ಚೆಲುವೆಯವಳು ಸುಂದರ ಮೊಗದ ಚಂದಿರ ವದನೆ, ಕಣ್ಸೆಳೆಯೋ ಚಂಚಲೆ,
ಮನಸೆಳೆಯೋ ಮದನೆ..
ನಡಕೆಯಲಿ ಮಂದಗಮನೇ, ಮುತ್ತಂತ ಮಾತುಗಳಲೆ ತೂಕವಿರುವಾಕೆ, ಬಲು ಅಪರೂಪ ನನ್ನಾಕೆ..
ಸುಂದರಿ ನನ್ನಾಕೆ, ಮಾತಿನಲು ಮುಗುಳ್ನಗುವ ಸೂಸುವ ಗುಣದಾಕೆ, ಅರೆಬಿರಿದ ಕೆಂದುಟಿಯಲಿ ನಕ್ಕಾಗ ಮಲ್ಲಿಗೆ ಹೂವಂತೆ..
ಕಾಡುಕಪ್ಪು ಕೇಶರಾಶಿಯಾಕೆ, ನಾಗರಹಾವಿನ ಜಡೆಯಾಕೆ, ಮುನಿಸಿಕೊಂಡಾಗಲೂ ಮುದ್ದು ಮಾಡಬೇಕೆನಿಸುವಷ್ಟು ಸುಂದರಿಯಾಕೆ..
ಅತ್ತಾಗ ಮುಗ್ಧ ಮಗುವಂತೆ, ಹೃದಯವಳದು ಕೋಮಲವಾದ ಹತ್ತಿಯಂತೆ, ಅವಳೆನ್ನವಳು ಎನ್ನುವುದೇ ನನಗೆ ಹೆಮ್ಮೆ.
ಏನೆಂದು ವರ್ಣಿಸಲಿ ನನ್ನವಳ,
ಪದಗಳಿಗೆ ಸಿಗದವಳು, ವರ್ಣಿಸಲು ಪದಗಳೇ ಇಲ್ಲದವಳು, ಸುಂದರಿ ನನ್ನಾಕೆ ಸುಂದರಿ..
*✍ನಾಗಶ್ರೀ. ಎಸ್. ಭಂಡಾರಿ*
*ಮೂಡುಬಿದಿರೆ*