕ್ಕೆ ಡಾ.ಭರತ್ ಶೆಟ್ಟಿ ಶಂಕುಸ್ಥಾಪನೆ

ಹೊಸಬೆಟ್ಟು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು 24×7 ಪೂರೈಸುವ ನಿಟ್ಟಿನಲ್ಲಿ ನೀರು ಶೇಖರಣಾ ಘಟಕವನ್ನು ಹೊಸಬೆಟ್ಟು ವಾರ್ಡ್ 8ರ ಕಾನ ಬಳಿ ನಿರ್ಮಿಸಲು ಯೋಜಿಸಲಾಗಿದ್ದು, ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

ಕರ್ನಾಟಕ ಸರಕಾರದ ದೂರದೃಷ್ಟಿಯ ಜಲಸಿರಿ ಯೋಜನೆಯಡಿ ನಿರ್ಮಾಣವಾಗಲಿರುವ ಈ ನೀರು ಶೇಖರಣಾ ಘಟಕ ಮಂಗಳೂರು ಮಹಾನಗರ ಪಾಲಿಕೆಯ ಮೂಲಕ ಅನುಷ್ಟಾನಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಉಪಮೇಯರ್ ವೇದಾವತಿ, ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ಮನಪಾ ಸದಸ್ಯರುಗಳಾದ ಶೋಭಾ ರಾಜೇಶ್, ಸರಿತಾ ಶಶಿಧರ್, ನಯನ ಕೋಟ್ಯಾನ್, ಪಕ್ಷದ ಪ್ರಮುಖರಾದ ವಿಠಲ ಸಾಲ್ಯಾನ್ ಮಂಡಲ ಉಪಾಧ್ಯಕ್ಷರು, ಪದ್ಮನಾಭ ಸುವರ್ಣ, ರಮಾನಾಥ, ಲೀಲಾವತಿ, ಕೇಶವ್ ಹಾಗೂ ಕಾರ್ಯಕರ್ತರು ಜೊತೆಗಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮೂಳೂರು ಶ್ರೀ ಮುಂಡಿತ್ತಾಯ ವೈದ್ಯನಾಥ ಕ್ಷೇತ್ರದ ವಾರ್ಷಿಕ ಬಂಡಿ ಉತ್ಸವ

Upayuktha

ಸಂಕ್ಷಿಪ್ತ ಸುದ್ದಿಗಳು:  ಡಿಪ್ಲೋಮಾ ಬಾಕಿ- ಪರೀಕ್ಷೆಗೆ ಕೊನೆಯ ಅವಕಾಶ

Upayuktha

ನೆಲ್ಯಾಡಿಯಲ್ಲಿ ಮುಖಾಮುಖಿಯಾದ ಗ್ಯಾಸ್-ಡೀಸೆಲ್ ಟ್ಯಾಂಕರ್

Sushmitha Jain