ಕಲೆ-ಸಾಹಿತ್ಯ ಜಿಲ್ಲಾ ಸುದ್ದಿಗಳು

ಕಾಂತಾವರ ಕನ್ನಡದ ಸಂಘದ 2020 ಪ್ರಶಸ್ತಿಗಳಿಗೆ ಕೆ.ಪಿ. ರಾವ್‌, ಕೆ.ಎಲ್ ಕುಂಡಂತಾಯ ಆಯ್ಕೆ

ಕಾರ್ಕಳ: ಕಾಂತಾವರ ಕನ್ನಡ ಸಂಧ ವತಿಯಿಂದ ನೀಡುವ ಎರಡು ಪ್ರಮುಖ ಪ್ರಶಸ್ತಿಗಳಿಗೆ ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಕೆ.ಪಿ. ರಾವ್ ಮತ್ತು ಹಿರಿಯ ಜಾನಪದ ವಿದ್ವಾಂಸ ಮತ್ತು ಚಿಂತಕ ಕೆ.ಎಲ್ ಕುಂಡಂತಾಯ ಆಯ್ಕೆಯಾಗಿದ್ದಾರೆ.

ಕರ್ನಾಟಕ ಏಕೀಕರಣದ ನೇತಾರ ಕೆ.ಬಿ ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕರತಿಕ ಪ್ರಶಸ್ತಿಗೆ ಕೆ.ಪಿ ರಾವ್ ಆಯ್ಕೆಯಾಗಿದ್ದಾರೆ. ಮತ್ತು ಭಾಷಾ ವಿಜ್ಞಾನ ಡಾ. ಯಿ.ಪಿ ಉಪಾಧ್ಯಾಯರ ಹೆಸರಿನಲ್ಲಿ ನೀಡಲಾಗುವ ಮಹೋಪಾಧ್ಯಾಯ ಪ್ರಶಸ್ತಿಗೆ ಕೆ.ಎಲ್ ಕುಂಡಂತಾಯ ಅವರು ಭಾಜನರಾಗಿದ್ದಾರೆ.

ಕನ್ನಡ ಸಂಘದ ಅಧ್ಯಕ್ಷ ನಿರಂಜನ ಮೊಗಸಾಲೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2020 ಸಾಲಿನ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.

ಪ್ರಶಸ್ತಿಗಳು ತಲಾ 10,000 ರೂ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಗಳನ್ನು ಡಿಸೆಂಬರ್‌ನಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಡುಪಿ: ಕುಂಜೂರು ಶ್ರೀ ದುರ್ಗಾ ಸೇವಾ ಸಮಿತಿ ಉದ್ಘಾಟನೆ

Upayuktha

ಹೂವಿನ ಬೆಳೆಗಾರರಿಗೆ ಹೆಕ್ಟೇರಿಗೆ ಗರಿಷ್ಠ 25,000 ರೂ ಪರಿಹಾರ: ಅರ್ಜಿ ಆಹ್ವಾನ

Upayuktha

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ, ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ಸಿದ್ದತೆ: ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್

Upayuktha