ರಾಜ್ಯ

10 ಶಾಲೆಗಳನ್ನು ದತ್ತು ಪಡೆದ ಮೈಸೂರು ವಿಶ್ವವಿದ್ಯಾಲಯ

ಮೈಸೂರು: ಕೇಂದ್ರದ ಗ್ರಾಮ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಮೈಸೂರು ವಿಶ್ವವಿದ್ಯಾಲಯ ಹನೂರ್ ತಾಲ್ಲೂಕಿನ ಹಳ್ಳಿಗಳ ಹತ್ತು ಶಾಲೆಗಳನ್ನು ದತ್ತು ಸ್ವೀಕರಿಸಿದೆ.

ಸುದ್ದಿಗಾರರ ಜೊತೆ ಮಾತನಾಡಿದ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ನಾವು ಚಾಮರಾಜನಗರ ಜಿಲ್ಲೆಯ ಹನೂರ್ ತಾಲ್ಲೂಕಿನಲ್ಲಿ ಆರು ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಬರುವ 10 ಶಾಲೆಗಳನ್ನು ದತ್ತು ಪಡೆದಿದ್ದೇವೆ. ಸರಿಯಾದ ಸಮಯದಲ್ಲಿ ಈ ಕುರಿತು ವರದಿಯನ್ನು ಸಿದ್ಧಪಡಿಸಲಾಗುವುದು ” ಎಂದು ಹೇಳಿದರು.

ವಿವಿ ಶತಮಾನೋತ್ಸವದ ನೆನಪಿಗಾಗಿ, ನಾವು 100 ವರ್ಷಗಳ ಇತಿಹಾಸ ಹೊಂದಿದ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದೇವೆ.  ಸರ್ಕಾರಿ ಶಾಲೆಗಳನ್ನು ಗುರುತಿಸಲು ಮತ್ತು ಆಧುನಿಕ ಸೌಲಭ್ಯ ಗಳನ್ನು ನೀಡುವ ಮೂಲಕ ಅವುಗಳ ಗುಣಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಣಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿದ್ದೇವೆ ಎಂದರು.

ಈ ದತ್ತು ಪಡೆದ ಶಾಲೆಗಳ ಅಭಿವೃದ್ಧಿಯ ಮೇಲ್ವಿಚಾರಣೆಗೆ ವಿವಿ ಸಮಿತಿ ರಚಿಸಿದೆ. ಇದರ ಸದಸ್ಯರು ಈ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಕೇಳಲಿದ್ದಾರೆ.

Related posts

ಮೈಸೂರು: ಡಿಸಿ ನಂಬರ್ ಕೊಟ್ಟು ಯಾಮಾರಿಸಿ ಎಸ್ಕೇಪ್ ಆದ ಸೋಂಕಿತ

Harshitha Harish

ಖ್ಯಾತ ಗಾಯಕ ಎಸ್‌ಪಿಬಿ ಅವರ ಪತ್ನಿಗೂ ಕೋವಿಡ್ ಪಾಸಿಟಿವ್

Harshitha Harish

ಸೈಬರ್ ಕಳ್ಳರಿಂದ ಹೊಸ ವಂಚನೆ ತಂತ್ರ: ಬ್ಯಾಂಕ್‌ ಇಎಂಐ ಮುಂದೂಡಿಕೆ ಸೋಗಿನಲ್ಲಿ ಒಟಿಪಿ ಪಡೆದು ವಂಚಿಸುವ ಹುನ್ನಾರ ಬಯಲಿಗೆ

Upayuktha