ಸಮುದಾಯ ಸುದ್ದಿ ಸ್ಥಳೀಯ

ಮುಳ್ಳೇರ್ಯ ಹವ್ಯಕ ಮಂಡಲ ಶಾಸನತಂತ್ರ ಸಭೆ

 

 

 

ಬದಿಯಡ್ಕ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಶಾಸನತಂತ್ರದ ಮುಂದಿನ ಕಾರ್ಯಯೋಜನೆಯಂತೆ ಮುಳ್ಳೇರ್ಯ ಹವ್ಯಕ ಮಂಡಲ ವಲಯಗಳ ನೂತನ ನಿಯುಕ್ತ ಪದಾಧಿಕಾರಿಗಳ ಪ್ರಥಮ ಸಭೆಯು ಗುತ್ತಿಗಾರು ವಲಯದ ಪನ್ನೇ ಗೋಪಾಲಕೃಷ್ಣ ಭಟ್ ಇವರ ನಿವಾಸದಲ್ಲಿ  ಬಾಲಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.

ಪ್ರಥಮವಾಗಿ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಠಣವು ಸಾಂಘಿಕವಾಗಿ ಜರಗಿತು.

ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು. ಮಂಡಲ ಕೋಶಾಧ್ಯಕ್ಷ  ಶ್ರೀಹರಿಪ್ರಸಾದ್ ಪೆರ್ಮುಖ ಆಯವ್ಯಯ ವರದಿ ಮಂಡಿಸಿದರು. ಕಾರ್ಯದರ್ಶಿಗಳಿಂದ ಸಂಘಟನೆಯ ಕಾರ್ಯಸೂಚೀ ವಿಷಯಗಳ ಮಂಡನೆಯಾಗಿ ಮಹಾ ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ ಸಮಾಲೋಚನೆ ನಡೆಯಿತು.

ವಲಯ ಪದಾಧಿಕಾರಿಗಳು ಆಯಾ ವಲಯ ವರದಿಗಳನ್ನಿತ್ತರು.

ನೂತನ ಪದಾಧಿಕಾರಿಗಳಾದ ಮಂಡಲ ಮಾತೃ ಪ್ರಧಾನೆ ಕುಸುಮಾ ಈಶ್ವರ ಭಟ್ ಪೆರ್ಮುಖ, ಸೇವಾ ಪ್ರಧಾನ ಬಾಲಸುಬ್ರಹ್ಮಣ್ಯ ಭ್ಯಟ್ ಪರಪ್ಪೆ, ಸಹಾಯಪ್ರಧಾನ ಮಹೇಶ ಸರಳಿ, ಮುಷ್ಠಿಭಿಕ್ಷಾ ಪ್ರಧಾನ ಡಾ ಡಿ ಪಿ ಭಟ್ ಕುಂಬಳೆ, ಬಿಂದು ಸಿಂಧು ಪ್ರಧಾನ ಈಶ್ವರ ಭಟ್ ಉಳುವಾನ, ಶಿಷ್ಯಮಾಧ್ಯಮ ಪ್ರಧಾನ ಗೋವಿಂದಬಳ್ಳಮೂಲೆ, ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ ಇವರು ಆಯಾ ವಿಭಾಗಗಳ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿಗಳನ್ನಿತ್ತರು.

ಗೋಕರ್ಣದ ಅಶೋಕೆಯಲ್ಲಿ ಸ್ಥಾಪನೆಗೊಳ್ಳಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಕುರಿತು ಪ್ರೊ ಶ್ರೀಕೃಷ್ಣ ಭಟ್ ಇವರು ಸಮಗ್ರ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.

ಸಭೆಯಲ್ಲಿ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಯೋಜನೆಗೆ ದೇಣಿಗೆ ಸಮರ್ಪಣೆ ಮಾಡಲಾಯಿತು. ಕುಂಬಳೆ ವಲಯದ ಎಚ್ ಶಿವರಾಮ ಭಟ್ಟರಿಗೆ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಸಹಾಯನಿಧಿ ಹಸ್ತಾ೦ತರಿಸಲಾಯಿತು.

ಅಕ್ಟೋಬರ್ 2ರಂದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಲಿರುವ ಪದಾಧಿಕಾರಿಗಳ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಲಾಯಿತು.

ಬಾಲಸುಬ್ರಹ್ಮಣ್ಯ ಭಟ್ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಮಂಡಲ ಉಪಾಧ್ಯಕ್ಷ ಗೋಪಾಲಕೃಷ್ಣ ಭಟ್ ಬೇರ್ಕಡವು, ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತೃವಿಭಾಗದವರಿಂದ ಕುಂಕುಮಾರ್ಚನಾ ಉಪಾಸನೆಯು ಜರಗಿತು. ರಾಮತಾರಕ ಜಪ, ಶಾಂತಿ ಮಂತ್ರ , ಧ್ವಜಾವತರಣ , ಶಂಖನಾದ ಬಳಿಕ ಸಭೆ ಮುಕ್ತಾಯವಾಯಿತು.

(ಚಿತ್ರ, ವರದಿ: ಗೋವಿಂದ ಬಳ್ಳಮೂಲೆ)

Related posts

ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ 29ಕ್ಕೆ ಉದ್ಘಾಟನೆ

Upayuktha

ಮಾರಣಕಟ್ಟೆ: ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ಮಾನ

Upayuktha

ಸಾಹಿತಿ ಭೀಮರಾವ್ ವಾಷ್ಠರ್ ರವರಿಗೆ ಸಿಂಧನೂರು ನಗರದಲ್ಲಿ ಸನ್ಮಾನ

Harshitha Harish