ರಾಜ್ಯ

ನಾಳೆ ಮಂಡ್ಯದಲ್ಲಿ ಸಂಸದೆ ಸುಮಲತಾ ವಿಜಯೋತ್ಸವ ಆಚರಣೆ

 

ಮಂಡ್ಯ : ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಸಂಸದೆ ಸುಮಲತಾ ನಾಳೆ ಮಂಡ್ಯದ ಜನತೆಗೆ ಅಭಿನಂದನೆ ಹೇಳುವ ಸಲುವಾಗಿ ಸ್ವಾಭಿಮಾನಿ ವಿಜಯೋತ್ಸವ ದಲ್ಲಿ ಭಾಗಿಯಾಗಲಿದ್ದಾರೆ.

ಚುನಾವಣೆ ಮುಗಿದ ನಂತರ ಮಂಡ್ಯ ದತ್ತ ಆಗಮಿಸದ ಸಂಸದೆ ಸುಮಲತಾ ನಾಳೆ ವಿಜಯೋತ್ಸವ ಆಚರಿಸೋ ಸಲುವಾಗಿ ತಮ್ಮ ಕ್ಷೇತ್ರವಾದ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ.

ಮಂಡ್ಯ ನಗರದಲ್ಲಿರೋ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ವಿಜಯೋತ್ಸವಕ್ಕಾಗಿ ಭರ್ಜರಿ ವೇದಿಕೆ ತಯಾರಾಗುತ್ತಿದೆ..

ನಾಳಿನ ವಿಜಯೋತ್ಸವದೊಂದಿಗೆ ಸುಮಲತಾ ಪತಿ ನಟ ಅಂಬರೀಶ್ ಹುಟ್ಟುಹಬ್ಬವನ್ನೂ ವೇದಿಕೆ ಮೇಲೆ ಆಚರಿಸಲಾಗುತ್ತಿದೆ.

ಸುಮಲತಾ ರವರ ಜೊತೆ ವಿಜಯೋತ್ಸವದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ,ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಮತ್ತಿತರರು ಭಾಗಿಯಾಗಲಿದ್ದಾರೆ.

Related posts

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈ ವರೆಗೆ 2.69 ಕೋಟಿ ರೂ ದೇಣಿಗೆ

Upayuktha

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಿ ವಕ್ಫ್‌ಬೋರ್ಡ್ ಆದೇಶ

Upayuktha

ಸಂಸತ್ ಗ್ರಂಥಾಲಯಕ್ಕೆ ಉಡುಪಿಯ ಮಹಾಭಾರತ ಗ್ರಂಥ

Upayuktha