ಎತ್ತ ನೋಡಿದರತ್ತ ಮೊಬೈಲಿನ ಸರಮಾಲೆ
ಯುವಕ ಯುವತಿಯರ ಪಾಲಿಗಿದೊ
ಅಮೃತ ಮಾಲೆ!!
ಹೊಸ ವಿಷಯವ ಹುಡುಕುತಲಿಹರು!!
ರಾತ್ರಿ ಹಗಲು ಚಟದಂತೆ ಅಂಟಿಕೊಳ್ಳುತಿಹರು!!
ತನಗರಿವಿಲ್ಲದೆ ಹೊಸ ಕುಟುಂಬವನು ಹೊಂದುವವರಿವರು!!
ಹಿರಿಯರ ಪಾಲಿಗೆ ಗೌರವ ನೀಡದಿಹರು!!
ತಂದೆ ತಾಯಿಗಳ ಪ್ರೀತಿಯು ಸಿಗದಂತಿಹರು!!
ಒಂಟಿ ಜೀವನವನು ಬಯಸಿಹರಿವರು!!
ಮೂಕಪ್ರಾಣಿಯಂತಿರುವರು!
ಮಾತಿಲ್ಲದೆ,ನೋವಿಲ್ಲದೆ ಕೇವಲ ಅಕ್ಷರಮಾಲೆಗಳಿರುವುದು!!
ನಮಗೆ ನಗು,ಅಳು ತರುವಂತಿಹುದು!!
ಎಮೊಜಿಗಳ ಸ್ನೇಹವನ್ನೆ
ಗಟ್ಟಿಯಾಗಿಸಿಹರು!!
ಸ್ವಿಚ್ ಆನ್ ಮಾಡುತಲಿದ್ದರೆ
ಯಂತ್ರವೆ ಮೈ ಮೇಲೆ ಬಂದಾಂಗಿಹರು!!
ಯಾವುದೋ ಲೋಕವನು ತೆರಳಿ
ಮುಳುಗಿದಂತಿಹರು!!
ಕರೆಗೆ ಸ್ಪಂದಿಸದೆ ನೆಪವ ಹೂಡುವರಿವರು!!
ರೇಂಜ್ ಇಲ್ಲ, ಚಾರ್ಜ್ ಇಲ್ಲ ಎಂಬಂತೆ ನಟಿಸುವರಿವರು!!
ಲೊಕೇಶನ್ ಎಂಬ ದಾರಿಯಲಿ ಮೂಕರಂತೆ ಹೋಗುವ ವೇಗಕ್ಕಿವರು
ಮರುಳಾಗಿ ದಾರಿ ತಪ್ಪಿಸಿಹರು!!
ಈಯರ್ ಫೋನ್ ಗಳಂತಹ ಮೊಬೈಲ್ ಬಳಕೆಯ ವಾಲಿಕೊಂಡಿರುವರು!!
ವ್ಯಕ್ತಿಗಳೆದುರು ಇಲ್ಲದ
ಪ್ರೀತಿ ತಂತಿಯೊಳಗಿರುವಂತೆ
ವರ್ತಿಸಿಹರು
ಮೊಬೈಲ್ ಚಟ ಹೊಂದಿರುವವರು!!
ವೀಡಿಯೋ ಕಾಲಿನಂತ ಅವತಾರವು
ಮನುಜನ ಜೀವನವನು ತೇಯುತಿಹುದು!!
ಕೋಣೆಯ ಒಳಗೆ ಹೋಗಿ ಮ್ಯುಸಿಕಲ್ ಅ್ಯಪ್ ನೊಂದಿಗೆ ನರ್ತಿಸಿಹರಿವರು!!
ಪ್ರೀತಿ ಪಾತ್ರರು ಪರದೆಯೊಳಗೆ ಬೊಂಬೆಯಾಟದ ಬೊಂಬೆಯಂತೆ
ಕಾಣುತಿಹರು!!
ತನಗರಿವಿಲ್ಲದಂತೆ ಸಮಯವನು ವ್ಯರ್ಥಮಾಡುತಿಹರು!!
ಆಟ ಪಾಠ ಎಂಬ ಇತ್ಯಾದಿ ರಸವನ್ನು ಬಯಸದಿಹರಿವರು!!
ಬಗೆ ಬಗೆಯ ಆ್ಯಪ್ ಗಳಿಹುದು
ಮನರಂಜನೆ ನೀಡುತಿಹುದು!!
ಮೇಕಪ್ ಇಲ್ಲದಿದ್ದರೂ ಚಂದ ಕಾಣಿಸಿಹುದದು
ಕುಟುಂಬದ ಜತೆಗಿರುವ ಸಂಬಂಧವನು
ಕಿತ್ತು ಹಾಕುತಿಹುದು ಮೊಬೈಲೆನ್ನುವ ಪ್ರೇತವು!!
ಚಿಕ್ಕ ಮಕ್ಕಳಿರಬಹುದು
ದೊಡ್ಡ ಮಕ್ಕಳಿರಬಹುದು
ಅಂಟಿಕೊಳ್ಳದವರಿಲ್ಲ
ಈ ಮೂಕ ಪೆಟ್ಟಿಗೆಯ!!
ವಾಟ್ಸಾಪ್ ಡಿಪಿಯಾ !!
ನೋಡುತ ಪರಿಚಯ ಮಾಡುವವರಿವರು!!
ಅಪರಿಚಿತರ ಪರಿಚಯ ಬಯಸಿ ದಾರಿ ತಪ್ಪುತಿಹರು!!
ತನ್ನ ಬಳಿಯಿರುವ ಕುಟುಂಬವನು
ಮರೆತಿಹರವರು!!
ಒಳ್ಳೆಯ ಸಾಧನವೆಂದು ಕಂಡುಹಿಡಿದಿಹರಿವರು!!
ಬಳಸಿಹರು ವಿವಿಧ ಸೆಲ್ಪಿ, ಪೋಟೋಗಳಿಗಾಗಿವರು!!
ದೂರದ ಪರಿಚಯ ಹತ್ತಿರವಾಗಲೆಂದು ಸಾಧನವ ಪರಿಚಯಿಸಿದರು!!
ಇಂದಿನ ಯುಗದ ಜನರು ಒಳ್ಳೆಯ ದಾರಿಯ ಮರೆತಿಹರು!!
ನೇರವಾದ ದಾರಿಯ ಮರೆತು
ಅಡ್ಡ ದಾರಿಯ ಹಿಡಿದಿಹರು!!
ಬ್ಲೂವೇಲ್ ಗಾಳದಲಿ
ಪಟ್ಟು ಹಿಡಿದು ಮೊಬೈಲ್ ಸ್ನೇಹ ಬಯಸಿದರಿವರು!!
ತಮ್ಮ ಮೋಜು ಮಸ್ತಿನಿಂದ
ಬಾಳುವಾಸೆಯ ಕಳೆದಿಹರಿವರು!!
ಕೊನೆ ಘಳಿಗೆಯಲಿ ಜೀವತೇಯುವುದದು!!
ಕಾಣದ ಲೋಕದ ದಾರಿಯ ತಿಳಿಸಿತು ಮೊಬೈಲೆಂಬ ಮಹಿಮೆಯು!!೨!!
.ಪ್ರಜ್ಞಾ ಕುಲಾಲ್ ಕಾವು