ಅಪರಾಧ ಪ್ರಮುಖ

ಅಮೆರಿಕದಲ್ಲಿ ಶೂಟೌಟ್‌: ಮೈಸೂರು ಮೂಲದ ವಿದ್ಯಾರ್ಥಿ ಸಾವು

ಸುದೇಶ್ ಅಭಿಷೇಕ್ ಭಟ್ (ಚಿತ್ರ: ಅವರ ಫೇಸ್‌ಬುಕ್‌ನಿಂದ)

ಮೈಸೂರು:

ಅಮೆರಿಕದ ಸ್ಯಾನ್ ಬರ್ನಾರ್ಡಿನೋದಲ್ಲಿರುವ ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿದ್ದ ಮೈಸೂರು ಮೂಲದ ವಿದ್ಯಾರ್ಥಿ ಅಭಿಷೇಕ್ ಸುದೇಶ್ ಭಟ್ ಅಪರಿಚಿತ ಬಂದೂಕುಧಾರಿಯೊಬ್ಬನ ಗುಂಡೇಟಿಗೆ ಗುರುವಾರ ಬಲಿಯಾಗಿದ್ದಾರೆ.

ಮೋಟೆಲ್ ಒಂದರಲ್ಲಿ ಪಾರ್ಟ್‌ ಟೈಮ್ ಉದ್ಯೋಗ ಮಾಡುತ್ತ ಅಧ್ಯಯನ ನಡೆಸುತ್ತಿದ್ದ ಇವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಹಂತಕನ ಗುಂಡೇಟಿಗೆ ಬಲಿಯಾಗಿದ್ದಾರೆ. ದಾಳಿಕೋರನ ಉದ್ದೇಶ ಅಥವಾ ಗುರುತಿನ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ವಿದ್ಯಾರ್ಥಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮೈಸೂರಿನ ಕುವೆಂಪುನಗರದ ಶ್ರೀ ಉಪನಿಷತ್ ಯೋಗ ಸೆಂಟರ್ ಟ್ರಸ್ಟ್‌ನ ಸಂಸ್ಥಾಪಕ ಹಾಗೂ ಯೋಗ ಗುರು ಸಂದೇಶ್ ಚಂದ್ ಎಂಬವರ ಪುತ್ರನಾಗಿರುವ ಅಭಿಷೇಕ್ ಮೃತದೇಹವನ್ನು ಸ್ಯಾನ್ ಬರ್ನಾರ್ಡಿನೋ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಅಮೆರಿಕದಲ್ಲಿರುವ ಭಾರತೀಯ ದೂತಾವಾಸದಿಂದ ಈ ವರೆಗೆ ಯಾವುದೇ ಅಧಿಕೃತ ಮಾಹಿತಿ ಕುಟುಂಬಕ್ಕೆ ಬಂದಿಲ್ಲ. ಸುದೇಶ್ ಅವರು ಕಳೆದ 16 ವರ್ಷಗಳಿಂದ ಮೈಸೂರಿನಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದಾರೆ.

ಅಭಿಷೇಕ್ ಅವರ ಸೋದರ ಶ್ರೀವತ್ಸ ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದು, ಅದಕ್ಕೂ ಮೊದಲು ಮೈಸೂರಿನ ವಿದ್ಯಾ ವಿಕಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಧ್ಯಯನ ನಡೆಸಿದ್ದರು. ಅಭಿಷೇಕ್ ಕೆಲಸ ಮಾಡುತ್ತಿದ್ದ ಅದೇ ಮೋಟೆಲ್‌ನಲ್ಲಿ ಸಹೋದ್ಯೋಗಿಯಾಗಿದ್ದ ಆತನ ಸ್ನೇಹಿತ ಈ ಸಾವಿನ ಮಾಹಿತಿಯನ್ನು ಕುಟುಂಬಕ್ಕೆ ತಿಳಿಸಿದ್ದಾನೆ ಎಂದು ಶ್ರೀವತ್ಸ ತಿಳಿಸಿದರು.

ಮೋಟೆಲ್‌ ಸಮೀಪ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಳಿಯ ದೃಶ್ಯ ಸೆರೆಯಾಗಿದ್ದು ಅಮೆರಿಕ ಪೊಲೀಸರು ದಾಳಿಕೋರನ ಗುರುತು ಪತ್ತೆಗೆ ಯತ್ನಿಸುತ್ತಿದ್ದಾರೆ. ಅಭಿಷೇಕ್‌ ಕುಟುಂಬದವರ ಜತೆ ತಾವು ಮಾತನಾಡಿರುವುದಾಗಿ ಕ್ಯಾಲಿಫೋರ್ನಿಯಾ ಸ್ಟೇಟ್‌ ಯುನಿರ್ಸಿಟಿಯ ಪ್ರಿನ್ಸಿಪಾಲ್‌ ತಿಳಿಸಿದ್ದಾರೆ.

ತಮ್ಮ ಫೇಸ್‌ಬುಕ್ ಪೋಸ್ಟಿನಲ್ಲಿ ಅಭಿಷೇಕ್ ಅವರು, ಅಕ್ಟೋಬರ್ 31ರಿಂದ ಸ್ಯಾನ್ ಬರ್ನಾರ್ಡಿನೋ ಕಾಲೇಜಜ್‌ ಆಫ್ ನ್ಯಾಚುರಲ್ ಸೈನ್ಸಸ್‌ ನಲ್ಲಿ ಡಾ. ಎರ್ಎನಸ್ಟೋ ಗೋಮೆಝ್ ಅವರಿಗೆ ಬೋಧನಾ ಸಹಾಯಕರಾಗಿ ನೇಮಕಗೊಂಡಿರುವುದಾಗಿ ಬರೆದುಕೊಂಡಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೊಚ್ಚಿ: ಸ್ಫೋಟಕ ಬಳಸಿ ಎರಡು ಅಕ್ರಮ ಕಟ್ಟಡಗಳ ನೆಲಸಮ, ಕ್ಷಣಮಾತ್ರದಲ್ಲಿ ಧೂಳೀಪಟ

Upayuktha

ಕೊರೊನಾ ನಿರ್ಮೂಲನಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Upayuktha

ಸಂತ್ರಸ್ತ ಗೋವುಗಳಿಗೆ ರಾಮಚಂದ್ರಾಪುರಮಠ ಅಭಯ

Upayuktha