ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಬೆಂಗಳೂರನ್ನು ಸೋಲಿಸಿ ಪ್ಲೇ ಆಫ್ ಸ್ಥಾನ ಗಟ್ಟಿಗೊಳಿಸಿದ ಮುಂಬೈ

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸ್ಥಾನವನ್ನು ಗಟ್ಟಿಗೊಳಿಸಿದೆ. ಅಬುಧಾಬಿಯ ಶೇಖ್ ಝಯೇದ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಬೂಮ್ರಾ ಬೌಲಿಂಗ್ ಮಿಂಚು ಹಾಗೂ ಸೂರ್ಯಕುಮಾರ್ ಬ್ಯಾಟಿಂಗ್ ವೈಭವದೊಂದಿಗೆ ಮುಂಬೈ ಇಂಡಿಯನ್ಸ್ ವೀರೋಚಿತ ಜಯ ಸಂಪಾದಿಸುವ ಮೂಲಕ ಅಂಕ ಪಟ್ಟಿಯಲ್ಲೂ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಕಪ್ತಾನ ಕಿರನ್ ಪೊಲಾರ್ಡ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಧಾರಣ ಮೊತ್ತವನ್ನಷ್ಟೇ ಕಲೆ ಹಾಕಲು ಶಕ್ತವಾಯಿತು. ಬೆಂಗಳೂರಿನ ಆರಂಭವೇನೋ ಉತ್ತಮವಾಗಿದ್ದರೂ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಪರಿಣಾಮವಾಗಿ ದೊಡ್ಡ ಮೊತ್ತದ ಸವಾಲು ಒಡ್ಡುವಲ್ಲಿ ಕೊಹ್ಲಿ ಪಡೆ ವಿಫಲವಾಯಿತು. ಆರಂಭಿಕ ಆಟಗಾರರಾದ ಜೋಶ್ ಫಿಲಿಪ್ಪೆ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ 71 ರನ್‌ಗಳ ಜತೆಯಾಟ ನೀಡಿದರು. ಫಿಲಿಪ್ಪೆ 33 ರನ್ ಗಳಿಸಿ ಔಟಾದರು. ಆದರೆ ನಂತರ ಬಂದ ನಾಯಕ ಕೊಹ್ಲಿ (9) ಹಾಗೂ ಎಬಿ ಡಿ ವಿಲಿಯರ್ಸ್(15) ಹೆಚ್ಚು ಹೊತ್ತು ನಿಲ್ಲಲಿಲ್ಲ. ಶಿವಂ ದುಬೆ (2) ಕೂಡಾ ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಮರಳಿದರು. ತುಸು ಹೊತ್ತು ಏಕಾಂಗಿ ಹೋರಾಟ ನಡೆಸಿದ ಪಡಿಕ್ಕಲ್ 45 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಭರ್ಜರಿ 74 ರನ್ ಸಿಡಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು.

ಮುಂಬೈ ಪರ ಜಸ್‌ಪ್ರೀತ್ ಬುಮ್ರಾ ಅತ್ಯಂತ ಮೊನಚಿನ ದಾಳಿ ನಡೆಸಿದರು. 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 3 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. 17ನೇ ಓವರ್‌ನಲ್ಲಿ ಬೂಮ್ರಾ 2 ವಿಕೆಟ್ ಉರುಳಿಸಿದ್ದಲ್ಲದೆ ಶೂನ್ಯ ರನ್ ನೀಡಿದರು. ಉಳಿದಂತೆ, ಟ್ರೆಂಟ್ ಬೌಲ್ಟ್, ರಾಹುಲ್ ಚಹಾರ್ ಹಾಗೂ ಕಿರನ್ ಪೊಲಾರ್ಡ್ ತಲಾ 1 ವಿಕೆಟ್ ಗಳಿಸಿದರು.

