ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರ್ದೂರಡ್ಕದಲ್ಲಿ ಆಯೋಜಿಸಲಾದ ಶೈಕ್ಷಣಿಕ ಗ್ರಾಮೀಣ ಶಿಬಿರ 2020 ಇದರಲ್ಲಿ ಗಣರಾಜ್ಯೋತ್ಸವ ಆಚರಣೆ ಅಂಗವಾಗಿ ಸ್ವಚ್ಛತೆಯ ಅರಿವನ್ನು ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಕಿಟ್ ವಿತರಿಸಲಾಯಿತು.
ಶಾಲೆಗೆ ನೀಡಿದ ಸ್ವಚ್ಛತಾ ಕಿಟ್ ಪೊರಕೆ, ಕಸದ ಬುಟ್ಟಿ, ಕಸದ ಮೊರ, ನೆಲ ಹಾಸು, ಬಲೆ ತೆಗೆಯುವ ಕೋಲು, ಬಕೆಟ್, ಮಗ್ ಮೊದಲಾದವುಗಳನ್ನು ಒಳಗೊಂಡಿತ್ತು. ಹಾಗೆಯೇ ಶಾಲಾ ಆವರಣದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಫಲಕಗಳನ್ನು ಅಳವಡಿಸಲಾಯಿತು.
ವಿದ್ಯಾರ್ಥಿಗಳಿಗೆ ಸೋಪು, ಟೂಥ್ ಪೇಸ್ಟ್, ಟೂಥ್ ಬ್ರಶ್, ಬಾಚಣಿಗೆ ಮೊದಲಾದವುಗಳನ್ನು ಒಳಗೊಂಡ ಕಿಟ್ ನೀಡಿ, ಕೈತೊಳೆಯುವ ವಿಧಾನ ಹಾಗೂ ವೈಯಕ್ತಿಕ ಸ್ವಚ್ಛತೆಯ ಅರಿವನ್ನು ಮೂಡಿಸಲಾಯಿತು. ಸಮುದಾಯದಲ್ಲಿ ಮನೆ ಭೇಟಿ ಮಾಡಿ, ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ, ಮನೆ ಸ್ವಚ್ಛತೆ, ಆಹಾರ ಸ್ವಚ್ಛತೆಯ ಮಾಹಿತಿ ಕರ ಪತ್ರವನ್ನು ಹಂಚಿ, ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಎಂ ಇವರು ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಕೆ, ಶಿಬಿರಾಧಿಕಾರಿಗಳಾದ ದೀಪಿಕಾ ಎಂ, ಸಚಿನ್ ಕುಮಾರ್, ಶೀತಲ್ ಕುಮಾರ್, ಶಿಬಿರದ ನಾಯಕ ನಿರಂಜನ್ ಕೆ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