ರಾಜ್ಯ

ಸುಧಾ ಮೂರ್ತಿ ಯವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

ಮೈಸೂರು: ಇನ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಯಾದ ಸುಧಾಮೂರ್ತಿ ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಲು ನಿರ್ಧಾರ ಮಾಡಿದ್ದಾರೆ.

ಅ.19 ರಂದು ನಡೆಯುವ 100ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅವರು ಶುಕ್ರವಾರ ದಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಗೆಯೇ ‘ಸಮಿತಿಯು ಗೌರವ ಡಾಕ್ಟರೇಟ್ ಪದವಿಗೆ ಮೂವರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಿದ್ದರು.‌ ಅದರಲ್ಲಿ ಸುಧಾಮೂರ್ತಿ ಅವರಿಗೆ ಡಾಕ್ಟರೇಟ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.

 

ಕಾರ್ಯಕ್ರಮ ಘಟಿಕೋತ್ಸವವನ್ನು ಬೆಳಿಗ್ಗೆ 10.30ಕ್ಕೆ ಕ್ರಾಫರ್ಡ್ ಭವನದಲ್ಲಿ ಏರ್ಪಡಿಸಲಾಗಿದೆ. ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ.

ಹಾಗೂ ರಾಜ್ಯಪಾಲ ವಜುಭಾಯಿವಾಲಾ ಅಧ್ಯಕ್ಷತೆ ವಹಿಸಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Related posts

ಇಂದು ಜಾತ್ರಾ ಗದ್ದುಗೆಗೆ ಶ್ರೀಮಾರಿಕಾಂಬೆ, ದೇವಿಯ ಭವ್ಯ ಶೋಭಾಯಾತ್ರೆ

Upayuktha

ಬೆಂಗಳೂರು : ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಆತ್ಮಹತ್ಯೆ

Harshitha Harish

ಧರ್ಮಸ್ಥಳ: ಡಾ.ಹೆಗ್ಗಡೆಯವರ 73ನೇ ಹುಟ್ಟು ಹಬ್ಬ; 7,300 ಮಂದಿಗೆ ‘ವಾತ್ಸಲ್ಯ’ ಸಹಾಯಹಸ್ತ ವಿತರಣೆ

Upayuktha