ನಗರ ಸ್ಥಳೀಯ

10 ಲಕ್ಷ ರೂ ವೆಚ್ಚದ ಹೊಸಬೆಟ್ಟು-ವೃಂದಾವನ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸಬೆಟ್ಟು ವೃಂದಾವನ ನಗರ ರಸ್ತೆಯನ್ನು 10 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.

ಶಾಸಕರ ಜೊತೆಗೆ ಉಪಮೇಯರ್ ವೇದಾವತಿ, ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ಲೋಕೇಶ್ ಬೊಳ್ಳಾಜೆ, ವಿಠಲ್ ಸಾಲ್ಯಾನ್ ಉತ್ತರ ಮಂಡಲ ಉಪಾಧ್ಯಕ್ಷರು, ،ಪ್ರಮುಖರಾದ ಪದ್ಮನಾಭ ಪೂಜಾರಿ ،ರವಿ ಶೆಟ್ಟಿ, ಆನಂದ್ ಭಂಡಾರಿ, ದಿನೇಶ್ ದೇವಾಡಿಗ, ಮಹಿಳಾ ಮೋರ್ಚಾ ಜಿಲ್ಲಾ ಸದಸ್ಯೆ ಲೀಲಾವತಿ ,ಮಹಿಳಾ ಮೋರ್ಚಾ ಉತ್ತರ ಮಂಡಲ ಉಪಾಧ್ಯಕ್ಷ ಪವಿತ್ರ ನಿರಂಜನ್ ،ಬೃಂದಾವನ ನಗರ ಅಧ್ಯಕ್ಷರಾದ ಜಯಶಂಕರ್ ،ಅಡ್ವೋಕೇಟ್ ರಾಘವೇಂದ್ರ ಆಚಾರ್, ಶಕ್ತಿ ಕೇಂದ್ರ ಪ್ರಮುಖ್ ಪ್ರಜ್ವಲ್ ಶೆಟ್ಟಿ ،ಬೂತ್ ಅಧ್ಯಕ್ಷರಾದ ಅಶೋಕ್ ،ದೀಕ್ಷಿತ್, ದಿನೇಶ್ ದೇವಾಡಿಗ ಇನ್ನಿತರರು ಉಪಸ್ಥಿತರಿದ್ದರು.

ಆಕಾಶಭವನ 5 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ವೈ.ಭರತ್ ಶೆಟ್ಟಿ ಚಾಲನೆ

ಮಂಗಳೂರು: ಅಕಾಶಭವನ ಲಾಸ್ಟ್ ಸ್ಟಾಪ್ ಸಮೀಪ ಮಂಗಳೂರು ಮಹಾನಗರ ಪಾಲಿಕೆಯಿಂದ ತಾಜ್ಯ ನೀರು ಕೊಳವೆ ಅಳವಡಿಕೆ ಮತ್ತು ರಸ್ತೆ ಅಭಿವೃದ್ಧಿಗೆ 5 ಲಕ್ಷ ವೆಚ್ಚದಲ್ಲಿ ನೂತನ ಕಾಮಗಾರಿಗೆ ಶಾಸಕರಾದ ವೈ.ಭರತ್ ಶೆಟ್ಟಿ ಹಾಗೂ ಮ.ನ.ಪಾ ಸದಸ್ಯೆ ಗಾಯತ್ರಿ ರಾವ್ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಶಕ್ತಿ ಕೇಂದ್ರದ ಪ್ರಮುಖ್ ಪ್ರಜ್ವಲ್ ಶೆಟ್ಟಿ, ಪಕ್ಷದ ಪ್ರಮುಖರಾದ ನವೀನ್ ಚಂದ್ರ ಪೂಜಾರಿ, ಬೂತ್ ಅಧ್ಯಕ್ಷರಾದ ಲತೀಶ್ ಗಾಣಿಗ, ಜಯರಾಮ್ ಕೋಟ್ಯಾನ್, ಸಚಿನ್ ಶೆಟ್ಟಿ, ಅಶ್ವಿನ್ ಅಮೀನ್, ಜಗದೀಶ್ ಅಂಚನ್, ಸುಹಾನ್ ನಿತೇಶ್, ಸ್ಥಳೀಯ ನಿವಾಸಿಗಳಾದ ಸಾತ್ವಿನ್, ರೋಶನ್, ಮಣಿಕಂಠ, ವಿನ್ಯಾಸ್, ಶ್ರೀಧರ್, ಯಶವಂತ, ನಾರಾಯಣ ಶೆಟ್ಟಿ, ಪಾಲಿಕೆ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ, ಕಿರಿಯ ಎಂಜಿನಿಯರ್ ಖಾದರ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನುಡಿ ನಮನ: ಡಾ. ಕಂಗಿಲರ ಬದುಕಿನತ್ತ ಒಂದು ಪಕ್ಷಿ ನೋಟ

Upayuktha

ಕುಂಬಳೆ: ಯಕ್ಷ ಕವಿ ಪಾರ್ತಿಸುಬ್ಬ ರಸ್ತೆ ನಾಮಫಲಕ ಅನಾವರಣ

Upayuktha

ಇಂದಿನಿಂದ ರೇಡಿಯೋ ಪಾಂಚಜನ್ಯದಲ್ಲಿ ಯೋಗ ಶಿಕ್ಷಣ ಸರಣಿ ಕಾರ್ಯಕ್ರಮ

Upayuktha

Leave a Comment