
ನನ್ನೆದೆಯ ಕನಸದು
ತೇಲಿಬರುವ ದೋಣಿ
ಮಗುಚದಿರಿ ಅಲೆಗಳೇ
ನಿಮ್ಮ ಸಿಟ್ಟ ತೋರಿ.
ಭಾವನೆಗಳ ಒಡಲು
ನನ್ನೆದೆಯ ಕಡಲು
ಬರಿದಾಗಿಸದೆ
ಬಾಳ ಗಂಗೆಯ ತುಂಬಿಸಿ
ಆಸೆ ಎಂಬ ದೋಣಿ ಏರಿ
ಸವಿ ಜೇನ ಸವಿಯ ತುಂಬಿ
ಎಡೆಯಲ್ಲಿಂದು ಮೌನ ದುಂಬಿ
ಹಾಡಿದೆ ಕನಸ ಗೂಡ ಕಟ್ಟಿ.
ಇರುಳ ಸೆರಗಿನ ಜಾಡು ಸರಿಸಿ
ಹೊರಟಿದೆ ನನ್ನ ಪಯಣ
ಕನಸನೂರಿನ ಬೆನ್ನ ತಟ್ಟಿ
ನನಸಾಗಲೆಂದು ನೀವು ಹರಸಿ.
ಡಾ.ಅರವಿಂದ್ ಎನ್ ಪಿ (ಅನಪು)