ಈ ಸಾಧಾರಣ ಸವಾಲನ್ನು ಬೆಂಬತ್ತಿ ಹೊರಟ ಮುಂಬೈ ರನ್ ಗತಿ ಏಕಪ್ರಕಾರವಾಗಿ ಸಾಗಿತು. ಆರಂಭಿಕ ಜೋಡಿಗಳಾದ ಕ್ವಿಂಟನ್ ಡಿ ಕಾಕ್ (18) ಹಾಗೂ ಇಶಾನ್ ಕಿಶನ್ (25) ಸಾಧಾರಣ ಜೊತೆಯಾಟ ನಡೆಸಿದರು. ನಂತರ ಕ್ರೀಸ್‌ಗೆ ಬಂದವರೇ ಮಿಂಚಿನ ಆಟಕ್ಕೆ ಹೆಸರುವಾಸಿಯಾಗಿರುವ ಸೂರ್ಯಕುಮಾರ್ ಯಾದವ್. ಸೌರಭ್ ತಿವಾರಿ (5) ಹಾಗೂ ಕೃನಾಲ್ ಪಾಂಡ್ಯಾ (10) ಹಾಗೂ ಹಾರ್ದಿಕ್ ಪಾಂಡ್ಯಾ (17) ಹೆಚ್ಚೇನೂ ಆಸರೆಯಾಗದಿದ್ದರೂ ಏಕಾಂಗಿ ಹೋರಾಟ ನಡೆಸಿದ ಯಾದವ್ ತಂಡವನ್ನು ಜಯದ ದಡ ಮುಟ್ಟಿಸಿದರು. ಕೇವಲ 43 ಎಸೆತಗಳಲ್ಲಿ 3 ಸಿಕ್ಸರ್, 10 ಬೌಂಡರಿಗಳ ಸಹಿತ 79 ರನ್ ಸಿಡಿಸಿ ಅಜೇಯರಾಗುಳಿದರು. ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಮುಂಬೈ 5 ವಿಕೆಟ್‌ಗಳ ಜಯ ಸಾಧಿಸುವಂತೆ ಮಾಡಿದರು. ಮುಂಬೈ 19.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು.

ಬೆಂಗಳೂರು ಪರ ಮೊಹಮ್ಮದ್ ಸಿರಾಜ್ ಹಾಗೂ ಯಝುವೇಂದ್ರ ಚಹಾಲ್ ತಲಾ 2 ವಿಕೆಟ್‌ಗಳನ್ನು ಗಳಿಸಿದರು. ಕ್ರಿಸ್ ಮೋರಿಸ್ 1 ವಿಕೆಟ್ ಸಂಪಾದಿಸಿದರು.

ಮುಂಬೈ ಇಂಡಿಯನ್ಸ್ ಆಡಿದ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ದ್ವಿತೀಯ ಸ್ಥಾನಿಯಾಗಿದೆ.

 

ಐಪಿಎಲ್ 2020: ಮುಂಬೈ ಸೂರ್ಯನ ಶಾಖಕ್ಕೆ ಕರಗಿದ ಡೆಲ್ಲಿ

ಐಪಿಎಲ್ 2020: ಮುಂಬೈಯ ಆಲ್‌ರೌಂಡ್ ಆಟಕ್ಕೆ ಶರಣಾದ ಕಿಂಗ್ಸ್ ಪಂಜಾಬ್

ಐಪಿಎಲ್ 2020: ವಿಲಿಯರ್ಸ್ ನೆರವಿಂದ ಬೆಂಗಳೂರಿಗೆ ಮುಂಬೈ ವಿರುದ್ಧ ಸೂಪರ್ ಗೆಲುವು

ಐಪಿಎಲ್ 2020: ಮುಂಬೈಯನ್ನು ಮಣಿಸಿದ ಚೆನ್ನೈನಿಂದ ಶುಭಾರಂಭ

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೇರಳ ಶಾಲಾ ಕಲೋತ್ಸವ: ಉನ್ನತ ಶಿಕ್ಷಣದ ಬಗ್ಗೆ ಆಸಕ್ತರಿಗೆ ದಾರಿ ತೋರಲಿರುವ “ದಿಶಾ” ಎಕ್ಸಿಬಿಷನ್

Upayuktha

ವಿಶಾಖಪಟ್ಟಣದಲ್ಲಿ ವಿಷಾನಿಲ ದುರಂತ: 10 ಸಾವು, 5000ಕ್ಕೂ ಅಧಿಕ ಮಂದಿ ಅಸ್ವಸ್ಥ

Upayuktha

ಬರಲಿದೆ ದೀಪಾವಳಿ, ದೇಶಾದ್ಯಂತ ಬೆಳಗಲಿದೆ 11 ಕೋಟಿ ‘ಗೋಮಯ ದೀಪ’ಗಳು

Upayuktha