ವಾಣಿಜ್ಯ

ಮುಳಿಯ ಜ್ಯುವೆಲ್ಸ್ ಬೆಂಗಳೂರು ನೂತನ ಶೋರೂಂ ಉದ್ಘಾಟನೆ

ಬೆಂಗಳೂರು: ಕಳೆದ 10 ವರ್ಷಗಳಿಂದ ಮಣಿಪಾಲ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಳಿಯ ಜ್ಯುವೆಲ್ಸ್ ಈಗ ಮುಂಭಾಗಕ್ಕೆ ಸ್ಥಳಾಂತರಗೊಂಡು ಮತ್ತಷ್ಟು ವಿಶಾಲವಾದ ಶೋರೂಂ ಗ್ರಾಹಕರ ಸೇವೆಗಾಗಿ ತೆರೆದಿದೆ.

ಕೊರೋನ ಸುರಕ್ಷತೆಯ ಹಿನ್ನೆಲೆಯಲ್ಲಿ ಗ್ರಾಹಕರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ದಿನಾಂಕ 10 ಮತ್ತು 11ನೇ ಅಕ್ಟೋಬರ್ ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದದಲ್ಲಿ ಸಿನಿಮಾ ನಟಿ ಹರ್ಷಿಕಾ ಪೂಣಚ್ಚ, ಕೊಡವ ಸಮಾಜದ ಉಪಾಧ್ಯಕ್ಷರಾದ ಶ್ರೀಮತಿ ಮೀರಾ ಜಲಜ ಕುಮಾರ್ ಜನಸೇವಾ ಟ್ರಸ್ಟ್ ಚಿನ್ನೇನ ಹಳ್ಳಿ ಇದರ ಕಾರ್ಯದರ್ಶಿಗಳಾದ ಶ್ರೀ ನಿರ್ಮಲ್ ಕುಮಾರ್, ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಗುರ್ಜರ್ ಮುಂತಾದ ಗಣ್ಯರು ಭಾಗವಹಿಸಿದ್ದರು.

ಹಲವು ವಿನ್ಯಾಸಗಳ ಆಭರಣಗಳ ಜೊತೆಗೆ ಕರಿಮಣಿ ಮಂಗಳಸೂತ್ರ, ಬಳೆ, ನೆಕ್ಲೇಸ್, ಹಾರಗಳು, ಕರಾವಳಿಯ ಪಾರಂಪರಿಕ ಆಭರಣಗಳಾದ ಮಲ್ಲಿಗೆ ಮೊಗ್ಗು, ನವರತ್ನ ಉಂಗುರ, ಪವಿತ್ರ ಉಂಗುರ ಹಾಗೂ ಕೊಡಗಿನ ಪಾರಂಪರಿಕ ಆಭರಣಗಳಾದ ಜೋಮಾಲೆ, ಕೊಕ್ಕೆತಾತಿ, ಗುಂಡುಸರ ಈ ಎಲ್ಲಾ ಡಿಸೈನ್ ಗಳು ಮುಳಿಯ ಸಂಸ್ಥೆಯ ವಿಶೇಷ ಎಂದು ಮುಳಿಯ ಸಂಸ್ಥೆಯ ಚೇರ್ ಮೇನ್ ಕೇಶವ ಪ್ರಸಾದ್ ವಿವರಿಸಿದರು.

ನವರಾತ್ರಿಯ ಈ ಅಕ್ಟೋಬರ್ ತಿಂಗಳಲ್ಲಿ ಒಂಭತ್ತು ದಿನ ಒಂಭತ್ತು ದೇವಿಯರನ್ನು ಆರಾಧಿಸುವಂತೆ ನಮ್ಮ ಬೆಂಗಳೂರು ಮುಳಿಯದ ನೂತನ ಶೋರೂಂ ಅನಾವರಣ ಮತ್ತು ಚಿನ್ನೋತ್ಸವವನ್ನು ಒಂಭತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಾನಿನಿಯರಿಂದ ದೀಪ ಬೆಳಗಿಸಿ ಮಾಡಲಿದ್ದೇವೆ. ಇದು ಮುಳಿಯದ ಇನ್ನೊಂದು ವಿಶೇಷ.

ಅಕ್ಟೋಬರ್ 10 ರಿಂದ ನವೆಂಬರ್ 1 ರ ವರೆಗೆ ಮಳಿಗೆಯಲ್ಲಿ ಚಿನ್ನೋತ್ಸವವ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರಿಗೆ ಆಭರಣಗಳ ವಿಶೇಷ ಸಂಗ್ರಹ ಮತ್ತು ವಿಪುಲ ಆಯ್ಕೆ ಮತ್ತು ಹಲವು ರಿಯಾಯಿತಿ, ಗಿಫ್ಟ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ.

ಹರ್ಷಿಕಾ ಪೂಣಚ್ಚ ಮಾತನಾಡಿ, ಕೊಡಗಿನ ಮನೆ ಮಗಳಾದ ನಾನು ಮುಳಿಯದ ಮನೆ ಮಗಳೂ ಹೌದು. ನನ್ನ ಬೆಳವಣಿಗೆಯನ್ನು ಎತ್ತರಿಸಲು ಮುಳಿಯ ಜಾಹಿರಾತಿನಲ್ಲಿ ನಾನು ತೊಡಗಿಸಿಕೊಂಡದ್ದು ಕಾರಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಬಂಧಕ ಸೋಮಣ್ಣ ಟಿ ಸಿ ಸ್ವಾಗತಿಸಿದರು. ಕುಮಾರಿ ಆದ್ಯ ಸುಲೋಚನಾ ವಂದಿಸಿದರು. ಸತ್ಯ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಪ್ರಾರ್ಥಿಸಿದರು.

ಚಿನ್ನೋದ್ಯಮದ ಜೊತೆಗೆ ಜನಸ್ನೇಹಿ ಕಾರ್ಯಕ್ರಮ ಮುಳಿಯದ ವಿಶೇಷ. ಸಂತೋಷ. ವ್ಯವಹಾರ ಸಂಪಾದನೆಯ ಜೊತೆಗೆ ಸಮುದಾಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮುಳಿಯವನ್ನು ಮೆಚ್ಚಲೇಬೇಕು ಎಂದು ಮುಖ್ಯ ಅತಿಥಿ ನಿರ್ಮಲ್ ಕುಮಾರ್ ಹೇಳಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹೆಸರಾಂತ ಬಾಣಸಿಗ, ಮೋತಿಮಹಲ್ ಹೋಟೆಲ್‌ಗಳ ಸಂಸ್ಥಾಪಕ ಕುಂದನ್ ಲಾಲ್ ಗುಜ್ರಾಲ್

Upayuktha

ಸಪ್ತ ಜ್ಯುವೆಲ್ಸ್ ವಿಟ್ಲ: ಚಿನ್ನ ಬೆಳ್ಳಿ ದರ (ಮಾ.5)

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (14-03-2020)

Upayuktha

Leave a Comment