ಅಪರಾಧ ಪ್ರಮುಖ ರಾಜ್ಯ

ಕೋಲಾರದಲ್ಲಿ ಆಂಜನೇಯ ದೇಗುಲ ಅಪವಿತ್ರಗೊಳಿಸಿದ ದುಷ್ಕರ್ಮಿ

ಶೂ ಹಾಕಿಕೊಂಡೇ ಗರ್ಭಗುಡಿ ಪ್ರವೇಶಿಸಿ ಮತಿಭ್ರಾಂತನಂತೆ ಘೋಷಣೆ ಕೂಗಿದ
(ವಿಡಿಯೋದಿಂದ ತೆಗೆಯಲಾದ ಸ್ಕ್ರೀನ್‌ಶಾಟ್‌ ಚಿತ್ರ)

ಕೋಲಾರ: ಕೋಲಾರದ ಆಂಜನೇಯ ದೇವಸ್ಥಾನವೊಂದರ ಗರ್ಭಗುಡಿಗೆ ಪಾದರಕ್ಷೆ ಸಹಿತ ಪ್ರವೇಶಿಸಿದ ವ್ಯಕ್ತಿಯೊಬ್ಬ ಜೈಶ್ರೀರಾಮ್‌, ಜೈ ಹನುಮಾನ್‌, ಜೈ ಅಮಿತ್ ಶಾ, ಜೈ ಮೋದಿ ಎಂದೆಲ್ಲ ಘೋಷಣೆ ಕೂಗಿ ರಾದ್ಧಾಂತ ನಡೆಸಿದ ಘಟನೆ  ಎರಡು ದಿನಗಳ ಹಿಂದೆ ನಡೆದಿದೆ.

ಈ ಘಟನೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಅಕ್ರಮವಾಗಿ ಗರ್ಭಗುಡಿ ಪ್ರವೇಶಿಸಿ ಪ್ರವೇಶಿಸಿದಾತ ಮುಸ್ಲಿಂ ವ್ಯಕ್ತಿಯಾಗಿದ್ದು, ಮತಿಭ್ರಮಣೆಗೊಂಡವನಂತೆ ವರ್ತಿಸಿದ್ದಾನೆ. ಘೋಷಣೆಗಳನ್ನೆಲ್ಲ ಕೂಗಿದ ಬಳಿಕ ಕೊನೆಗೆ ತಾಕತ್ತಿದ್ದರೆ ತನ್ನ ಶಿರಚ್ಛೇದ ಮಾಡುವಂತೆಯೂ ಸವಾಲು ಹಾಕಿದ್ದಾನೆ ಎಂದು ಸಂಸದೆ ಪೋಸ್ಟ್ ಮಾಡಿರುವ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮೂಡಿಗೆರೆ: ಭಗ್ನ ಪ್ರೇಮಿಯಿಂದ ಯುವತಿಗೆ ಇರಿತ

Upayuktha

3-4 ದಿನಗಳಲ್ಲಿ ಕರ್ನಾಟಕ, ಗೋವಾ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

Upayuktha

ಬೆಂಗಳೂರಿನ ಕೋವಿಡ್‌ ಪರಿಸ್ಥಿತಿ ನಿರ್ವಹಣೆ: ಉಸ್ತುವಾರಿ ಸಚಿವರ ಜತೆ ಮುಖ್ಯಮಂತ್ರಿ ಮಹತ್ವದ ಸಭೆ

Upayuktha