ಕತೆ-ಕವನಗಳು

ನಾಡ ಗೀತೆ: ಭಾರತ ಜನನಿ

ಭಾರತಾಂಬೆಯ ಮಡಿಲ ಕಂದನೆ ಒಡನೆ ನಿನ್ನನು ಸ್ಮರಿಸುವೆ|

ಶನ್ನಡಾಂಬೆಯೆ ಸ್ಮರಿಸಿ ನಿನ್ನಯ ಪಾದಪೂಜೆಯ ಮಾಡುವೆ||
ಸತ್ಯವರಿೊೆನು ನಿತ್ಯವರಿಯೆನು ನಾನು ನಿನ್ನಯ ದಾಸನು|
ವಿಶ್ವವಂದಿತೆ ನಿತ್ಯಪೂಜಿತೆ ಬೇಡಿ ಕರಗಳ ಮುಗಿವೆನಪ||

ಅನ್ಯ ಭಾಷೆಯ ಬಿಟ್ಟುಬಿಡುವೆನು ನಿನ್ನ ಭಾಷೆಯ ಮೆಚ್ಚುತ|
ಸುರಿಸಿ ವರಮಳೆಕರೆದೆ ನೀನು ಬಾಳ ಜ್ಯೋತಿಯ ಹಚ್ಚುತ||
ರನ್ನ ಪಂಪರು ಹಾಡಿ ಕುಣಿದರು ನಿನ್ನ ಚಂದದ ನಾದದಿ|
ಕವಿ ಪುರಂದರ ದಾಸ ಶ್ರೇಷ್ಠರುಬೆರೆತು ನಿದಲು ಹರುಷದಿ||

ಬೆಣ್ಣೆಮುದ್ದೆಯ ಕರದಿ ಪಿಡಿದು ತುಪ್ಪವರಸಿ ಸರಿದರು|
ಶಿರದಿ ಕನ್ನಡ ಭಾಷೆ ಹೊತ್ತು ಅನ್ಯ ಭಾಷೆಯ ಕಲಿವಕು||
ಕನ್ನಡಾಂಬೆಯ ಮಡಿಲಲಿ ಮಲಗಿ ಪಾಡುತನ್ಯ ರಾಗವ|
ಕನ್ನಡ ಸುರಸಂಗೀತ ನಡುವೆ ಬೆರೆಸಿ ಹಾಡಿನ ಕಲರವ||

ಕನ್ನಡ ಭಾಷೆಯ ಕಲಿಯೋಣ ನಾವ್ ಕನ್ನಡ ಭಾಷೆಯ ಬೆಳೆಸೋಣ |
ಕನ್ನಡ ಮಣ್ಣಲೆ ಬದುಕೋಣ ನಾವ್ ಕನ್ನಡ ದೇಶವ ಕಟ್ಟೋಣ ||
ಕನ್ನಡ ನಮ್ಮಯ ತಾಯಿಯು ಅದೆ ಕನ್ನಡ ನಮ್ಮ ತಂದೆಯು|
ಕನ್ನಡ ನಮ್ಮ ಕುಲ ಸಂತತಿಯು ಕನ್ನಡ ಬಂಧು ಬಳಗವು||

ಹೆಸರು ಕನ್ನಡ ಉಸಿರು ಕನ್ನಡ ಹರಿವ ರಕ್ತವು ಕನ್ನಡವು||
ಬೇರು ಕನ್ನಡ ಸಾರವು ಕನ್ನಡ ಕುಡಿವ ನೀರದು ಕನ್ನಡವು||
ನಾಡು ಕನ್ನಡ ಬೀಡು ಕನ್ನಡ ಕುಣಿದಾಡೊ ಆಟವು ಕನ್ನಡವು|
ಬಾನು ಕನ್ನಡ ಭುವಿಯು ಕನ್ನಡ ಸಪ್ತ ಸಾಗರ ಕನ್ನಡವು||

ಜಾತಿಬೇಧ ಇಲ್ಲದ ಪಾಠ ಕಲಿಯುವೆ ಕನ್ನಡದಿ|
ಕನ್ನಡ ಗಂಗೆಯ ನೀರನು ರುಡಿದು ಆಡುವೆ ಮಾತ ಕನ್ನಡದಿ||
ಕನ್ನಡನಾಡಿನ ಹೊನ್ನಿನ ತೇರ ಎಳೆಯುವ ನಾವು ಕನ್ನಡದಿ|
ಕನ್ನಡವೆಂಬ ಸಂಗೀತದ ಕಹಳೆ ನುಡಿಸುವ ನಾವು ಕನ್ನಡದಿ||

– ಪ್ರಸ್ತುತಿಃ-ಗೋಪಾಲಕೖಷ್ಣ ಭಟ್.ಕಟ್ಟತ್ತಿಲ

Related posts

ಕವನ: ಕನಸು, ಆಗು ನನಸು

Upayuktha

ಕವನ: ಬದುಕ ಕಲಿಸಿದ ತಾಯಿ

Upayuktha

ಆಶುಕವನ: ಮಾತೆ ಮಮತೆ

Upayuktha

Leave a Comment

error: Copying Content is Prohibited !!