ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇತ್ತೀಚೆಗೆ ಜನಿಸಿದ ಆನೆಮರಿಗೆ ನಾಮಕರಣ ಕಾರ್ಯಕ್ರಮ ಇಂದು ನಡೆಯಿತು.
ಧರ್ಮಸ್ಥಳದ ಆನೆ ಲಕ್ಷ್ಮಿ ಜುಲೈ 1ರಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂದಿನ ತುಲಾ ಲಗ್ನ ಮುಹೂರ್ತದಲ್ಲಿ ಆನೆ ಮರಿಗೆ ಶ್ರೀ ಮಂಜುನಾಥನ ಪ್ರಸಾದ ನೀಡಿ, ಕೊರಳಿಗೆ ಗಂಟೆ ಕಟ್ಟಿ ನಾಮಕರಣ ವಿಧಿಯನ್ನು ಪೂರೈಸಿದರು.
ಹೆಗ್ಗಡೆಯವರ ಮೊಮ್ಮಗಳು ಮಾನ್ಯ ಆನೆಮರಿಗೆ ಶಿವಾನಿ ಎಂದು ಹೆಸರನ್ನು ಘೋಷಿಸುವ ಮೂಲಕ ನಾಮಕರಣ ಮಾಡಿದಳು.
ಬಳಿಕ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮಸ್ಥಳದಲ್ಲಿ ಜಾತ್ರೆ, ಉತ್ಸವ ಮೆರವಣಿಗೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಗಜ ಸೇವೆಯನ್ನು ಬಳಸುವುದು ಸಂಪ್ರದಾಯವಾಗಿದೆ. ಈಗಾಗಲೇ ಲತಾ ಮತ್ತು ಲಕ್ಷ್ಮಿ ಎಂಬ ಎರಡು ಆನೆಗಳಿದ್ದು, 2020 ರ ಜುಲೈ 1ರಂದು ಬುಧವಾರ ಲಕ್ಷ್ಮಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ಆನೆಯ ಮಾವುತರನ್ನು ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಅವರು ಸನ್ಮಾನಿಸಿದರು.
ಸಮಾರಂಭದಲ್ಲಿ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ, ಡಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ, ಸೋನಿಯಾ ಯಶೋವರ್ಮ, ಅಮಿತ್, ಶ್ರದ್ಧಾ ಅಮಿತ್, ವೀರು ವಿ ಶೆಟ್ಟಿ, ದೇವಸ್ಥಾನದ ಪಾರುಪತ್ಯಗಾರ ಪಿ. ಲಕ್ಷ್ಮೀನಾರಾಯಣ ರಾವ್ ಹಾಗೂ ಬಂಧುಗಳು ಪಾಲ್ಗೊಂಡಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.