ನಗರ ಸ್ಥಳೀಯ

ತಾಳ ಹಿಡಿದು ಭಜನೆ ಮಾಡಿದ ಶಾಸಕ…!

ಉಡುಪಿ: ಸಾಮಾನ್ಯವಾಗಿ ಕೆಲವು ನಿತ್ಯಜೀವನದ ಶಿಷ್ಟಾಚಾರಗಳು ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೂ ಗಣ್ಯರು ಜನಪ್ರತಿನಿಧಿಗಳಾದವರಿಗೆ ಸಂಬಂಧವೇ ಇಲ್ಲ ಎಂದು ಭಾವಿಸಿರುತ್ತೇವೆ. ಕೆಲವೊಮ್ಮೆ ಕಾರ್ಯದ ಒತ್ತಡದಿಂದಾಗಿಯೂ ಇವುಗಳಿಗಾಗಿ ಸಮಯ ಕೊಡುವ ವ್ಯವಧಾನವೂ ಇಲ್ಲದೇ ಹೋಗಬಹುದು.

ಆದರೆ ಇತ್ತೀಚೆಗಷ್ಟೇ ಶಾಸನಸಭೆ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯರು ಹಾಗೂ ವನ್ಯಜೀವಿ ಮಂಡಳಿಯ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ದಿಯವರು ಇಂದು ಶ್ರೀ ಕನ್ನಡಗಲ್ ಗ್ರಾಮದೇವಿ ದೇವಸ್ಥಾನ ಮಾವಳ್ಳಿಗೆ ಭೆಟಿ‌ ನೀಡಿ ತಾಯಿಯ ಕೃಪೆಗೆ ಪಾತ್ರರಾದರು. ಹಾಗೂ ಇದೆ ಸಮಯದಲ್ಲಿ‌ ಗ್ರಾಮಸ್ಥರು ‌ನಡೆಸುತ್ತಿರುವ ಭಜನೆಯಲ್ಲಿ ಸುಮಾರು ಒಂದು ಘಂಟೆ ಭಾಗಿಯಾಗಿ‌ ಸ್ವತಃ ಕೆಲವು ‌ಭಜನೆಗಳನ್ನು‌ ಹೇಳಿ‌ದರು.‌

ಅನೇಕ ವರ್ಷಗಳ ಕಾಲ ವನವಾಸಿ ಕಲ್ಯಾಣ ವಿಭಾಗದಲ್ಲಿ ಸ್ವಯಂಸೇವಕರಾಗಿ ತೊಡಗಿಸಿಕೊಂಡು ಗುಡ್ಡಗಾಡು ಪ್ರದೇಶಗಳಲ್ಲಿ ಅಲೆಯುತ್ತಾ ಅರಣ್ಯವಾಸಿಗಳ ಕಲ್ಯಾಣಕ್ಕಾಗಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ನಿರತಾರಾಗಿದ್ದಾಗ ಭಜನೆ, ಚರ್ಚೆ, ಕುಟುಂಬ ಮಿಲನ, ಮೊದಲಾದವುಗಳನ್ನು ನಡೆಸುತ್ತಲೇ ಗುರುತಿಸಿಕೊಂಡ ಸಿದ್ದಿಯವರು ಅದೇ ಹುಮ್ಮಸ್ಸಿನಿಂದಲೇ ನವರಾತ್ರಿ ಭಜನೆಯಲ್ಲಿ ಭಾಗವಹಿಸಿದ್ದು ವಿಶೇಷ.

-ಜಿ ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಿರತ ಸಾಹಿತ್ಯ ಸಂಪದ: ರಾಜ್ಯಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

Upayuktha

ತುಂಬೆ ಡ್ಯಾಂನಲ್ಲಿ 7 ಮೀಟರ್ ನೀರು ನಿಲುಗಡೆಗೆ ಕ್ರಮ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ ಪೊನ್ನುರಾಜ್ ಸೂಚನೆ

Upayuktha

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಗೋವಿಗಾಗಿ ಮೇವು’ ಯಶಸ್ವಿ ಅಭಿಯಾನ

Upayuktha

Leave a Comment