ನಗರ ಸ್ಥಳೀಯ

ಮಂಗಳೂರು ತಾಲೂಕು ಚುಸಾಪದಿಂದ ಬಹುಭಾಷಾ ವೀಡಿಯೊ ಕವಿಗೋಷ್ಠಿ

ಮಂಗಳೂರು: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಆನ್ಲೈನ್ ಕವಿಗೋಷ್ಠಿ ಸರಣಿಯ ಹತ್ತನೇ ಕಾರ್ಯಕ್ರಮ ಬಹುಭಾಷಾ ವೀಡಿಯೋ ಕವಿಗೋಷ್ಠಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು.

ಹಿರಿಯ ಕವಿ, ಕನ್ನಡ ಉಪನ್ಯಾಸಕ ವ.ಉಮೇಶ್ ಕಾರಂತ್ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಸ್ತಾವಿಕಾವಾಗಿ ಮಾತನಾಡಿದರು. ಗೋಷ್ಠಿಯಲ್ಲಿ ಅಧ್ಯಕ್ಷೀಯ ಭಾಷಣದ ಬಳಿಕ ಕುಂದ ಕನ್ನಡದಲ್ಲಿ ಕವಿತೆ ವಾಚಿಸಿದರು.

ಕವಿಗಳಾದ ಡಾ.ಸುರೇಶ್ ನೆಗಳಗುಳಿ (ಹಿಂದಿ), ಬದ್ರುದ್ದೀನ್ ಕೂಳೂರು (ಬ್ಯಾರಿ), ವಸುಂಧರ ಶಿವಮೊಗ್ಗ (ಕನ್ನಡ), ಶ್ಯಾಮಲಾ ಪ್ರಸನ್ನಕುಮಾರ್ ಕುಂಬಳೆ (ಕನ್ನಡ), ಗುಣಾಜೆ ರಾಮಚಂದ್ರ ಭಟ್ (ಹವ್ಯಕ ಕನ್ನಡ), ರೇಮಂಡ್ ಡಿಕುನಾ ತಾಕೊಡೆ (ಕೊಂಕಣಿ), ಆಕೃತಿ ಐ ಎಸ್ ಭಟ್ (ಕನ್ನಡ), ಅರ್ಚನಾ ಎಂ ಬಂಗೇರ ಕುಂಪಲ (ಕನ್ನಡ),ಅರುಂಧತಿ ರಾವ್ ಬಿಜೈ (ಕೊಂಕಣಿ), ವೆಂಕಟೇಶ್ ಚಾಗಿ, ಲಿಂಗಸನೂರು, ರಾಯಚೂರು (ಕನ್ನಡ), ವಿಜೇಶ್ ದೇವಾಡಿಗ ಮಂಗಳಾದೇವಿ (ತುಳು) ಡಾ. ಅರುಣಾ ನಾಗರಾಜ್ (ಕನ್ನಡ), ಲಕ್ಷ್ಮೀ ವೀ.ಭಟ್ ತಳಂಜೇರಿ (ಕನ್ನಡ) ಕವನಗಳನ್ನು ಪ್ರಸ್ತುತ ಪಡಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಶಾಸ್ತ್ರೀಯ ಮತ್ತು ಜಾನಪದ ನೃತ್ಯ ತರಬೇತಿ ತರಗತಿ ಜ.5ಕ್ಕೆ ಉದ್ಘಾಟನೆ

Upayuktha

ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಸಂಪನ್ನ

Upayuktha

ಕೊರೊನಾ ಹಾವಳಿ ತಡೆಗಟ್ಟುವ ದೃಷ್ಟಿಯಿಂದ ಲಸಿಕೆ ತೆಗೆದುಕೊಳ್ಳೋಣ: ಕಟೀಲ್

Sushmitha Jain