ದೇಶ-ವಿದೇಶ

ರಾಜಸ್ಥಾನ ವಿಧಾನಸಭಾ ಕ್ಷೇತ್ರದ ಶಾಸಕ ಸಚಿನ್ ಪೈಲೆಟ್ ಕೋವಿಡ್ ಪಾಸಿಟಿವ್

ಜೈಪುರ್ : ರಾಜಸ್ಥಾನದಲ್ಲಿ ಕೋವಿಡ್ ಹೆಚ್ಚಾಗಿದ್ದು, ರಾಜ್ಯದ ಮಾಜಿ ಸಚಿವ ಹಾಗೂ ಟೊಂಕ್ ವಿಧಾನಸಭಾ ಕ್ಷೇತ್ರದ ಶಾಸಕ ಸಚಿನ್ ಪೈಲಟ್ ಅವರಿಗೆ ಕೊವಿಡ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ವರದಿಯಾಗಿದೆ.

ಸೋಂಕು ತಗುಲಿರುವ ಬಗ್ಗೆ ಸ್ವತಃ ಸಚಿನ್ ಪೈಲಟ್ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ. “ನನಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲ ಕಾರ್ಯಕರ್ತರು ಮತ್ತು ಸಂಪರ್ಕಿತರು ಮುನ್ನೆಚ್ಚರಿಕೆ ಕ್ರಮವಾಗಿ ಒಮ್ಮೆ ಕೊರೊನಾವೈರಸ್ ಸೋಂಕಿನ ತಪಾಸಣೆ ಮಾಡಿಸಿಕೊಳ್ಳಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವ ಹಿನ್ನೆಲೆ ವೈದ್ಯರ ಮೂಲಕ ಸೂಕ್ತ ಸಲಹೆಗಳನ್ನು ತೆಗೆದುಕೊಂಡಿದ್ದೇನೆ. ಆದಷ್ಟು ಶೀಘ್ರದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ” ಎಂದು ಸಚಿನ್ ಪೈಲಟ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Related posts

ಚಂದ್ರಯಾನ-2 ಇಳಿದಾಣದ ಹೈ ರೆಸೊಲ್ಯೂಷನ್ ಚಿತ್ರ ಬಿಡುಗಡೆ ಮಾಡಿದ ನಾಸಾ

Upayuktha

ದೇಶದಲ್ಲಿ ಅಮೆಜಾನ್‌ ಪೋರ್ಟಲ್ ಮೇಲೆ ನಿಷೇಧ ಹೇರಿ: ಸಿಎಐಟಿ ಒತ್ತಾಯ

Sushmitha Jain

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಎಚ್ ಎಸ್ ಪ್ರಣಯ್ ಅವರಿಗೆ ಕೋವಿಡ್ ನೆಗೆಟಿವ್

Harshitha Harish