ಪ್ರಮುಖ ಲೇಖನಗಳು

Morning ಖಾರಾ ಬಾತ್: ಸ್ನೇಹದ ಬಂಧ- ಮೈತ್ರಿ ಧರ್ಮ

ಸಾಂದರ್ಭಿಕ ಚಿತ್ರ (ಕೃಪೆ: ಪಿಕ್ಸೆಲ್ಸ್)

ಪ್ರಪಂಚದಲ್ಲಿ ಇನ್ನೂ ತನ್ನ ಮೌಲ್ಯವನ್ನು ಉಳಿಸಿಕೊಂಡು ಬೆಳಗಿನ ಆಹ್ಲಾದಕತೆಯ ಹಾಗೆ ಮನಸ್ಸಿಗೆ ಬೆಳಕನ್ನೂ ಜೊತೆಗೆ ತಂಪನ್ನೂ ನೀಡಬಲ್ಲದ್ದಾದರೆ ಅದು ಒಳ್ಳೆಯ ಸ್ನೇಹ ಮಾತ್ರ. ಅಂತಹ ಸ್ನೇಹಿತ/ಸ್ನೇಹಿತೆಯ ಬಳಿ ಹೇಳಿಕೊಳ್ಳಬೇಕಾದ ಪ್ರತೀ ಭಾವಗಳನ್ನೆಲ್ಲ ಹೇಳಿಕೊಳ್ಳುತ್ತೀರಿ. ಹಾಗೇ ಆ ಸ್ನೇಹದ ಬಗ್ಗೆ ಉಂಟಾಗುವ ಅಸಮಧಾನವನ್ನೂ ಹೇಳಬೇಕಾದ್ದು ಧರ್ಮ. ಅದು ಎಂತಹ ನಿಷ್ಠುರವನ್ನೇ ತಂದೊಡ್ಡಲಿ, ಕೆಲವು ದಿನಗಳ ಮುನಿಸನ್ನೇ ನಿಮ್ಮ ಮಧ್ಯೆ ತಂದೊಡ್ಡಲಿ ಅಥವಾ ನೀವು ಅವರಿಂದ ಇನ್ನಿಲ್ಲದಂತೆ (ನಾಯಿಗೆ ಬೈದ ಹಾಗೆ ಬೈಯ್ಯೋದು ಅಂತಾರೆ ಹಳ್ಳಿ ಭಾಷೇಲಿ) ಉಗಿಸಿಕೊಳ್ಳಬಹುದಾದ ವಿಚಾರವೇ ಆಗಿರಲಿ ಧೈರ್ಯವಾಗಿ ಹೇಳಿಕೊಳ್ಳಬೇಕಾದ್ದೇ ಸರಿ.

ಆ ಮಾತುಗಳಿಂದ ಅದೇನೇ ಪರಿಣಾಮಗಳಾದರೂ ನಿಮ್ಮಿಬ್ಬರ ಮಧ್ಯೆ ಇನ್ನಿಲ್ಲದ ಬಂಧನವನ್ನೂ, ಸ್ನೇಹಧರ್ಮವನ್ನೂ ಅದು ಹುಟ್ಟುಹಾಕುತ್ತೆ. ಇದರ ಬದಲಾಗಿ ಮೂರನೆಯವರ ಮಾತು ಕೇಳಿಕೊಂಡೋ ಅಥವಾ ಮೂರನೆಯವರಿಗೋಸ್ಕರವೋ ಅಥವಾ ಇಂತಿಪ್ಪ ಯಾವುದೋ ವಿಚಾರಕ್ಕೋ, ನಿಮ್ಮ ಪ್ರಾಣ ಸ್ನೇಹಿತ/ಸ್ನೇಹಿತೆಯ ಬಗ್ಗೆ ಸಂಶಯಾತ್ಮಕ ದೃಷ್ಟಿಯನ್ನು ಬೆಳೆಸಿಕೊಂಡು, ಎಲ್ಲಿ ನಿಮ್ಮ ಸ್ನೇಹಿತೆಯ/ತನ-ನ್ನು ಪ್ರೋತ್ಸಾಹಿಸಬೇಕಿತ್ತೋ ಅಲ್ಲಿ ಪ್ರೋತ್ಸಾಹಿಸದೇ ಹಠಾತ್ತನೆ ಅಪರಿಚಿತರಂತೆ ವರ್ತಿಸುತ್ತೀರೆಂದಾದರೆ ಅದು ನೀವು ಸ್ನೇಹವನ್ನು ಅಗೌರವಿಸುವ ಮಟ್ಟಕ್ಕಿಳಿದಿದ್ದೀರಿ ಎಂದು ತೋರಿಸುತ್ತದೆ.

ಒಂದು ವೇಳೆ ಆ ಮೂರನೆಯ ವ್ಯಕ್ತಿತ್ವದಂತೆ ನೀವು ನಡೆಯುತ್ತಿದ್ದೀರಿ ಎಂಬುದು ನಿಮ್ಮ ಪ್ರಾಣ ಸ್ನೇಹಿತನಿಗೆ ಅರಿವಾಯಿತೆಂದಿಟ್ಟುಕೊಳ್ಳಿ ನಿಮ್ಮ ಸ್ಥಾನಮಾನ ಪಾತಾಳಿಕ್ಕಿಳಿಯುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯ.

– ವಾರಿಜಾಕ್ಷಿ

Related posts

ಬಾನಲ್ಲಿ ನೋಡಿ, ಗುರು- ಶನಿ ಗ್ರಹಗಳ ಅಪರೂಪದ ಜೋಡಿ

Upayuktha

ಛತ್ರಪತಿ ಶಿವಾಜಿ ಆದರ್ಶಗಳು ಸಮಾಜಕ್ಕೆ ದಾರಿ ದೀಪವಾಗಲಿ: ದಯಾನಂದ ಕತ್ತಲ್‍ಸಾರ್

Upayuktha

ಮಲೆನಾಡಿನ ಕಾಫಿಗೆ ಘನತೆ ತಂದಿತ್ತ ಕಾಫಿ ಡೇ ಗ್ಲೋಬಲ್ ವ್ಯವಹಾರ ಸ್ಥಗಿತ

Upayuktha