
ಹೊಸದಿಲ್ಲಿ:
ಅಭಿವೃದ್ಧಿಯ ಕಡೆಗಿನ ಜನಸಾಮಾನ್ಯರ ತುಡಿತವೇ ಎಲ್ಲ ವೈರುಧ್ಯಗಳನ್ನೂ ಮರೆಮಾಚಿ ದೇಶವನ್ನು ಸಾಮಾನ್ಯ ಗುರಿಯತ್ತ ಮುನ್ನಡೆಸುತ್ತಿದೆ ಎಂದು ಅವರು ನುಡಿದರು.
ಗುವಾಹಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಂಎಸ್ಎಂಇ ವಲಯ ಅಭಿವೃದ್ಧಿಗೆ ಪೂರಕವಾದ ಸಾಮಾನ್ಯ ಗುರಿಯನ್ನು ತಲುಪಲು ಇಂಧನದಂತೆ ಕೆಲಸ ಮಾಡಬಲ್ಲದು ಎಂದು ನುಡಿದರು.
ಆಹಾರ ಸಂಸ್ಕರಣೆ, ಕೈಮಗ್ಗ (ಹ್ಯಾಂಡ್ಲೂಮ್), ಚಹಾ, ಬಿದಿರು, ಮೀನುಗಾರಿಕೆ ಮತ್ತು ಸಾವಯವ ಕೃಷಿ ಸಂಬಂಧಿತ ಉದ್ಯಮಿಗಳು ಅಭಿವೃದ್ಧಿ ಸಾಧಿಸಲು ಅಪಾರ ಅವಕಾಶಗಳಿವೆ. ಈ ವಸ್ತುಗಳಿಗೆ ಮೌಲ್ಯವರ್ಧನೆ ಮಾಡಿದರೆ ಕೈಗಾರಿಕೀಕರಣಕ್ಕೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಸಾರಂಗಿ ಹೇಳಿದರು.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮಾತನಾಡುತ್ತ, ಭಾರತವನ್ನು 2024ರ ವೇಳೆಗೆ 5 ಲಕ್ಷ ಕೋಟಿ ಡಾಲರ್ಗಳ ಆರ್ಥಿಕ ವ್ಯವಸ್ಥೆಯನ್ನಾಗಿ ಬೆಳೆಸುವಲ್ಲಿ ಎಂಎಸ್ಎಂಇ ವಲಯ ಅತ್ಯಂತ ಮಹತ್ವದ ಪಾತ್ರವಹಿಸಲಿದೆ ಎಂದು ತಿಳಿಸಿದರು.