ರಾಜ್ಯ

ಮೈಸೂರು : ನೋಟು ತುಂಬಿದ್ದ ಕಂಟೈನರ್ ಲಾರಿ ಪಲ್ಟಿ

ರಾಮನಗರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ ಮೈಸೂರು ನೋಟು ಮುದ್ರಣ ಘಟಕ ದಿಂದ ಬೆಂಗಳೂರಿನತ್ತ ಹೊರಟಿದ್ದ ನೋಟು ತುಂಬಿದ್ದ ಕಂಟೈನರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಉರುಳಿ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಕಲ್ಲುಗೋಪಹಳ್ಳಿ ಬಳಿ ನಡೆದಿದೆ.

ಮೈಸೂರಿನ ನೋಟು ಮುದ್ರಣ ಘಟಕದಿಂದ 18 ಕಂಟೈನರ್ ಲಾರಿಗಳು ಕೈಗಾರಿಕಾ ಭದ್ರತಾ ಪಡೆಯ ರಕ್ಷಣೆಯಲ್ಲಿ ಗುರುವಾರ ಮಧ್ಯಾಹ್ನ ಬೆಂಗಳೂರಿನ ಕಡೆಗೆ ಚಲಾಯಿಸುತ್ತಿದ್ದರು.

ರಾಮನಗರ-ಬಿಡದಿ ನಡುವಿನ ಕಲ್ಲುಗೋಪಹಳ್ಳಿ ಬಳಿ ರಸ್ತೆ ಕಾಮಗಾರಿ ಕಾರಣದಿಂದ ದೊಡ್ಡ ತಿರುವು ನಿರ್ಮಾಣ ಮಾಡಲಾಗಿತ್ತು. ಆದರೆ ಕಂಟೈನರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಕಂಟೈನರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಿಡದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದ 17 ಕಂಟೈನರ್ ಗಳು ಭದ್ರತೆಯೊಂದಿಗೆ ಬೆಂಗಳೂರಿಗೆ ತೆರಳಿವೆ. ಉರುಳಿ ಬಿದ್ದ ಕಂಟೈನರ್ ನ್ನು ಮೈಸೂರಿಗೆ ಕೊಂಡು ಹೋಗಿ ನೋಟುಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related posts

ರಾಜ್ಯ ಸಭೆಯ ಸದಸ್ಯರಾಗಿ ಎಚ್.ಡಿ ದೇವೇಗೌಡ ಪ್ರಮಾಣ ವಚನ ಸ್ವೀಕಾರ

Harshitha Harish

ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ: ಜಲಾವೃತಗೊಂಡ ಹಲವು ಪ್ರದೇಶ

Harshitha Harish

ಆ. 5ರಂದು ರಾಜ್ಯದ ಎಲ್ಲ ದೇವಳಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ: ಸಚಿವ ಕೋಟ

Upayuktha