ನಗರ ಸ್ಥಳೀಯ

ಬಿಜೈ ಕಾಪಿಕಾಡ್ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಸಂಸದ ಕಟೀಲ್ ಭೇಟಿ

ಮಂಗಳೂರು: ಬಿಜೈ ಕಾಪಿಕಾಡ್ ದೈವರಾಜ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜ.9, ಶನಿವಾರದಂದು ಸಂಜೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ದೈವಸ್ಥಾನದ ವತಿಯಿಂದ ಸಂಸದರನ್ನು ಫಲ ತಾಂಬೂಲ, ಸಿರಿಮುಡಿ ಗಂಧ ಪ್ರಸಾದ ನೀಡಿ ಗೌರವಿಸಲಾಯಿತು.

ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಗೌರವಾಧ್ಯಕ್ಷ ಮಾದವ ಸುವರ್ಣ, ಕದ್ರಿ ವಾರ್ಡ್ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಮುಂಕಂಡ ಗುರುಚರಣ್, ಪ್ರಮುಖರಾದ ಸಂತೋಷ್ ಉಳ್ಳಾಲ್ ಹಾಗೂ ಮತ್ತಿತರರು ಸಂಸದರ ಜೊತೆಗಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಗಣಿತ ಪ್ರಾಧ್ಯಾಪಕ, ಯಕ್ಷ ಕಲಾವಿದ ಪ್ರೊ. ಕೆರೆಮನೆ ರಾಮ ಹೆಗಡೆ ನಿಧನ

Upayuktha

ವಿವೇಕಾನಂದ ಕಾಲೇಜಿನಲ್ಲಿ ನಾಳೆ (ಜ.29) ‘ಮೀಡಿಯಾ ವಿವೇಕ್’ ರಾಜ್ಯಮಟ್ಟದ ಪ್ರತಿಭೋತ್ಸವ

Upayuktha

‘ಘನವಸ್ತುಗಳ ಭೌತಶಾಸ್ತ್ರೀಯ ಗುಣಗಳು’ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರಸಂಕಿರಣ

Upayuktha