ರಾಜ್ಯ

ನಮ್ಮ ಮೆಟ್ರೋ ಕಾರ್ಡ್ ವ್ಯಾಲಿಡಿಟಿ ಅವಧಿ ಹೆಚ್ಚಳ

ಬೆಂಗಳೂರು: ಮಹಾಮಾರಿ ಕೊರೊನಾ ಹಾವಳಿ ಜೋರಾಗಿದ್ದು ನಗದು ವಹಿವಾಟು ನಿಯಂತ್ರಿಸುವ ಉದ್ದೇಶದಿಂದ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಕಾರ್ಡ್ ಗಳ ಸಿಂಧುತ್ವ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಳ ಮಾಡಿದೆ.

ಈಗಾಗಲೇ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪ್ರಯಾಣಿಕರಿಗೆ ವಿತರಿಸಿರುವ ಸ್ಮಾರ್ಟ್‌ಕಾರ್ಡ್‌ ಅಥವಾ ನಮ್ಮ ಮೆಟ್ರೋ ಕಾರ್ಡ್ ವ್ಯಾಲಿಡಿಟಿ ಅವಧಿಯನ್ನು 10 ವರ್ಷಕ್ಕೆ ಏರಿಕೆ ಮಾಡಿದ್ದು, 2030ರ ಸೆಪ್ಟೆಂಬರ್‌ವರೆಗೂ ಕಾರ್ಡ್ ಅನ್ನು ಪ್ರಯಾಣಿಕರು ಬಳಕೆ ಮಾಡಬಹುದು ಎಂದು ಹೇಳಿದೆ.

ಹಾಗೆಯೇ ಪ್ರಸ್ತುತ ವರ್ಷ ಮುಕ್ತಾಯಗೊಂಡಿರುವ ಸ್ಮಾರ್ಟ್‌ಕಾರ್ಡ್‌ಗಳನ್ನು ಪುನರ್‌ ಸಕ್ರಿಯಗೊಳಿಸಲು ಯಾವುದೇ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಯಿಲ್ಲ ಎಂದೂ ನಿಗಮ ಸ್ಪಷ್ಟಪಡಿಸಿದೆ. ಈ ಹಿಂದೆಯೇ ಕಾರ್ಡ್‌ಗಳ ಊರ್ಜಿತತೆ ಅಥವಾ ಸಿಂಧುತ್ವ ಒಂದು ವರ್ಷದಾಗಿತ್ತು.

ಇವುಗಳನ್ನು ಮೆಟ್ರೊ ನಿಲ್ದಾಣಗಳಲ್ಲಿಯೇ ಪುನರ್‌ ಕ್ರಿಯಗೊಳಿಸಬೇಕಾಗಿತ್ತು. ಹೀಗಾಗಿ ಕಾರ್ಡ್ ಪುನರ್ ಸಕ್ರಿಯಗೊಳಿಸಲು ಮೆಟ್ರೋ ನಿಲ್ದಾಣಗಳಲ್ಲಿ ಜನರ ಗುಂಪು ಬಂದು ಸಾಲಲ್ಲಿ ನಿಲ್ಲಬೇಕಿತ್ತು. ಇದರಿಂದ ನಿಲ್ದಾಣಗಳಲ್ಲಿ ಜನರ ಹಿಂಡು ನಿಲ್ಲುತ್ತಿತ್ತು. ಇದರಿಂದ ಪ್ರಯಾಣಿಕರೂ ಕೂಡ ಸಮಸ್ಯೆ ಎದುರಾಗುತ್ತಿತ್ತು.

ನಗದು ವಹಿವಾಟು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಜನರ ಗುಂಪು ನಿಯಂತ್ರಿಸುವ ಉದ್ದೇಶದಿಂದ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಕಾರ್ಡ್ ಗಳ ಸಿಂಧುತ್ವ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಳ ಮಾಡಿದೆ.

ಸ್ಮಾರ್ಟ್‌ಕಾರ್ಡ್‌ಗಳ ರಿಚಾರ್ಜ್‌ಗೂ ವಿವಿಧ ಆಯ್ಕೆಗಳನ್ನು ನೀಡಿರುವ ಬಿಎಂಆರ್‌ಸಿಎಲ್, ನಿಗಮದ ವೆಬ್‌ಸೈಟ್, ನೆಟ್‌ ಬ್ಯಾಂಕಿಂಗ್ ಮತ್ತು ನಿಗಮದ ಮೊಬೈಲ್‌ ಆ್ಯಪ್‌ ಮೂಲಕವೂ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ.

Related posts

ಕರ್ನಾಟಕದಲ್ಲಿ ಇಂದು 100 ಕೊರೊನಾ ಪ್ರಕರಣಗಳು ಪತ್ತೆ; ಉಡುಪಿ-3, ದ.ಕ-3

Upayuktha

ಲಾಕ್ ಡೌನ್ ವಿಸ್ತರಣೆ ಹಿನ್ನೆಲೆ: ರಾಜ್ಯ ಹೈಕೋರ್ಟ್ ಅಧಿಸೂಚನೆಯ ವಿವರಗಳು

Upayuktha

ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಕಡಲ ನಗರಿಯಲ್ಲಿ ಭರದ ಸಿದ್ಧತೆ

Upayuktha

Leave a Comment