ನಗರ ವಾಣಿಜ್ಯ ಸ್ಥಳೀಯ

ಎಂಎಸ್‌ಎಂಇ ದೇಶದ ಆರ್ಥಿಕತೆಗೆ ಬೆನ್ನೆಲುಬು

ಎಕ್ಸಲೆನ್ಸ್  ಅವಾರ್ಡ್ ಪ್ರದಾನ ಸಮಾರಂಭದಲ್ಲಿ  ಡಾ. ಸತೀಶ್ ಕುಮಾರ್ ಭಂಡಾರಿ

ಮಂಗಳೂರು: ಉತ್ಪಾದನಾ ರಂಗದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು(ಎಂಎಸ್‌ಎಂಇ)  ಭಾರತದ ಆರ್ಥಿಕತೆಯ ಬೆನ್ನೆಲುಬು ಹಾಗೂ ಆರ್ಥಿಕತೆಯ ಅಭಿವೃದ್ಧಿ ಪೂರಕ ಎಂದು ನಿಟ್ಟೆ ವಿಶ್ವವಿದ್ಯಾಲಯದ ವೈಸ್ ಚಾನ್ಸಿಲರ್ ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.

‘ಸುಸ್ಥಿರ ಅಭಿವೃದ್ಧಿಗೆ ಎಂಎಸ್‌ಎಂಇ ಸಬಲೀಕರಣ’ ಎಂಬ ಧ್ಯೇಯವಾಕ್ಯದೊಂದಿಗೆ ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಕರ್ಣಾಟಕ ಬ್ಯಾಂಕ್ ವತಿಯಿಂದ ನಗರದ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಎಂಎಸ್‌ಎಂಇ ಎಕ್ಸಲೆನ್ಸ್ ಅವಾರ್ಡ್ 2019 ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಆರ್ಥಿಕತೆಯಲ್ಲಿ ಹಿಂಜರಿತ ಕಂಡು ಬಂದಿದೆ. ಎಂಎಸ್‌ಎಂಇಗಳು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಈ ಹಿಂಜರಿತ ಶಾಸ್ವತವಲ್ಲ, ಮತ್ತೆ ದೇಶದ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಬರಲಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಮಸ್ಯೆ ಪರಿಹಾರಕ್ಕೆ ನಿಟ್ಟೆ ವಿಶ್ವವಿದ್ಯಾಲಯ ಎಲ್ಲ ರೀತಿಯ ನೆರವು ನೀಡಲಿದೆ. ನವ ಉದ್ಯಮಿಗಳಿಗೆ ಇನ್‌ಕ್ಯುಬೆಟರ್ ಸೆಂಟರ್‌ಗಳನ್ನು ತೆರೆಯಲಾಗಿದೆ ಎಂದು ಅವರು ನುಡಿದರು.

ಪ್ರಶಸ್ತಿ ಕುರಿತು ಐಸಿಎಐ ಮಂಗಳೂರು ಶಾಖೆ ಉಪಾಧ್ಯಕ್ಷ ಹಾಗೂ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಮಾತನಾಡಿ, ಪ್ರಶಸ್ತಿಗೆ ಸುಮಾರು 100 ಅರ್ಜಿಗಳು ಬಂದಿವೆ. ಇದರಲ್ಲಿ 30 ಮಂದಿಯನ್ನು ಮೂರು ವಿಭಾಗಗಳಲ್ಲಿ ನೀಡುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ ನಾಲ್ವರು ಮಹಿಳಾ ಉದ್ಯಮಿಗಳು ಕೂಡ ಸೇರಿದ್ದಾರೆ ಎಂದು ಹೇಳಿದರು.

ಉದ್ಯಮಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರಿಗೆ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕರ್ಣಾಟಕ ಬ್ಯಾಂಕ್ ಸಿಒಒ ಬಾಲಚಂದ್ರ ವೈ.ವಿ., ಕಾರ್ಪೋರೇಟ್ ಪ್ರೋಗ್ರಾಮ್ಸ್ ಡೀನ್ ಡಾ.ಎ.ಪಿ.ಆಚಾರ್, ಡಾ. ವಿಜಯೇಂದ್ರ, ಜೆಕೆಎಸ್‌ಎಚ್‌ಐಎಂ ನಿರ್ದೇಶಕ ಡಾ. ಕೆ. ಶಂಕರನ್ ಮುಂತಾದವರು ಉಪಸ್ಥಿತರಿದ್ದರು.

ಮೂರು ವಿಭಾಗಗಳಲ್ಲಿ ನೀಡುವ ಎಂಎಸ್‌ಎಂಇ ಎಕ್ಸಲೆನ್ಸ್ ಅವಾರ್ಡ್ 2019 ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನವೀನ್‌ಚಂದ್ರ ರೈ, ಶ್ರೀಕೃಷ್ಣ ಕೊಳಂಜ, ವಹಾಜ್ ಯೂಸಿಫ್, ದೇವರಾಜಯ್ಯ, ಯು.ವಿ. ಮಹೇಂದ್ರ, ರಘುನಂದನ್ ಕಾಮತ್ ಸೇರಿದಂತೆ 30 ಮಂದಿ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಪಿಯುಸಿ: ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿಗೆ ಶೇ. 100 ಫಲಿತಾಂಶ

Upayuktha

ಧರ್ಮಸ್ಥಳದಲ್ಲಿ ಪುರಾಣ ವಾಚನ- ಪ್ರವಚನ ಪ್ರಾರಂಭ

Upayuktha

ಟೆಲಿಕಾಂ ಪರಿಸ್ಥಿತಿ ಗಂಭೀರವಿದೆ ನಿಜ, ಆದರೆ ಭಾರತದಿಂದ ‘ಓಡೋದಿಲ್ಲ’: ವೊಡಾಫೋನ್ ಸಿಇಓ ಸ್ಪಷ್ಟನೆ

Upayuktha

Leave a Comment

error: Copying Content is Prohibited !!