ಅಡುಗೆ-ಆಹಾರ

ಸವಿರುಚಿ: ಹೆಸರು ಬೇಳೆಯ ಹಲ್ವ

ಬೇಕಾದ ಸಾಮಾಗ್ರಿ
ಹೆಸರು ಬೇಳೆ 1 ಕಪ್
ಸಕ್ಕರೆ 1 ಕಪ್
ತುಪ್ಪ ಮುಕ್ಕಾಲು ಕಪ್
ಒಣ ದ್ರಾಕ್ಷಿ 8
ಹಾಲು 1 ಕಪ್
ಏಲಕ್ಕಿ ಪುಡಿ 1 ಚಮಚ

ಮಾಡುವ ವಿಧಾನ
ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಸಿಕೊಳ್ಳಬೇಕು. ನಂತರ ನೀರು ಸೋಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಕಡಾಯಿಯಲ್ಲಿ ತುಪ್ಪ ಹಾಕಿ ಒಣ ದ್ರಾಕ್ಷಿ ಹುರಿದು ತೆಗೆದುಕೊಂಡು ಅದಕ್ಕೆ ರುಬ್ಬಿಕೊಂಡ ಹಸರು ಬೇಳೆಯನ್ನು ಹಾಕಿ 5 ನಿಮಿಷಗಳ ಬೇಯಿಸಿ. ಹಾಲು ಹಾಕಿ ಬೇಯಿಸಿ. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ತುಪ್ಪ ಹಾಕಿ ಚೆನ್ನಾಗಿ ತಳ ಬಿಡುವ ತನಕ ಕಲಸುತ್ತ ಇರಿ. ತಳ ಬಿಡಲು ಆರಂಭಿಸಿದಾಗ ಹಲ್ವ ಸಿದ್ದ ಎಂದರ್ಥ. ರುಚಿಯಾದ ಅರೋಗ್ಯವಾದ ಹೆಸರು ಬೇಳೆಯ ಹಲ್ವ ಸವಿಯಲು ಸಿದ್ದ.

-ಸ್ತುತಿ ಕೃಷ್ಣರಾಜ

(ಉಪಯುಕ್ತ ನ್ಯೂಸ್)

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಒಂದೆಲಗ, ಹಲವು ಉಪಯೋಗ; ಎಲೆ ಒಂದಾದರೂ ಔಷಧದ ಆಗರ

Upayuktha

ಸವಿರುಚಿ: ನಿಂಬೆ ಕೊತ್ತಂಬರಿ ಸೂಪ್

Upayuktha

ಸವಿರುಚಿ: ನೇಂದ್ರ ಬಾಳೆಹಣ್ಣಿನ ಮಿಲ್ಕ್ ಶೇಕ್

Upayuktha

Leave a Comment

error: Copying Content is Prohibited !!